»   » 'ದೊಡ್ಮನೆ ದರ್ಬಾರ್' ಮೊದಲ ಶೋ ನೋಡಿದವರ ಟ್ವೀಟ್ ವಿಮರ್ಶೆ

'ದೊಡ್ಮನೆ ದರ್ಬಾರ್' ಮೊದಲ ಶೋ ನೋಡಿದವರ ಟ್ವೀಟ್ ವಿಮರ್ಶೆ

Posted By:
Subscribe to Filmibeat Kannada

ಕೊನೆಗೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ದೇವರುಗಳ ಕಾಯುವಿಕೆಗೆ ಇಂದು ಮುಂಜಾನೆಯಿಂದಲೇ (ಸೆಪ್ಟೆಂಬರ್ 30) ಬ್ರೇಕ್ ಬಿದ್ದಿದೆ. ನಿರ್ದೇಶಕ ದುನಿಯಾ ಸೂರಿ ಮತ್ತು ಪುನೀತ್ ರಾಜ್ ಕುಮಾರ್ ಅವರ ಹ್ಯಾಟ್ರಿಕ್ ಕಾಂಬಿನೇಷನ್ ನ 25ನೇ ಚಿತ್ರ 'ದೊಡ್ಮನೆ ಹುಡ್ಗ' ಇಡೀ ವಿಶ್ವದಾದ್ಯಂತ ಭರ್ಜರಿಯಾಗಿ ಬೆಳ್ಳಿ ತೆರೆಗೆ ಅಪ್ಪಳಿಸಿದೆ.

ಇನ್ನು ಬೆಂಗಳೂರು ಮೆಜೆಸ್ಟಿಕ್ ಬಳಿ ಇರುವ 'ನರ್ತಕಿ' ಚಿತ್ರಮಂದಿರದಲ್ಲಿ 'ದೊಡ್ಮನೆ ದರ್ಬಾರ್' ಬಹಳ ಜೋರಾಗಿದ್ದು, ಬೆಳಗ್ಗೆ 7.30ಕ್ಕೆ ಮೊದಲ ಪ್ರದರ್ಶನ ಆರಂಭವಾಗಿದೆ. ಅಭಿಮಾನಿಗಳು ಬಹಳ ಸಂಭ್ರಮದಿಂದ 'ದೊಡ್ಮನೆ ಹುಡುಗ'ನನ್ನು ಬರಮಾಡಿಕೊಂಡಿದ್ದು, ಎದ್ದೆನೋ-ಬಿದ್ದೆನೋ ಅಂತ ಸಿನಿಮಾ ನೋಡಲು ಚಿತ್ರಮಂದಿರದತ್ತ ದೌಡಾಯಿಸುತ್ತಿದ್ದಾರೆ.


ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜುಗಲ್ ಬಂದಿಯೇ ಈ ಇಡೀ ಸಿನಿಮಾದ ಹೈಲೈಟ್. ಜೊತೆಗೆ ನಟಿ ರಾಧಿಕಾ ಪಂಡಿತ್ ಅವರು ಸತತ ಎರಡನೇ ಬಾರಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದು, ಈ ಚಿತ್ರದಲ್ಲಿ ದ್ವಿಪಾತ್ರ ವಹಿಸಿದ್ದಾರೆ ಅನ್ನೋದು ಮತ್ತೊಂದು ಹೈಲೈಟ್.['ದೊಡ್ಮನೆ ಹುಡ್ಗ' ನೋಡೋರಿಗೆ ಬಿರಿಯಾನಿ, 'ರಾಜ್‌ಕುಮಾರ್' ಲಾಡು ಫ್ರೀ!]


'ದೊಡ್ಮನೆ ಹುಡುಗ'ನನ್ನು ಅಭಿಮಾನಿಗಳು ಯಾವ ಪರಿ ಬರಮಾಡಿಕೊಂಡರು, ಮತ್ತು 'ದೊಡ್ಮನೆ ಹಬ್ಬ'ದ ಕೆಲವು ಪ್ರಮುಖ ಅಂಶಗಳನ್ನು ನೋಡಲು ಮುಂದೆ ಓದಿ....


ನರ್ತಕಿಯಲ್ಲಿ ರಂಗೇರಿದ 'ದೊಡ್ಮನೆ ಹುಡ್ಗ'

ಮುಖ್ಯ ಚಿತ್ರಮಂದಿರ, ಮೆಜೆಸ್ಟಿಕ್ ಬಳಿ ಇರುವ 'ನರ್ತಕಿ' ಚಿತ್ರಮಂದಿರದಲ್ಲಿ ಮುಂಜಾನೆಯಿಂದಲೇ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಚಿತ್ರ ಪ್ರದರ್ಶನ ಆರಂಭಕ್ಕೂ ಮುನ್ನ ಅಭಿಮಾನಿಗಳು, ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಗೆ ನೂರೊಂದು ಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಮಾತ್ರವಲ್ಲದೇ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.['ದೊಡ್ಮನೆ ಹುಡ್ಗ'ನ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ]


ಎಂತ ಮಾರಾಯ್ರೆ ಟಿಕೆಟ್ ಸಿಗೋದು ಬಹಳ ಕಷ್ಟ

ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 7.30ಕ್ಕೆ ಶೋ ಆರಂಭವಾಗಿದ್ದು, ಇಂದಿನ 5 ಪ್ರದರ್ಶನದ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ಕರ್ನಾಟಕದಾದ್ಯಂತ ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ದೊಡ್ಮನೆ ಹುಡ್ಗ'ನ ಹವಾ ಶುರುವಾಗಿದೆ.['ದೊಡ್ಮನೆ ಹುಡ್ಗ' ಬುಕ್ಕಿಂಗ್ ಓಪನ್: ಈಗ್ಲೇ ಟಿಕೆಟ್ ಕೊಂಡರೆ ಒಳಿತು.!]


ಸಿನಿಮಾ ನೋಡಲು ಬಂದ 'ದೊಡ್ಮನೆ ಹುಡುಗರು'

ಅಂದಹಾಗೆ ಅಭಿಮಾನಿಗಳ ಜೊತೆ ಸಿನಿಮಾ ನೋಡಲು, ನರ್ತಕಿ ಚಿತ್ರಮಂದಿರಕ್ಕೆ 'ದೊಡ್ಮನೆ ಹುಡುಗರಾದ' ನಟ ವಿನಯ್ ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಸಹೋದರ ಗುರು ರಾಘವೇಂದ್ರ ರಾಜ್ ಕುಮಾರ್ ಅವರು ಈಗಾಗಲೇ ಆಗಮಿಸಿದ್ದಾರೆ. 'ಅಭಿಮಾನಿಗಳ ಜೊತೆ ಚಿಕ್ಕಪ್ಪನ ಸಿನಿಮಾ ನೋಡೋ ಮಜಾನೇ ಬೇರೆ, ಬೆಳಗ್ಗೆ 7.30ರ ಶೋನಲ್ಲಿ ಭೇಟಿಯಾಗೋಣ' ಅಂತ ವಿನಯ್ ರಾಜ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


ರಾಜ್ ಕುಮಾರ್ ಲಾಡು ವಿತರಣೆ

ನಿನ್ನೆ ಮಧ್ಯರಾತ್ರಿಯಿಂದಲೇ ಸಿನಿಮಾ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಚಾಮರಾಜಪೇಟೆಯ ಗಣೇಶ ಅಂಗಡಿಯಿಂದ ಸುಮಾರು 4,500 ಸಾವಿರ ರಾಜ್ ಕುಮಾರ ಸ್ಪೆಷಲ್ ಲಾಡು ಖರೀದಿ ಮಾಡಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಲು ಹೋದ ಅಭಿಮಾನಿಗಳಿಗೆ ಲಾಡು ವಿತರಣೆ ಮಾಡಲಾಗುತ್ತಿದೆ.['ದೊಡ್ಮನೆ' ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!]


ಬಳ್ಳಾರಿಯಲ್ಲಿ ಲಾಠಿ ಚಾರ್ಚ್

ಬಳ್ಳಾರಿಯಲ್ಲಿ ಮುಂಜಾನೆ 12.30ಕ್ಕೆ ಮೊದಲ ಶೋ ಆರಂಭವಾಗಿದೆ. ಹೊಸಪೇಟೆ, ದಾವಣಗೆರೆಯಲ್ಲಿ ಮಧ್ಯರಾತ್ರಿಯಿಂದಲೇ 'ದೊಡ್ಮನೆ ಹುಡ್ಗ'ನ ಅದ್ಧೂರಿ ಪ್ರದರ್ಶನ ಆರಂಭವಾಗಿದೆ. ಈ ನಡುವೆ ಚಿತ್ರಮಂದಿರದ ಒಳನುಗ್ಗಲು ಪ್ರಯತ್ನಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಲೈಟ್ ಆಗಿ ಲಾಠಿ ಚಾರ್ಚ್ ಮಾಡಬೇಕಾಯಿತು.


ಪ್ರಸನ್ನ ಚಿತ್ರಮಂದಿರದಲ್ಲಿ ಕಟೌಟ್ ಕಮಾಲ್

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ, ದಿನದ ಎಲ್ಲಾ ಶೋಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಇನ್ನು ಚಿತ್ರಮಂದಿರದ ಎದುರು ಪುನೀತ್ ರಾಜ್ ಕುಮಾರ್ ಅವರ ಈವರೆಗಿನ ಎಲ್ಲಾ ಚಿತ್ರದ ಕಟೌಟ್ ಗಳು, ಸಿನಿಮಾ ವೀಕ್ಷಕರನ್ನು ಆಕರ್ಷಿಸುತ್ತಿದೆ. ಜೊತೆಗೆ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಕಟೌಟ್ ಕೂಡ ಕೇಂದ್ರ ಬಿಂದು ಆಗಿದೆ. ಚಿತ್ರಮಂದಿರದ ಎದುರು ಅಭಿಮಾನಿಗಳು ಡ್ಯಾನ್ಸ್ ಮಾಡುತ್ತಾ ಸಂಭ್ರಮದಿಂದ ಹಬ್ಬ ಮಾಡುತ್ತಿದ್ದಾರೆ.


ಸಿನಿಲೋಕ ವಿಮರ್ಶೆ

'ದೊಡ್ಮನೆ ಹುಡ್ಗ' ಇಂಟರ್ ವಲ್. ಮೊದಲ ಹಂತದಲ್ಲಿ ಉತ್ತಮ ಟ್ವಿಸ್ಟ್ ಇದೆ. ಇಲ್ಲಿಯವರೆಗೆ ವಿಶಿಷ್ಟ ಸೂರಿಯ ಸ್ಟಫ್. ಸಿನಿಮಾ ತುಂಬಾ ಚೆನ್ನಾಗಿ ಹೋಗುತ್ತಿದೆ. ಹುಬ್ಬಳ್ಳಿ ಡೈಲಾಗ್ ಸಖತ್ ಮಿಂಚಿದೆ. 'ಥ್ರಾಸ್ ಅಕ್ಕತಿ ಈಗ ದೊಡ್ಡ ತೆರೆಯ ಮೇಲೆ ರಾರಾಜಿಸುತ್ತಿದೆ. ಫೈಟ್ ತುಂಬಾ ಚೆನ್ನಾಗಿದೆ. ಬ್ರಿಲಿಯಂಟ್ ಸಾಹಸ..ಇಂಟರ್ ವಲ್ ತನಕ, ಸಖತ್ ಆಗಿ ಎಂಗೇಜ್ ಮಾಡುತ್ತಾ ಹೋಗುತ್ತದೆ. ಪಕ್ಕಾ ಕಮರ್ಷಿಯಲ್ ಮನರಂಜನೆಯುಳ್ಳ ಸಿನಿಮಾ...ಪವರ್ ಸ್ಟಾರ್ ಇಸ್ ಬ್ಯಾಕ್...ರೇಟಿಂಗ್: 3.75.


ನಮ್ ಸಿನಿಮಾ ಟ್ವೀಟ್

'ದೊಡ್ಮನೆ ಹುಡ್ಗ' ಅಗಾಧವಾದ ದಾಖಲೆಯಾಗಿದೆ. ಸೂರಿ ನೀಟಾಗಿ ಒಂದು ಕಮರ್ಷಿಯಲ್ ಮನರಂಜನೆಯನ್ನು ನೀಡಿದ್ದಾರೆ. ರೇಟಿಂಗ್ 4/5.


ಅಭಿಮಾನಿ ಮೌನೇಶ್

'ಮೊದಲ ಭಾಗ ಮುಗಿಯಿತು. ವಾವ್ ಎಂತಹ ಫಾಸ್ಟ್ ಸ್ಕ್ರೀನ್ ಪ್ಲೇ. ಬರೆದಿಟ್ಟುಕೊಳ್ಳಿ ಪಕ್ಕಾ ಇಂಡಸ್ಟ್ರಿ ಹಿಟ್. ಡೈಲಾಗ್ ಕ್ಲಾಸಿ ಮತ್ತು ಮಾಸೀ....'


ನಮ್ ಸಿನಿಮಾ

'ಮೊದಲ ಭಾಗ ಅಸಮಾನ್ಯ ...ರೇಸ್ ನಂತಿದೆ ಚಿತ್ರದ ಸ್ಕ್ರೀನ್ ಪ್ಲೇ..ಪವರ್ ಸ್ಟಾರ್ ಪುನೀತ್ ಅವರ ಅದ್ಭುತ ಸ್ಟಂಟ್. ಅಂಬಿ, ರಾಧಿಕಾ ಪಂಡಿತ್ ಮತ್ತು ರವಿಶಂಕರ್ ಅವರ ನಟನೆ ಅತ್ಯುತ್ತಮ'.


ಅಭಿಮಾನಿ ಶರಣ್

'ಪವರ್ ಸ್ಟಾರ್ ಪರಿಚಯ ದೃಶ್ಯ ಅತ್ಯಂತ ಉತ್ತಮ ಮಾಸ್ ದೃಶ್ಯ. ಅಪ್ಪು ಮತ್ತು ರಾಧಿಕಾ ಪಂಡಿತ್, ರವಿಶಂಕರ್ ಶೈನ್ ಆಗಿದ್ದಾರೆ. ಈ ಚಿತ್ರವನ್ನು ಮತ್ತೆ-ಮತ್ತೆ ನೋಡಬೇಕೆನಿಸುತ್ತದೆ'


English summary
Kannada Movie 'Dodmane Huduga' directed by Duniya Soori, released today (September 30). And got overwhelming response all over Karnataka. Kannada Actor Puneeth Rajkumar, Kannada Actress Radhika Pandith, Actor Ambareesh, Actress Bharathi Vishnuvardhan in the lead role. Here is the first day first show craze, tweets, audience response.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada