Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಾ.ರಾಜ್‌ಕುಮಾರ್ ಯೋಗಗುರು ಹೊನ್ನಪ್ಪ ನಿಧನ
ಡಾ.ರಾಜ್‌ಕುಮಾರ್ ಅವರ ಯೋಗ ಗುರು ಆಗಿದ್ದ ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇಂದು (ಮೇ 20) ನಿಧನರಾಗಿದ್ದಾರೆ.
90 ವರ್ಷ ವಯಸ್ಸಾಗಿದ್ದ ಹೊನ್ನಪ್ಪ ನಾಯ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸವಿದ್ದ ಹೊನ್ನಪ್ಪ ಅವರು ಕನಕಪುರ ರಸ್ತೆಯಲ್ಲಿ ಆಶ್ರಮವೊಂದನ್ನು ನಡೆಸುತ್ತಿದ್ದರು.
ಡಾ.ರಾಜ್‌ಕುಮಾರ್ ಅವರಿಗೆ ಹಲವು ವರ್ಷಗಳ ಕಾಲ ಹೊನ್ನಪ್ಪ ನಾಯ್ಕರ್ ಅವರೇ ಯೋಗ ಹೇಳಿಕೊಡುತ್ತಿದ್ದರು. 'ಕಾಮನಬಿಲ್ಲು' ಸಿನಿಮಾದಲ್ಲಿ ರಾಜ್‌ಕುಮಾರ್ ಪ್ರದರ್ಶಿಸಿರುವ ಅದ್ಭುತ ಯೋಗಭಂಗಿಗಳ ಹಿಂದೆ ಹೊನ್ನಪ್ಪ ನಾಯ್ಕರ್ ಅವರ ಯೋಗದಾನವೂ ಇದೆ.
ಡಾ.ರಾಜ್‌ಕುಮಾರ್ ಮಾತ್ರವಲ್ಲದೇ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಣ್ಣಾವ್ರ ಕುಟುಂಬದ ಇತರರಿಗೂ ಹೊನ್ನಪ್ಪ ಯೋಗಾಭ್ಯಾಸ ಮಾಡಿಸುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಪಾರ್ಶ್ವವಾಯುವಾದ ಬಳಿಕ ಅವರಿಗೂ ಹೊನ್ನಪ್ಪ ಯೋಗಭ್ಯಾಸ ಹೇಳಿಕೊಟ್ಟಿದ್ದರು. ರಾಘವೇಂದ್ರ ರಾಜ್‌ಕುಮಾರ್ ಬಹುಬೇಗ ಚೇತರಿಸಿಕೊಂಡು ಚಿತ್ರೀಕರಣಗಳಿಗೆ ತೆರಳುವಷ್ಟರ ಮಟ್ಟಿಗೆ ದೇಹಾರೋಗ್ಯ ಸುಧಾರಿಸುವಂತಾಗುವ ಹಿಂದೆ ಹೊನ್ನಪ್ಪ ನಾಯ್ಕರ್ ಶ್ರಮವಿದೆ.
ಹೊನ್ನಪ್ಪ ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ರಾಘವೇಂದ್ರ ರಾಜ್‌ಕುಮಾರ್, ''ಅಪ್ಪಾಜಿಯವರ ಯೋಗಗುರುಗಳು ಅಗಲಿದ್ದು ಈ ಕ್ಷಣ ಮನಸ್ಸಿಗೆ ತುಂಬಲಾರದಷ್ಟು ದುಃಖವಾಗಿದೆ. ಗುರು ಬ್ರಹ್ಮಃ ಗುರು ವಿಷ್ಣು, ಗುರು ದೇವೋ ನಮಃ'' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
Recommended Video
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಪ್ಪ ಅವರಿಗೆ ಮೂವರು ಮಕ್ಕಳಿದ್ದಾರೆ. ಹೊನ್ನಪ್ಪನವರ ಅಂತಿಮ ಸಂಸ್ಕಾರವನ್ನು ಕನಕಪುರ ಬಳಿಯ ನಾಗದೇವನಹಳ್ಳಿ ಬಳಿ ನೆರವೇರಿಸಲು ಕುಟುಂಬದವರು ನಿಶ್ಚಯಿಸಿದ್ದಾರೆ.