twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ 'ಸಾಹಸ ಸಿಂಹ' ಚಿತ್ರಕ್ಕೆ 40 ವರ್ಷ: ಈ ಚಿತ್ರ ಬಿಡುಗಡೆ ಬಳಿಕ ವಿಷ್ಣುದಾದ ಬೆಂಗಳೂರು ಬಿಟ್ಟಿದ್ದೇಕೆ?

    |

    1982, ಫೆಬ್ರವರಿ 10. ಕನ್ನಡ ಚಿತ್ರರಂಗ ಎಂದೂ ಮರೆಯಲು ಸಾಧ್ಯವೇ ಇಲ್ಲದ ದಿನ. ಇದೇ ದಿನ ಸ್ಯಾಂಡಲ್‌ವುಡ್‌ನಲ್ಲಿ ಆಕ್ಷನ್ ಸಿನಿಮಾಗಳ ದಿಕ್ಕನ್ನೇ ಬದಲಿಸಿದ ಸಿನಿಮಾ ಬಿಡುಗಡೆಯಾಗಿತ್ತು. ಅದುವೇ 'ಸಾಹಸ ಸಿಂಹ'. ಈ ಸಿನಿಮಾ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿಯೇ ಹೊಸ ದಿಕ್ಕನ್ನು ತಂದುಕೊಟ್ಟ ಸಿನಿಮಾ ಆಯಿತು. ಇದೇ ವಿಷ್ಣುವರ್ಧನ್ ಅವರ ಬಿರುದು ಆಯಿತು. ರಾಜ್ಯದ ಮೂಲೆ ಮೂಲೆಯಲ್ಲೂ ವಿಷ್ಣುದಾದನ ಅಭಿಮಾನಿ ಸಂಘಗಳು ಹುಟ್ಟಿಕೊಂಡವು. ಈ ಚಿತ್ರದ ವಯಸ್ಸು ಈಗ ಬರೋಬ್ಬರಿ 40 ವರ್ಷ.

    40 ವರ್ಷದ ಬಳಿಕವೂ ವಿಷ್ಣುವರ್ಧನ್ ಅವರ 'ಸಾಹಸ ಸಿಂಹ' ಸಿನಿಮಾದ ಬಗ್ಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದಕ್ಕೆ ಹಲವು ಕಾರಣವಿದೆ. 40 ವರ್ಷದ ಈ ನೆನಪಿನಲ್ಲಿ ಸಾಹಸ ಸಿಂಹ ಸಿನಿಮಾ ಟೈಟಲ್ ಇಟ್ಟಿದ್ದು ಯಾಕೆ? ಈ ಸಿನಿಮಾವನ್ನು ಪೊಲೀಸರ ಬೆಂಗಾವಲಿನಲ್ಲಿ ಜನರಿಗೆ ತೋರಿಸಿದ್ದು ಏಕೆ? ಕನ್ನಡ ಚಿತ್ರರಂಗ ಆಕ್ಷನ್ ದುನಿಯಾವನ್ನೇ ಈ ಚಿತ್ರದ ಬದಲಾಯಿಸಿದ್ದು ಹೇಗೆ? ಈ ಸಿನಿಮಾಗೆ ಪ್ರೇರಣೆ ಏನು? ಈ ಚಿತ್ರದಿಂದ ಸೃಷ್ಟಿಯಾದ ಮೊದಲುಗಳು ಯಾವುವು? ಅನ್ನುವುದನ್ನು ಸಾಹಸ ಸಿಂಹ ಚಿತ್ರದ ನಿರ್ದೇಶಕ ಜೋ ಸೈಮನ್ ಹಾಗೂ ಪತ್ರಕರ್ತ, ಸಾಹಿತಿ ಎನ್ ಎಸ್ ಶ್ರೀಧರ ಮೂರ್ತಿ ಇಬ್ಬರೂ ಫಿಲ್ಮಿ ಬೀಟ್‌ಗೆ ಮಾಹಿತಿ ನೀಡಿದ್ದಾರೆ.

    ಡಾ.ವಿಷ್ಣುವರ್ಧನ್ ಪುಣ್ಯ ಸ್ಮರಣೆ 5000 ಅಭಿಮಾನಿಗಳಿಂದ ನೇತ್ರದಾನ: ಅಭಿಮಾನ್ ಸ್ಟುಡಿಯೋದಲ್ಲಿ ಅನ್ನದಾನಡಾ.ವಿಷ್ಣುವರ್ಧನ್ ಪುಣ್ಯ ಸ್ಮರಣೆ 5000 ಅಭಿಮಾನಿಗಳಿಂದ ನೇತ್ರದಾನ: ಅಭಿಮಾನ್ ಸ್ಟುಡಿಯೋದಲ್ಲಿ ಅನ್ನದಾನ

     'ಎಂಟರ್ ದಿ ಡ್ಯಾಗನ್' ಈ ಚಿತ್ರಕ್ಕೆ ಸ್ಫೂರ್ತಿ

    'ಎಂಟರ್ ದಿ ಡ್ಯಾಗನ್' ಈ ಚಿತ್ರಕ್ಕೆ ಸ್ಫೂರ್ತಿ

    " ಎಂಟರ್‌ ದಿ ಡ್ರ್ಯಾಗನ್ ಸಿನಿಮಾ ಬಂದ ಕಾಲ ಅದು. ಆಗ ಇಂಡಿಯನ್ ಸಿನಿಮಾಗಳಿಗೆ ಎಂಟರ್‌ದಿ ಡ್ರ್ಯಾಗನ್ ಸ್ಫೂರ್ತಿ ಇರುತ್ತಿತ್ತು. ಇದರಲ್ಲಿ ಕೋಲಾರದ ಗೋಲ್ಡ್ ಮೈನ್‌ನಲ್ಲಿ 5 ಸಾವಿರ ಅಡಿ ಕೆಳಗೆ ಇಳಿದಿದ್ದರು. ಆ ದೃಶ್ಯಗಳನ್ನು ಸಾಹಸ ನಿರ್ದೇಶಕ ವಿಜಯ್ ಚಿತ್ರೀಕರಣ ಮಾಡಿದ್ದರು. ಇನ್ನೊಂದು ಕ್ಲೈಮ್ಯಾಕ್ಸ್‌ನಲ್ಲಿ ಮಾಸ್ಕ್ ತೆಗೆಯುವ ದೃಶ್ಯವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿತ್ತು. ತುಂಬಾ ಡಿಫ್ರೆಂಟ್ ಆಗಿ ಬಂದಿತ್ತು. ಆಗ ಡಬಲ್ ಆಕ್ಷನ್‌ಗಳಲ್ಲಿ ಮಾಸ್ಕ್ ಬಳಸುತ್ತಿದ್ದರು. ಇದು ಡಬಲ್ ಆಕ್ಷನ್ ಆಗಿರಲಿಲ್ಲ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುತ್ತಾರೆ. ಅದನ್ನು ಕೊನೆಯಲ್ಲಿ ತೆಗೆಯುತ್ತಾರೆ ಎಂದಿತ್ತು. ಆ ಕಲ್ಪನೆಯಲ್ಲಿ ಮಾಸ್ಕ್ ಬಳಕೆ ಮಾಡಿದ್ದರು. " ಎಂದು ಎನ್‌ ಎಸ್ ಶ್ರೀಧರ ಮೂರ್ತಿ ಹೇಳುತ್ತಾರೆ.

    "ಕ್ಲೈಮ್ಯಾಕ್ಸ್‌ನಲ್ಲಿ ವಿಷ್ಣುವರ್ಧನ್ ಹಾಕಿದ ಡ್ರೆಸ್ ಹಿಂದೆನೂ ಒಂದು ಕಹಾನಿ ಇದೆ. ಅದು ಬ್ರೂಸ್ಲಿಯಿಂದ ಪಡೆದುಕೊಂಡ ಪ್ರೇರಣೆ. ಬ್ರೂಸ್ಲಿ ಪ್ರೇರಣೆಯಿಂದ ಸಾಹಸ ಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಆಕ್ಷನ್ ಸಿನಿಮಾಗಳನ್ನು ಮಾಡಿದ್ದರು. ಇದರಿಂದಲೇ ಆಕ್ಷನ್ ಚೆನ್ನಾಗಿ ಮೂಡಿಬಂದಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿತ್ತು." ಎನ್ನುತ್ತಾರೆ ನಿರ್ದೇಶಕ ಜೋ ಸೈಮನ್.

