ಈ ವಾರ 'ರೇಸ್'ಗೆ ಇಳಿಯಲಿದ್ದಾರೆ ಬಿಗ್ ಬಾಸ್ ದಿವಾಕರ್
ಬಿಗ್ ಬಾಸ್ ಕನ್ನಡ ಸೀಸನ್ 5 ರನ್ನರ್ ಅಪ್ ಸ್ಪರ್ಧಿ ದಿವಾಕರ್ ಅಭಿನಯದ ಮೊದಲ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಕುತೂಹಲ ಮೂಡಿಸಿದ್ದ 'ರೇಸ್' ಈ ವಾರ (ಮೇ 24) ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.
ಈ ಚಿತ್ರದ ಮೂಲಕ ಸೇಲ್ಸ್ ಮ್ಯಾನ್ ದಿವಾಕರ್ ನಾಯಕನಟನಾಗಿ ಸ್ಯಾಂಡಲ್ ವುಡ್ ಗೆ ಅಧಿಕೃತವಾಗಿ ಪರಿಚಯವಾಗ್ತಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ರೇಸ್ ಸಿನಿಮಾ ಭರವಸೆ ಹುಟ್ಟುಹಾಕಿದೆ.

ಅಂದ್ಹಾಗೆ, ಈ ಸಿನಿಮಾ ನಿರ್ದೇಶನ ಮಾಡಿರುವುದು ತೆಲುಗು ಮೂಲದ ಹೇಮಂತ್ ಕೃಷ್ಣ. ಒಂದು ದಶಕದಿಂದ ತೆಲುಗು ಇಂಡಸ್ಟ್ರಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹೇಮಂತ್, ಕನ್ನಡದಲ್ಲಿ ತಮ್ಮ ಚೊಚ್ಚಲ ಸಿನಿಮಾ ಮಾಡಿರುವುದು ವಿಶೇಷ.
ಎಸ್.ವಿ.ಆರ್ ಬ್ಯಾನರ್ ನಲ್ಲಿ ವೆಂಕಟರಾವ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಂಡಿದ್ದು, ಸಂತೋಷ್ ಮತ್ತು ನಕುಲ್ ಗೋವಿಂದ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಾಣ ಕೊಡುವೆ ಖ್ಯಾತಿಯ ರಕ್ಷಾ ಶೆಣೈ ರೇಸ್ ಮತ್ತು ಶ್ರುತಿ ಚಿತ್ರಕ್ಕೆ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











