Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ವರ್ಷಕ್ಕೆ ಪುನೀತ್ ರಾಜ್‌ಕುಮಾರ್ ಶುಭಾಶಯ: ಅಪ್ಪು ಆಡಿಯೋ ವೈರಲ್!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಅವರ ಅಭಿಮಾನಿಗಳಿಗೆ ತುಂಬಲಾರದ ನಷ್ಟ. ಅಪ್ಪು ಸರಳತೆ, ಸಮಾಜಮುಖಿ ಕೆಲಸಗಳು ಇಂದಿಗೂ ಕಣ್ಮುಂದೆಯೇ ಇದೆ. ದೊಡ್ಮನೆ ಕುಡಿ ಮಾಡಿದ ಒಳ್ಳೆ ಕೆಲಸಗಳನ್ನು ಕನ್ನಡಿಗರು ಯಾರೂ ಮರೆಯಲು ಸಾಧ್ಯವೇ ಇಲ್ಲ.
ಕೊನೆ ಕೊನೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ ಸಿನಿಮಾಗಳಲ್ಲೂ ಅಷ್ಟೇ ಸಮಾಜಿಕ ಸಂದೇಶ ಇದ್ದೇ ಇರುತ್ತಿತ್ತು. 'ರಾಜಕುಮಾರ', 'ಯುವರತ್ನ'ದಂತಹ ಸಿನಿಮಾಗಳು ಸಮಾಜಕ್ಕೆ ಒಂದೊಳ್ಳೆ ಸಂದೇಶಗಳನ್ನು ನೀಡಿದ್ದವು. ಹೀಗಾಗಿ ಅಪ್ಪು ಧ್ವನಿ ಕೇಳಿದರೆ ಸಾಕು ಅವರ ಅಭಿಮಾನಿಗಳು ಭಾವುಕರಾಗುತ್ತಾರೆ.
ಇನ್ನೇನು ಹೊಸ ವರ್ಷ ಬಂದೇ ಬಿಡ್ತು. ಹಳೆಯದನ್ನೆಲ್ಲ ಮರೆತು ಹೊಸ ಹುರುಷಿನೊಂದಿಗೆ ನ್ಯೂ ಇಯರ್ ಅನ್ನು ವೆಲ್‌ಕಮ್ ಮಾಡೋಕೆ ಸಜ್ಜಾಗಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ಹೊಸ ವರ್ಷಕ್ಕೆ ಶುಭಕೋರಿದ ಆಡಿಯೋ ವೈರಲ್ ಆಗುತ್ತಿದೆ.

ನ್ಯೂ ಇಯರ್‌ಗೆ ಅಪ್ಪು ಶುಭಾಶಯ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು ಇದ್ದಿದ್ದರೆ ಹೊಸ ವರ್ಷವನ್ನು ಅಭಿಮಾನಿಗಳ ಜೊತೆ, ಕುಟುಂಬದ ಜೊತೆ ಆಚರಿಸುತ್ತಿದ್ದರು. ಜೀವನದಲ್ಲಿ ಯಾವಾಗಲೂ ನಗುತ್ತಲೇ ಇರಬೇಕು ಅಂತ ಹೇಳುತ್ತಿದ್ದರು. ಅದರಂತೆ ನಗುನಗುತ್ತಲೇ ಬದುಕಿದರು. ನಗುಮುಖದ ಈ ರಾಜಕುಮಾರ ಅಪಾರ ಅಭಿಮಾನಿಗಳನ್ನು ಅಗಲಿದರೂ, ಅವರ ಧ್ವನಿ ಮಾತ್ರ ಕೇಳಿಸದೆ ಇರಲು ಸಾಧ್ಯವೇ ಇಲ್ಲ. ಈಗ 2023 ಹೊಸ್ತಿಲ್ಲಿ ಅಪ್ಪು ಕನ್ನಡಿಗರಿಗೆ ಅಭಿಮಾನಿಗಳಿಗೆ ಶುಭ ಕೋರಿದ ಆಡಿಯೋ ಒಂದು ಎಲ್ಲೆಡೆ ಸದ್ದು ಮಾಡುತ್ತಿದೆ.

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಭ್ರಮ
ವೈರಲ್ ಆಗುತ್ತಿರುವ ಅಪ್ಪು ಆಡಿಯೋದಲ್ಲಿ ಹೊಸ ವರ್ಷದ ಬಗ್ಗೆ ಅರ್ಥಪೂರ್ಣವಾದ ಮಾತುಗಳನ್ನು ಆಡಿದ್ದಾರೆ. "ಹೊಸತು ಅಂದ್ರೇನೆ ಹಾಗೆ. ಮಕ್ಳಿಂದ ಹಿಡಿದು ದೊಡ್ಡವರ ತನಕ ಏನೋ ಸಂಭ್ರಮ. ಹಳೆ ವರ್ಷದ ಕೊನೆಯ ದಿನ ಇವತ್ತು. ನಾಳೆಯಿಂದ ಹೊಸ ವರ್ಷ. ಹೊಸ ವರ್ಷ ಅಂದ್ಮೇಲೆ ಹೊಸ ಹೊಸ ರೆಸಲ್ಯೂಷನ್. ಹೊಸ ವರ್ಷ ಬಂದ್ರೆ ಫ್ಯಾಮಿಲಿ ಒಳಗೆ ಸಂಭ್ರಮ ಜಾಸ್ತಿ." ಎಂದು ಪುನೀತ್ ರಾಜ್‌ಕುಮಾರ್ ಆಡಿಯೋದಲ್ಲಿ ಹೇಳಿದ್ದಾರೆ.

'ಪ್ರಕೃತಿ ಮೇಲೆ ಗಮನವಿಡಿ ಎಂದಿರೋ ಅಪ್ಪು'
ಈ ಆಡಿಯೋದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಕೆಲಸದ ಬಗ್ಗೆ, ಪ್ರಕೃತಿ ಬಗ್ಗೆ ಗಮನ ಇಟ್ಟುಕೊಳ್ಳುವಂತೆ ಹೇಳಿದ್ದಾರೆ. "ನಾವು ನಮ್ಮ ಕುಟುಂಬದ ಮೇಲೆ ನಮ್ಮಗಳ ಮೇಲೆ ನಾವು ಮಾಡುವ ಕೆಲಸದ ಮೇಲೆ ಹಾಗೂ ಪ್ರಕೃತಿ ಮೇಲೆ ಗಮನ ಇಟ್ಕೊಂಡು ನಮ್ಮ ಕೆಲಸವನ್ನು ನಾವು ಶ್ರದ್ಧೆಯಿಂದ ಮಾಡೋಣ. ಈ ವರ್ಷ ಎಲ್ಲರಿಗೂ ಒಳ್ಳೆಯದು ಮಾಡಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ವಿಶ್ ಯು ಆಲ್ ಎ ವೆರಿ ಹ್ಯಾಪಿ ನ್ಯೂ ಇಯರ್." ಎಂದು ಅಪ್ಪು ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ 3 ಸಿನಿಮಾ ಬಿಡುಗಡೆ
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಮೂರು ಸಿನಿಮಾಗಳು ಈ ವರ್ಷ ಬಿಡುಗಡೆಯಾಗಿದೆ. ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್'. ಡಾರ್ಲಿಂಗ್ ಕೃಷ್ಣ ಅಭಿನಯದ 'ಲಕ್ಕಿ ಮ್ಯಾನ್' ಹಾಗೂ 'ಗಂಧದ ಗುಡಿ' ಸಿನಿಮಾಗಳು ತೆರೆಕಂಡಿದೆ. ಮೂರು ಸಿನಿಮಾಗಳಲ್ಲೂ ಪುನೀತ್ ರಾಜ್‌ಕುಮಾರ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈಗ ವರ್ಷದ ಕೊನೆಯಲ್ಲಿ ಅಪ್ಪು ಧ್ವನಿ ವೈರಲ್ ಆಗುತ್ತಿದೆ.