For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?

  |

  'ಬಾಹುಬಲಿ-2' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗತ್ತಾ? ಇಲ್ವಾ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿತ್ತು. ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್ ಕ್ಷಮೆ ಕೇಳಿದ ಬಳಿಕ ಯಾವುದೇ ಅಡ್ಡಿ ಆತಂಕವಿಲ್ಲದೆ ತೆರೆಗೆ ಬರಲು ಸಜ್ಜಾಗಿದೆ.

  'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕ ಅತಿ ಮುಖ್ಯ. ಯಾಕಂದ್ರೆ, ಬಿಜಿನೆಸ್ ವಿಚಾರದಲ್ಲಿ ಆಂಧ್ರ ಪ್ರದೇಶವನ್ನ ಬಿಟ್ಟರೇ, ಕರ್ನಾಟದಲ್ಲೇ ಅತಿ ಹೆಚ್ಚು ಕಲೆಕ್ಷನ್ ಆಗುವುದು. ಸದ್ಯ 'ಬಾಹುಬಲಿ-2' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಒಂದು ಟಿಕೆಟ್ ಬೆಲೆ ಎಷ್ಟು ಅಂತ ಕೇಳಿದ್ರೆ ನೀವು ಕೂತಲ್ಲೇ ಶಾಕ್ ಆಗ್ತೀರಾ.!

  ಬೆಂಗಳೂರಿನ ಯಾವ ಯಾವ ಚಿತ್ರಮಂದಿರಗಳಲ್ಲಿ 'ಬಾಹುಬಲಿ-2' ರಿಲೀಸ್ ಆಗ್ತಿದೆ? ಟಿಕೆಟ್ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳಲು ಮುಂದೆ ಓದಿ.....

  'ಬಾಹುಬಲಿ' ಬುಕ್ಕಿಂಗ್ ಶುರು!

  'ಬಾಹುಬಲಿ' ಬುಕ್ಕಿಂಗ್ ಶುರು!

  ಕರ್ನಾಟಕದಲ್ಲಿ ಕಟ್ಟಪ್ಪನ ವಿವಾದ ಬಗೆಹರಿಯುತ್ತಿದ್ದಂತೆ, 'ಬಾಹುಬಲಿ-2' ಮೇನಿಯಾ ಶುರುವಾಗಿದೆ. ಈಗಾಗಲೇ ಆನ್ ಲೈನ್ ನಲ್ಲಿ ಬುಕ್ಕಿಂಗ್ ಶುರುವಾಗಿದ್ದು, ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ.

  ಟಿಕೆಟ್ ಬೆಲೆ ಎಷ್ಟು ಗೊತ್ತಾ?

  ಟಿಕೆಟ್ ಬೆಲೆ ಎಷ್ಟು ಗೊತ್ತಾ?

  ಸದ್ಯ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ ಬುಕ್ಕಿಂಗ್ ಅವಕಾಶ ನೀಡಲಾಗಿದ್ದು, ಒಂದು ಟಿಕೆಟ್ ಬೆಲೆ ಬರೋಬ್ಬರಿ 500 ರಿಂದ 600 ರೂಪಾಯಿಗಳಿಗೆ ಮಾರಾಟ ಮಾಡಲಾಗ್ತಿದೆ. ಟಿಕೆಟ್ ಬೆಲೆ ದುಬಾರಿ ಎನಿಸಿದ್ರೂ ಬಿಸಿ ಬಿಸಿ ಜಿಲೇಬಿಯಂತೆ 'ಬಾಹುಬಲಿ-2' ಟಿಕೆಟ್ ಗಳು ಮಾರಾಟ ಆಗುತ್ತಿವೆ.

  ಸೋಲ್ಡ್ ಔಟ್!

  ಸೋಲ್ಡ್ ಔಟ್!

  ಬುಕ್ಕಿಂಗ್ ಓಪನ್ ಮಾಡಿದ ಕೆಲವೇ ಗಂಟೆಗಳಲ್ಲಿ ಬಹುತೇಕ ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ. ಅದರಲ್ಲೂ ಶನಿವಾರ ಮತ್ತು ಭಾನುವಾರದ ಶೋಗಳಿಗೆ ಟಿಕೆಟ್ ಸಿಗುವುದೇ ಕಷ್ಟ ಆಗಿದೆ.

  ದಾಖಲೆ ಚಿತ್ರಮಂದಿರಗಳಲ್ಲಿ 'ಬಾಹುಬಲಿ-2 ಎಂಟ್ರಿ!

  ದಾಖಲೆ ಚಿತ್ರಮಂದಿರಗಳಲ್ಲಿ 'ಬಾಹುಬಲಿ-2 ಎಂಟ್ರಿ!

  ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 'ಬಾಹುಬಲಿ-2' ಸಿನಿಮಾ ಬಿಡುಗಡೆಯಾಗುತ್ತಿದ್ದು, ದೇಶಾದ್ಯಂತ 6500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗುತ್ತಿದೆ. ಇನ್ನೂ ವಿಶೇಷ ಅಂದ್ರೆ ಕರ್ನಾಟಕದಲ್ಲೇ ಸುಮಾರು 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

  ಏಪ್ರಿಲ್ 28ಕ್ಕೆ ರಿಲೀಸ್

  ಏಪ್ರಿಲ್ 28ಕ್ಕೆ ರಿಲೀಸ್

  'ಬಾಹುಬಲಿ-2' ಚಿತ್ರಕ್ಕೆ ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್ ಹೇಳಿದ್ದು, ಪ್ರಭಾಸ್, ರಾಣಾ, ತಮನ್ನ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ ಸೇರಿದಂತೆ ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದೇ ವಾರ ಅಂದ್ರೆ ಏಪ್ರಿಲ್ 28 ರಂದು 'ಬಾಹುಬಲಿ-2' ಜಗತ್ತಿನಾದ್ಯಂತ ಅಬ್ಬರಿಸಲಿದೆ.

  English summary
  Baahubali 2 Will Be Releasing on April 28th. The Movie has Huge Demand in Banglore and Tickets Booking Have Begun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X