      ಫಿಲ್ಮಿಬೀಟ್‌ನಲ್ಲಿ ವಿಷ್ಣುವರ್ಧನ್ ಸಮಾಧಿ ಬಗ್ಗೆ ನಟ ಅನಿರುಧ್ ಬೇಸರದ ನುಡಿ ಫಿಲ್ಮಿಬೀಟ್‌ನಲ್ಲಿ ವಿಷ್ಣುವರ್ಧನ್ ಸಮಾಧಿ ಬಗ್ಗೆ ನಟ ಅನಿರುಧ್ ಬೇಸರದ ನುಡಿ

     ಚಿತ್ರೀಕರಣ ಮುಗಿದ ಬಳಿಕ 'ಸಾಹಸ ಸಿಂಹ' ಟೈಟಲ್ ಫಿಕ್ಸ್

    ಚಿತ್ರೀಕರಣ ಮುಗಿದ ಬಳಿಕ 'ಸಾಹಸ ಸಿಂಹ' ಟೈಟಲ್ ಫಿಕ್ಸ್

    "ಸಾಹಸ ಸಿಂಹ ಟೈಟಲ್ ಸಿನಿಮಾ ಮುಗಿದ ಮೇಲೆ ನಿರ್ಧಾರ ಮಾಡಿದ್ದೆವು. ಆ ಚಿತ್ರದಲ್ಲಿ ಸಾಹಸ ಮಯವಾದ ದೃಶ್ಯಗಳಿತ್ತು. ಅದನ್ನು ನೋಡಿನೇ ಚಿತ್ರಕ್ಕೆ ಸಾಹಸ ಸಿಂಹ ಅಂತ ಟೈಟಲ್ ಇಟ್ಟಿದ್ದೆವು. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರೇ ನೈಜವಾಗಿ ಸಾಕಷ್ಟು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಇದನ್ನು ನೋಡಿ ಸಾಹಸ ಸಿಂಹ ಅಂತ ಟೈಟಲ್ ಇಡುತ್ತೇನೆ ಎಂದೆ. ಅದಕ್ಕೆ ವಿಷ್ಣುವರ್ಧನ್ ಹಾಗೂ ನಿರ್ಮಾಪಕರು ಕೂಡ ಒಪ್ಪಿಕೊಂಡರು. ಅತೀ ದೊಡ್ಡ ಹೆಸರು ತಂದು ಕೊಟ್ಟು ಸಾಹಸ ಸಿಂಹ ವಿಷ್ಣುವರ್ಧನ್ ಅಂತನೇ ಕರೆಯುವ ಹಾಗೆ ಆಯಿತು." ಎಂದು ಟೈಟಲ್ ಬಗ್ಗೆ ಹೇಳುತ್ತಾರೆ ನಿರ್ದೇಶಕ ಜೋ ಸೈಮನ್.

     ಈ ಚಿತ್ರದಲ್ಲಿ ಸಾಹಸ ದೃಶ್ಯಗಳೇ ಜೀವಾಳ

    ಈ ಚಿತ್ರದಲ್ಲಿ ಸಾಹಸ ದೃಶ್ಯಗಳೇ ಜೀವಾಳ

    "ಸಾಹಸ ಸಿಂಹ ಮೂಲಕ ಕನ್ನಡ ಚಿತ್ರರಂಗಕ್ಕೆ ಆಕ್ಷನ್ ಸಿನಿಮಾಗಳಲ್ಲಿ ಹೊಸ ಆಯಾಮವನ್ನು ಸೃಷ್ಟಿ ಮಾಡಿತ್ತು. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ತುಂಬಾನೇ ಕಷ್ಟ ಪಟ್ಟಿದ್ದಾರೆ. ಸಾಹಸ ದೃಶ್ಯಕ್ಕೆ ಅಂತಾನೇ ಕೆಲವು ಹೊಸ ಪ್ರಯತ್ನಗಳನ್ನು ಮಾಡಿದ್ದೆವು. ಲಿಫ್ಟ್‌ನಿಂದ ವಿಲನ್‌ಗಳು ಇಳಿಯುವ ದೃಶ್ಯ. ಒಂದು ದೊಡ್ಡ ಆಕಾರದಲ್ಲಿ ಗಡಿಯಾರ ಸೃಷ್ಟಿ ಮಾಡಿದ್ದೆವು. ಗಡಿಯಾರದಲ್ಲಿ ವಿಷ್ಣುವರ್ಧನ್ ಅವರೇ ಸಿಕ್ಕಿಕೊಳ್ಳುವ ದೃಶ್ಯ ಚಿತ್ರೀಕರಿಸಿದ್ದೆವು. ಆಮೇಲೆ ಕೋಲಾರ ಗೋಲ್ಡ್ ಮೈನ್‌ನಲ್ಲಿ ಸಾವಿರಾರು ಅಡಿಗಳ ಕೆಳಗೆ ಹೋಗಿ ಶೂಟ್ ಮಾಡಿದ್ದೆವು. ಕೋಲಾರ ಗಣಿಯ ಒಳಗೆ ಹೋಗಲು ಬಿಡಲಿಲ್ಲ. ಯಾಕಂದರೆ ಆಕ್ಸಿಜನ್ ಸಿಗುತ್ತಿರಲಿಲ್ಲ. ರಿಸ್ಕ್ ಬೇಡ ಅಂದೆ, ವಿಷ್ಣುವರ್ಧನ್ ಒಪ್ಪಲಿಲ್ಲ. ಆ ದೃಶ್ಯವನ್ನು ವಿಷ್ಣು ಜೀವ ಒತ್ತೆ ಇಟ್ಟು ಮಾಡಿದ್ದರು." ಎಂದು ಸಾಹಸ ದೃಶ್ಯದ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ.

     'ಸಾಹಸ ಸಿಂಹ' ಕಥೆ ಸಿಕ್ಕಿದ್ದೇ ಒಂದು ರೋಚಕ

    'ಸಾಹಸ ಸಿಂಹ' ಕಥೆ ಸಿಕ್ಕಿದ್ದೇ ಒಂದು ರೋಚಕ

    " ಸಾಹಸ ಸಿಂಹ ಕಥೆ ಬಗ್ಗೆ ನನಗೆ ಹೇಳಿದ್ದು ವಿಷ್ಣುವರ್ಧನ್ ಅವರೇ, 'ಸುಧಾ' ಪತ್ರಿಕೆಯಲ್ಲಿ ಒಂದು ಕಥೆ ಪ್ರಕಟವಾಗುತ್ತಿತ್ತು. ಮನು ಅನ್ನುವವರು ಲೇಖಕರು. ಸುಧಾ ಎಡಿಟರ್ ಅನ್ನು ಭೇಟಿ ಮಾಡಿ ಅವರಿಂದ ಕಥೆಗೆ ಪರ್ಮಿಷನ್ ಕೇಳಿದವು. ಮನು ಹಾಗೂ ಸುಧಾ ಪತ್ರಿಕಾ ಸಂಪಾದಕರು ಒಪ್ಪಿದರು. ಆಗ ತಂಗಿ ಪಾತ್ರವೆಲ್ಲ ಇರಲಿಲ್ಲ. ವಿಷ್ಣವರ್ಧನ್ ಸಿಸ್ಟರ್ ಸೆಂಟಿಮೆಂಟ್‌ಗಳಲ್ಲಿ ನಟಿಸಿದ ಸಿನಿಮಾಗಳೆಲ್ಲಾ ಗೆದ್ದಿದ್ದವು. ಹೀಗಾಗಿ ಈ ಸಿನಿಮಾದಲ್ಲೂ ಸಿಸ್ಟರ್ ಸೆಂಟಿಮೆಂಟ್ ಸೇರಿಸಿದೆವು." ಎನ್ನುತ್ತಾರೆ ಜೋ ಸೈಮನ್.

    ಉಪವಾಸ ಸತ್ಯಾಗ್ರಹ ನಡೆಸಲು ಸಜ್ಜಾದ ವಿಷ್ಣುವರ್ಧನ್ ಅಭಿಮಾನಿಗಳುಉಪವಾಸ ಸತ್ಯಾಗ್ರಹ ನಡೆಸಲು ಸಜ್ಜಾದ ವಿಷ್ಣುವರ್ಧನ್ ಅಭಿಮಾನಿಗಳು

     ಮೆಜೆಸ್ಟಿಕ್ ನಿಲ್ದಾಣದಲ್ಲಿ ಶೂಟ್ ಮಾಡಿದ ಮೊದಲ ಚಿತ್ರ

    ಮೆಜೆಸ್ಟಿಕ್ ನಿಲ್ದಾಣದಲ್ಲಿ ಶೂಟ್ ಮಾಡಿದ ಮೊದಲ ಚಿತ್ರ

    'ಸಾಹಸ ಸಿಂಹ' ಸಿನಿಮಾದಲ್ಲಿ ತೆರೆಯ ಮೇಲಷ್ಟೇ ಅಲ್ಲ. ತೆರೆಯ ಹಿಂದೆನೂ ಸಾಕಷ್ಟು ಸಾಹಸ ಮಾಡಿದ್ದಾರೆ. ಆಗತಾನೆ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಹೊಸದಾಗಿ ಕಟ್ಟಲಾಗಿತ್ತು. ಗುಂಡೂರಾವ್ ಮುಖ್ಯ ಮಂತ್ರಿಗಾಗಿದ್ದರು. ಆ ವೇಳೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮೊಟ್ಟ ಮೊದಲ ಬಾರಿಗೆ 'ಸಾಹಸ ಸಿಂಹ' ಸಿನಿಮಾವನ್ನು ಶೂಟ್ ಮಾಡಲಾಗಿತ್ತು.

     ಬಾಂಬೆಯಿಂದ ಹೀರೊಯಿನ್ ಎಂಟ್ರಿ

    ಬಾಂಬೆಯಿಂದ ಹೀರೊಯಿನ್ ಎಂಟ್ರಿ

    "ಚಿತ್ರದ ಕಥೆಯಲ್ಲಿ ನಾಯಕಿ ಬಾಂಬೆ ಮೂಲದವರಾಗಿದ್ದರು. ಹೀಗಾಗಿ ಬಾಂಬೆ ಹೀರೋಯಿನ್ ಅನ್ನೇ ಕರೆದುಕೊಂಡು ಬಂದೆವು. ಕಾಜಲ್ ಕಿರಣ್ ಅನ್ನುವವರು ಕರೆದುಕೊಂಡು ಬಂದೆವು. ಕನ್ನಡದಲ್ಲಿ ನಟಿಸಿದ ಮೊದಲ ಬಾಂಬೆ ನಾಯಕಿ ಕಾಜಲ್ ಕಿರಣ್ ಆಗಿದ್ದರು. ಅದುವರೆಗೂ ಯಾರೂ ಕರೆದುಕೊಂಡು ಬಂದಿರಲಿಲ್ಲ. ಈ ಬಗ್ಗೆ ವಿಷ್ಣುವರ್ಧನ್ ಅವರೊಂದಿಗೆ ಮಾತಾಡಿದ್ದೆವು. ಅವರೂ ಹೀರೊಯಿನ್ ಜೊತೆ ಮಾಡಿ, ಈ ಸಿನಿಮಾದಲ್ಲಿ ನಟಿಸಲು ಒಪ್ಪಿಸಿದರು." ಎನ್ನುತ್ತಾರೆ ಜೋ ಸೈಮನ್.

     ಎಲ್ಲಾ ಖಳನಾಯಕರೂ ನಟನೆ

    ಎಲ್ಲಾ ಖಳನಾಯಕರೂ ನಟನೆ

    "ಈ ಸಿನಿಮಾದಲ್ಲಿ ಕನ್ನಡ ಬಹುತೇಕ ಎಲ್ಲಾ ವಿಲನ್‌ಗಳೂ ನಟಿಸಿದ್ದಾರೆ. ಉದಯ್ ಕುಮಾರ್‌ರಿಂದ ಹಿಡಿದು ಶಕ್ತಿ ಪ್ರಸಾದ್, ತೂಗುದೀಪ ಶ್ರೀನಿವಾಸ್, ಸುಧೀರ್, ಪ್ರಭಾಕರ್, ವಜ್ರಮುನಿ, ಎಲ್ಲರೂ ನಟನೆ ಮಾಡಿದ್ದಾರೆ. ಇದನ್ನೆಲ್ಲಾ ಮರೆಯುವುದಕ್ಕೆ ಆಗುವುದಿಲ್ಲ. ಈ ಸಿನಿಮಾದಲ್ಲಿ ಕಲಾವಿದರು ತುಂಬಿ ತುಳುಕುತ್ತಿದ್ದರು. ಎಲ್ಲರೂ ಕಷ್ಟಪಟ್ಟು ದುