For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಮತ್ತೊಂದು ಚಿತ್ರ ಹೊಸ ರೂಪದೊಂದಿಗೆ ರಿರಿಲೀಸ್

  |

  ವರನಟ ಡಾ. ರಾಜಕುಮಾರ್ ಅಭಿನಯದ ಮಹೋನ್ನತ ಚಿತ್ರಗಳ ಪಟ್ಟಿಯಲ್ಲಿ ಕಸ್ತೂರಿ ನಿವಾಸ ಚಿತ್ರ ಕೂಡಾ ಒಂದು. 1971ರಲ್ಲಿ ಅನುಪಮ ಮೂವೀಸ್ ಬ್ಯಾನರಡಿಯಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು.

  ಡಾ. ರಾಜ್ ಅವರ 85ನೇ ಹುಟ್ಟುಹಬ್ಬದ ದಿನವಾದ ಎಪ್ರಿಲ್ 24, 2014ರಂದು ಕಸ್ತೂರಿ ನಿವಾಸ ಹೊಸ ರೂಪದಲ್ಲಿ ತೆರೆ ಮೇಲೆ ಬರಲಿದೆ. ಮೂಲ ಕಪ್ಪು ಬಿಳುಪು ಚಿತ್ರವೀಗ ಇದೇ ಎಪ್ರಿಲ್ ತಿಂಗಳಲ್ಲಿ ಈಸ್ಟ್ ಮನ್ ಕಲರ್ ನಲ್ಲಿ ರಿ-ರಿಲೀಸ್ ಆಗಲಿದೆ. 2012ರಲ್ಲೇ ಈ ಚಿತ್ರವನ್ನು ಕಲರ್ ನಲ್ಲಿ ತೆರೆಗೆ ತರಲು ಕೆಸಿಎನ್ ಸಂಸ್ಥೆ ನಿರ್ಧರಿಸಿತ್ತು. (ಅಣ್ಣಾವ್ರ 'ಕಸ್ತೂರಿನಿವಾಸ' ಚಿತ್ರದ ಹಿಂದಿನ ಸತ್ಯಕಥೆ)

  ಹೊಸ ರೂಪದೊಂದಿಗೆ ಬಿಡುಗಡೆಯಾಗುತ್ತಿರುವ ಅಣ್ಣಾವ್ರ ಎರಡನೇ ಚಿತ್ರವಿದು. ಈ ಹಿಂದೆ ಸತ್ಯ ಹರಿಶ್ಚಂದ್ರ ಚಿತ್ರ ಈಸ್ಟ್ ಮನ್ ಕಲರಿನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿತ್ತು.

  ಕಸ್ತೂರಿ ನಿವಾಸ ಚಿತ್ರದ ವಿತರಣ ಹಕ್ಕನ್ನು ಕೆಸಿಎನ್ ಪಿಚ್ಚರ್ಸ್ ಹೊಂದಿದೆ. ಈ ಚಿತ್ರವನ್ನು ಕಲರ್ ನಲ್ಲಿ ಬೆಳ್ಳಿತೆರೆಗೆ ಮತ್ತೆ ತರಲಿದ್ದಾರೆ ಕೆಸಿಎನ್ ಸಂಸ್ಥೆ. ನನ್ನ ತಂದೆ (ಕೆಸಿಎನ್ ಗೌಡ) ಈ ಹಿಂದೆ ನಿರ್ಮಿಸಿದ್ದ ಹಲವು ಕಪ್ಪು ಬಿಳುಪು ಕನ್ನಡ ಚಿತ್ರವನ್ನು ಈಸ್ಟ್ ಮನ್ ಕಲರ್ ನಲ್ಲಿ ಬಿಡುಗಡೆ ಮಾಡಲು ಬಯಸಿದ್ದರು.

  ಅವರ ಆಸೆಯಂತೆ ಕಸ್ತೂರಿ ನಿವಾಸ ಚಿತ್ರವನ್ನು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಎಪ್ರಿಲ್ 24ರಂದು ಬಿಡುಗಡೆ ಮಾಡಲಿದ್ದೇವೆ ಎಂದು ಕೆಸಿಎನ್ ಮೋಹನ್ ಹೇಳಿದ್ದಾರೆ.

  ಕಸ್ತೂರಿ ನಿವಾಸ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಡಾ. ರಾಜಕುಮಾರ್, ಆರತಿ, ಜಯಂತಿ, ಅಶ್ವಥ್, ರಾಜಾಶಂಕರ್ ಇದ್ದಾರೆ. ಚಿ. ಉದಯಶಂಕರ್ ಚಿತ್ರದ ಹಾಡಿಗೆ ಸಾಹಿತ್ಯವನ್ನು ನೀಡಿದ್ದರು. ದೊರೆ -ಭಗವಾನ್ ನಿರ್ದೇಶನದ ಈ ಚಿತ್ರಕ್ಕೆ ಜಿ ಕೆ ವೆಂಕಟೇಶ್ ಸಂಗೀತ ನೀಡಿದ್ದರು.

  English summary
  Kannada matinee idol Dr. Rajkumar's all time great 'Kasturi Nivasa' movie to be re released in Colour on his 85th birth day (April 24, 2014)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X