For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್‌ಗೆ 'ಕರ್ನಾಟಕ ರತ್ನ': ವೀರೇಂದ್ರ ಹೆಗ್ಗಡೆ ಹರ್ಷ

  |

  ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ಸರ್ಕಾರವು ಇಂದು 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ಮರಣೋತ್ತರವಾಗಿ ನೀಡಿದ ಈ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ವೀಕರಿಸಿದ್ದಾರೆ.

  ಸರ್ಕಾರವು ಪುನೀತ್ ರಾಜ್‌ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನಾಡಿನ ಹಲವರು ಸ್ವಾಗತಿಸಿದ್ದಾರೆ. ಈ ಹಿಂದೆ 2009 ರಲ್ಲಿ ಸರ್ಕಾರದಿಂದ 'ಕರ್ನಾಟಕ ರತ್ನ' ಪ್ರಶಸ್ತಿಗೆ ಭಾಜನರಾಗಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಈ ಬಗ್ಗೆ ಹರ್ಷ ವ್ಯಕ್ತಪಡಿಸಿ, ವಿಡಿಯೋ ಮೂಲಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

  ಮಳೆಯನ್ನು ಲೆಕ್ಕಿಸದೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಕಣ್ತುಂಬಿಕೊಂಡ ಪುನೀತ್ ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಕಣ್ತುಂಬಿಕೊಂಡ ಪುನೀತ್ ಅಭಿಮಾನಿಗಳು

  ಪುನೀತ್ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಇಂದು ಆ ಯುವಕನನ್ನು ನಾನು ಸ್ಮರಿಸುತ್ತೇನೆ. ಅವರ ತಂದೆ ಡಾ.ರಾಜ್ ಕುಮಾರ್ ನನಗೆ ಅತ್ಯಂತ ಪ್ರೀತಿಯವರಾಗಿದ್ದರು ಮತ್ತು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಾರ ಗೌರವವಿತ್ತು ಅವರ ಪುತ್ರ ಪುನೀತ್ ತನ್ನ ವೈಯಕ್ತಿಕ ವ್ಯಕ್ತಿತ್ವ, ನಟನೆ ಮತ್ತು ಸ್ವಭಾವದಿಂದ ಪ್ರೀತಿ ಪಾತ್ರರಾಗಿದ್ದರು, ಅವರ ಸಾವು ಇನ್ನೂ ನಮಗೆ ಅರಗಿಸಿಕೊಳ್ಳಲಾಗ್ತಿಲ್ಲ'' ಎಂದಿದ್ದಾರೆ.

  ''ಇಂತಹ ಸಾವು ಅಂಥಹ ದೊಡ್ಡ ಮತ್ತು ಭವಿಷ್ಯವಿದ್ದ ಕಲಾವಿದನಿಗೆ ಬರಬಾರದಿತ್ತು, ಅವರ ಕುಟುಂಬಕ್ಕೆ ಸಾಂತ್ವಾನ ಹೇಳುತ್ತಾ, ಭಗವಂತದ ಪಾದ ಸೇರಿದ ಪುನೀತ್ ನನ್ನು ಇವತ್ತು ಸ್ಮರಿಸ್ತೇನೆ, ಕರ್ನಾಟಕ ರತ್ನಕ್ಕೆ ಪುನೀತ್ ಅರ್ಹನಾದ ವ್ಯಕ್ತಿ ಯಾಗಿರುವವರು, ಮುಂದೆ ಎಲ್ಲಾ ಕಲಾವಿದರಿಗೂ ಇವರು ಸ್ಪೂರ್ತಿಯಾಗಿರಲಿ, ಕನ್ನಡದ ಸೇವೆ, ಸ್ವಭಾವತ ಸ್ನೇಹಪರರಾಗಿದ್ದರೆ ಜನ ಮತ್ತು ಸರ್ಕಾರ ಹೇಗೆ ನಮ್ಮನ್ನ ಸ್ಮರಿಸಿಕೊಳ್ಳುತ್ತೆ ಅನ್ನೋದು ಎಲ್ಲಾ ಕಲಾವಿದರಿಗೂ ಗೊತ್ತಾಗಲಿ, ಪುನೀತ್ ರ ಪುಣ್ಯದಿಂದ ಮತ್ತಷ್ಟು ಉತ್ತಮ ಕಲಾವಿದರು ‌ಮೂಡಿ ಬರಲಿ ಅಂತ ಹಾರೈಸುತ್ತೇನೆ'' ಎಂದಿದ್ದಾರೆ ವೀರೇಂದ್ರ ಹೆಗ್ಗಡೆ.

  ಪುನೀತ್ ರಾಜ್‌ಕುಮಾರ್ ಅವರಿಗೆ ಇಂದು ಸಂಜೆ, ವಿಧಾನಸೌಧದ ಆವರಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಮುಖ್ಯ ಅತಿಥಿಗಳಾಗಿ ರಜನೀಕಾಂತ್, ಜೂ ಎನ್‌ಟಿಆರ್, ಸುಧಾ ಮೂರ್ತಿ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಇನ್ನೂ ಹಲವರು ಹಾಜರಿದ್ದರು.

  ಮಳೆಯ ಪರಿಣಾಮವಾಗಿ ಕಾರ್ಯಕ್ರಮವು ಯೋಜನೆಯಂತೆ ನಡೆಯಲಿಲ್ಲವಾದರು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದ ಅಭಿಮಾನಿಗಳು, ಮಳೆಯ ನಡುವೆಯೇ ಕಾರ್ಯಕ್ರಮವನ್ನು ವೀಕ್ಷಿಸಿದರು. ಅತಿಥಿಗಳು ಸಹ ಮಳೆಯಲ್ಲಿಯೇ ನಿಂತು ಕಾರ್ಯಕ್ರಮ ನಡೆಸಿಕೊಟ್ಟರು. ಪುನೀತ್ ರಾಜ್‌ಕುಮಾರ್ ಅವರ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಕರ್ನಾಟಕ ರತ್ನ' ಪ್ರಶಸ್ತಿ ಸ್ವೀಕರಿಸಿದರು.

  English summary
  Dr Veerendra Heggade remembers Puneeth Rajkumar. He said Puneeth Rajkumar is the suitable man for Karnataka Ratna award.
  Tuesday, November 1, 2022, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X