»   » ಹೆಸರು ಬದಲಾಯಿಸಿಕೊಂಡ ಅಣ್ಣಾವ್ರ ಮೊಮ್ಮಗ ಗುರು ರಾಜ್ ಕುಮಾರ್

ಹೆಸರು ಬದಲಾಯಿಸಿಕೊಂಡ ಅಣ್ಣಾವ್ರ ಮೊಮ್ಮಗ ಗುರು ರಾಜ್ ಕುಮಾರ್

Posted By:
Subscribe to Filmibeat Kannada

ಹೆಸರು ಬದಲಿಸಿಕೊಂಡರೆ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಇದೆ. ಆ ರೀತಿಯ ನಂಬಿಕೆ ಚಿತ್ರರಂಗದಲ್ಲಿ ಸ್ವಲ್ಪ ಜಾಸ್ತಿಯೇ ಇದೆ. ಅದೃಷ್ಟಕ್ಕಾಗಿಯೋ ಅಥವಾ ಬೇರೆ ಕಾರಣಕ್ಕಾಗಿಯೋ ಗೊತ್ತಿಲ್ಲ ಆದರೆ ಈಗ ಅಣ್ಣವ್ರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಗುರು ರಾಜ್ ಕುಮಾರ್ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ಮುತ್ತು ರಾಜ್ - ರಾಜ್ ಕುಮಾರ್, ಸಂಪತ್ ಕುಮಾರ್ - ವಿಷ್ಣುವರ್ಧನ್, ನಾಗರಕಟ್ಟೆ ಶಂಕರ - ಶಂಕರ್ ನಾಗ್ ಆದ ಹಾಗೆ ಈಗ ಗುರು ರಾಜ್ ಕುಮಾರ್ 'ಯುವ ರಾಜ್ ಕುಮಾರ್' ಆಗಿದ್ದಾರೆ. ಹೌದು, ಗುರು ಈಗ 'ಯುವ' ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ತಮ್ಮ ಮಗನ ಈ ವಿಷಯವನ್ನು ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೆಸರು ಬದಲಿಸಿಕೊಂಡ ಯುವ ರಾಜ್ ಕುಮಾರ್ ಅವರಿಗೆ ದೊಡ್ಮೆನೆ ಅಭಿಮಾನಿಗಳು ಶುಭ ಕೋರಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ತೊಡೆ ತಟ್ಟಿ ನಿಂದ ದೊಡ್ಮನೆ ಮೊಮ್ಮಗ

ರಾಘವೇಂದ್ರ ರಾಜ್ ಕುಮಾರ್ ಮೊದಲ ಪುತ್ರ ವಿನಯ್ ರಾಜ್ ಕುಮಾರ್ ಈಗಾಗಲೇ ಸಿನಿಮಾ ರಂಗಕ್ಕೆ ಬಂದಿದ್ದಾರೆ. 'ಸಿದ್ಧಾರ್ಥ', 'ರನ್ ಅಂಟೋನಿ' ಬಳಿಕ ಈಗ ಅವರು 'ಅನಂತು ವರ್ಸಸ್ ನುರ್ಸತ್' ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಗುರು ಸದ್ಯಕ್ಕೆ ಹೀರೋ ಆಗದಿದ್ದರು, ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಇನ್ನೂ ಹೆಸರು ಬದಲಾದ ಬಳಿಕ 'ಯುವ ರಾಜ್ ಕುಮಾರ್' ಆಗಿ ಗುರು ಹೀರೋ ಆಗಿ ಲಾಂಚ್ ಆಗುತ್ತಾರೆ ಎನ್ನುವ ನಿರೀಕ್ಷೆ ಕೂಡ ಹೆಚ್ಚಾಗಿದೆ.

ರಾಜ್ ಕುಮಾರ್ ಮೊಮ್ಮಗನ ಮೇಲೆ ಹ್ಯಾರಿಸ್ ಮಗನ ದಬ್ಬಾಳಿಕೆ

English summary
Kannada actor Dr Rajkumar Grandson, Raghavendra Rajkumar son Guru Rajkumar changed his name as Yuva Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada