»   » ಜಯಂತಿ ಅವರಿಗೆ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ!

ಜಯಂತಿ ಅವರಿಗೆ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 75 ಕ್ಕೂ ಹೆಚ್ಚು ವರ್ಷ ಇತಿಹಾಸವಿರುವ ಅಭಿನಯ ಶಾರದೆ ಬಹುಭಾಷಾ ನಟಿ ಜಯಂತಿ ಅವರನ್ನು 2017 ನೇ ಸಾಲಿನ ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಯಂತಿ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಏಪ್ರಿಲ್ 16 ರಂದು ಭಾರತೀಯ ವಿದ್ಯಾಭವನ್ ನಲ್ಲಿ ಪ್ರದಾನ ಮಾಡಲಾಗುತ್ತದೆ.[ಅಭಿನಯ ಶಾರದೆ ಜಯಂತಿಗೆ ಗೌರವ ಡಾಕ್ಟರೇಟ್]

ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು 2010 ನೇ ಇಸವಿಯಿಂದ ನೀಡಲಾಗುತ್ತಿದ್ದು, ನಟಿ ಅಂಜಲಿ ದೇವಿ, ಜಮುನಾ ರಮಣ ರಾವ್, ಮತ್ತು ಹರಿಣಿ ಎನ್ ರಾವ್ ಮೊದಲನೇ ವರ್ಷದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.

Dr B Saroja Devi National Award to Veteran actress Jayanthi

ಖ್ಯಾತ ಕಲಾವಿದೆ ಡಾ.ವೈಜಯಂತಿಮಾಲಾ ಬಾಲಿ, ಗೀತಪ್ರಿಯಾ, ಹಿರಿಯ ನಟ ಎಸ್ ಶಿವರಾಮ್, ಕೆ.ಎಸ್.ಎಲ್. ಸ್ವಾಮಿ, ಕೆ.ಜೆ.ಯೇಸುದಾಸ್ ಅವರಿಗೆ, 2016 ನೇ ಸಾಲಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಈ ಪ್ರಶಸ್ತಿ ಲಭಿಸಿವೆ. ಈ ಬಾರಿ ಜಯಂತಿ ಅವರು ಪ್ರಶಸ್ತಿಗೆ ಭಾಜನರಾಗಿದ್ದು, ಡಾ.ಬಿ.ಸರೋಜಾ ದೇವಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

English summary
Veteran Kannada actress Jayanthi has been selected for the Padmabhushan Dr B Saroja Devi National Award 2017. The award will be conferred to Jayanthi on the 16th of April at the Bharatiya Vidya Bhavan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada