For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ವಿರುದ್ಧ ಆಕ್ರೋಶ: 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಚೊಚ್ಚಲ ಬಾರಿಗೆ ತೆರೆ ಹಂಚಿಕೊಂಡಿರುವ ಸಿನಿಮಾ 'ದೊಡ್ಮನೆ ಹುಡ್ಗ' ಇದೇ ಶುಕ್ರವಾರ (ಸೆಪ್ಟೆಂಬರ್ 30) ಬಿಡುಗಡೆ ಆಗಲಿದೆ.

  ಹೇಳಿ ಕೇಳಿ 'ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ರವರ 25ನೇ ಸಿನಿಮಾ. ಹೀಗಾಗಿ, ಸೆಪ್ಟೆಂಬರ್ 30 ರಂದು 'ದೊಡ್ಡ' ಹಬ್ಬ ಆಚರಿಸಲು ಅಪ್ಪು ಅಭಿಮಾನಿಗಳು ಸಕಲ ತಯಾರಿ ಮಾಡಿಕೊಂಡಿದ್ದಾರೆ. [ಕ್ರೇಜ್ ಅಂದ್ರೆ ಇದಪ್ಪಾ.! 'ಬುಕ್ ಮೈ ಶೋ'ನಲ್ಲಿ 'ದೊಡ್ಮನೆ' ದರ್ಬಾರ್]

  ಈಗಾಗಲೇ ಬೆಂಗಳೂರಿನಾದ್ಯಂತ 'ದೊಡ್ಮನೆ ಹುಡ್ಗ'ನ ಹವಾ ಶುರು ಆಗಿದೆ. ಬೆಂಗಳೂರಿನ ಮೂಲೆ ಮೂಲೆಯಲ್ಲಿರುವ ಎಲ್ಲಾ ಥಿಯೇಟರ್ ಗಳಲ್ಲೂ ಪುನೀತ್, ಅಂಬರೀಶ್ ರವರ ಬೃಹತ್ ಕಟೌಟ್ ಗಳನ್ನ ನಿಲ್ಲಿಸಲಾಗಿದೆ. ಆದ್ರೆ, ಇಂತಹ ಸೇಮ್ ಟು ಸೇಮ್ ಹವಾ ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಇಲ್ಲ ಎನ್ನುವುದೇ ಸದ್ಯದ ಸೆನ್ಸೇಷನಲ್ ನ್ಯೂಸ್. ಮುಂದೆ ಓದಿ....

  ಮಂಡ್ಯದಲ್ಲಿ ಇಲ್ಲ 'ದೊಡ್ಮನೆ ಹುಡ್ಗ'ನ ಕ್ರೇಜ್.!

  ಮಂಡ್ಯದಲ್ಲಿ ಇಲ್ಲ 'ದೊಡ್ಮನೆ ಹುಡ್ಗ'ನ ಕ್ರೇಜ್.!

  ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ'ನ ಮೇನಿಯಾ, ಮಾಸ್ ಹಿಸ್ಟೀರಿಯಾ ಇಲ್ಲವೇ ಇಲ್ಲ. ಅದಕ್ಕೆ ಪ್ರಮುಖ ಕಾರಣ ರೆಬೆಲ್ ಸ್ಟಾರ್ ಅಂಬರೀಶ್ ಎಂದರೆ ನೀವು ನಂಬಲೇಬೇಕು. ['ದೊಡ್ಮನೆ ಹುಡ್ಗ'ನ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಅಂಬರೀಶ್ ಪೋಸ್ಟರ್ ಕಂಡ್ರೆ ಬೆಂಕಿ ಇಡ್ತಾರೆ.!

  ಅಂಬರೀಶ್ ಪೋಸ್ಟರ್ ಕಂಡ್ರೆ ಬೆಂಕಿ ಇಡ್ತಾರೆ.!

  ಮಂಡ್ಯ ಕ್ಷೇತ್ರದ ಶಾಸಕರಾಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಮೇಲೆ ಮಂಡ್ಯ ಜನತೆ ಕೋಪಿಸಿಕೊಂಡ್ದಾರೆ. ಹೀಗಾಗಿ, 'ದೊಡ್ಮನೆ ಹುಡ್ಗ' ಪೋಸ್ಟರ್ ನಲ್ಲಿ ಅಂಬರೀಶ್ ಕಂಡುಬಂದರೆ ಮುಲಾಜಿಲ್ಲದೇ ಹರಿದು ಹಾಕಿ, ಬೆಂಕಿ ಹಚ್ಚುತ್ತಿದ್ದಾರೆ.

  'ದೊಡ್ಮನೆ ಹುಡ್ಗ' ಪೋಸ್ಟರ್ ಗಳಿಂದ ಅಂಬಿ ಔಟ್

  'ದೊಡ್ಮನೆ ಹುಡ್ಗ' ಪೋಸ್ಟರ್ ಗಳಿಂದ ಅಂಬಿ ಔಟ್

  ಮಂಡ್ಯದಲ್ಲಿ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ, ಅಂಬರೀಶ್ ಇಲ್ಲದ 'ದೊಡ್ಮನೆ ಹುಡ್ಗ' ಚಿತ್ರದ ಪೋಸ್ಟರ್ ಗಳನ್ನ ಮಾತ್ರ ಪ್ರಚಾರಕ್ಕೆ ಬಳಸಲಾಗಿದೆ.

  ಸಂಜಯ್ ಥಿಯೇಟರ್ ನಲ್ಲಿ ಅಂಬಿ ಕಟೌಟ್ ಇಲ್ಲ.!

  ಸಂಜಯ್ ಥಿಯೇಟರ್ ನಲ್ಲಿ ಅಂಬಿ ಕಟೌಟ್ ಇಲ್ಲ.!

  ಇದೇ ಶುಕ್ರವಾರ ಮಂಡ್ಯದ ಸಂಜಯ್ ಥಿಯೇಟರ್ ನಲ್ಲಿ 'ದೊಡ್ಮನೆ ಹುಡ್ಗ' ಸಿನಿಮಾ ಪ್ರದರ್ಶನ ಆಗಲಿದೆ. ಹೀಗಾಗಿ, ಸಂಜಯ್ ಚಿತ್ರಮಂದಿರದಲ್ಲಿ ಪುನೀತ್ ರಾಜ್ ಕುಮಾರ್ ರವರ ಕಟೌಟ್ ನ ಮಾತ್ರ ನಿಲ್ಲಿಸಲಾಗಿದೆ. ಅಂಬರೀಶ್ ರವರ ಕಟೌಟ್ ಗೆ ಕೊಕ್ ನೀಡಲಾಗಿದೆ.

  ಇದೇ ಸಂಜಯ್ ಥಿಯೇಟರ್ ನಲ್ಲಿ ನಡೆದ ಘಟನೆ....

  ಇದೇ ಸಂಜಯ್ ಥಿಯೇಟರ್ ನಲ್ಲಿ ನಡೆದ ಘಟನೆ....

  ಕೆಲವೇ ದಿನಗಳ ಹಿಂದೆಯಷ್ಟೇ ಇದೇ ಸಂಜಯ್ ಥಿಯೇಟರ್ ನಲ್ಲಿ 'ಹ್ಯಾಪಿ ಬರ್ತಡೇ' ಚಿತ್ರದಲ್ಲಿನ ಅಂಬರೀಶ್ ರವರ ಕಟೌಟ್ ನ ಚೂರು ಚೂರಿ ಮಾಡಿ ಮಂಡ್ಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ 'ದೊಡ್ಮನೆ ಹುಡ್ಗ' ಚಿತ್ರತಂಡ ಎಚ್ಚರ ವಹಿಸಿದೆ.

  ಅಂಬರೀಶ್ ಮೇಲೆ ಯಾಕೆ ಅಷ್ಟು ಕೋಪ?

  ಅಂಬರೀಶ್ ಮೇಲೆ ಯಾಕೆ ಅಷ್ಟು ಕೋಪ?

  ಕಳೆದ ಮೂರ್ನಾಲ್ಕು ವಾರಗಳಿಂದ ಕಾವೇರಿ ಹೋರಾಟ ನಡೆಯುತ್ತಿದ್ದರೂ, ಮಂಡ್ಯದತ್ತ ಅಂಬರೀಶ್ ಮುಖ ಮಾಡಿಲ್ಲ. ಮಂಡ್ಯ ಕ್ಷೇತ್ರದ ಶಾಸಕರಾಗಿದ್ದರೂ ಅಂಬರೀಶ್ ರವರ ಈ ನಿರ್ಲಕ್ಷ್ಯ ಕಂಡು ಮಂಡ್ಯ ಜನತೆ ಕುಪಿತಗೊಂಡಿದ್ದಾರೆ.

  'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ

  'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ

  ಅಂಬರೀಶ್ ರವರಿಂದಾಗಿ ಮಂಡ್ಯ, ಮೈಸೂರಿನಲ್ಲಿ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ ಅಚ್ಚರಿ ಪಡಬೇಡಿ.

  ಬೆಂಗಳೂರಿನಲ್ಲಿ ಹಬ್ಬ

  ಬೆಂಗಳೂರಿನಲ್ಲಿ ಹಬ್ಬ

  'ದೊಡ್ಮನೆ ಹುಡ್ಗ' ಪ್ರದರ್ಶನ ಆಗಲಿರುವ ಬೆಂಗಳೂರಿನ ಎಲ್ಲಾ ಥಿಯೇಟರ್ ಗಳಲ್ಲೂ ಅಂಬರೀಶ್, ಪುನೀತ್, ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ರವರ ಬೃಹತ್ ಕಟೌಟ್ ಗಳನ್ನ ನಿಲ್ಲಿಸಲಾಗಿದೆ.

  English summary
  In fear of protests from Mandya farmers and Kannada Activists, 'Dodmane Hudga' team has displayed Movie posters without Kannada Actor, Rebel Star, Congress Politician, MLA Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X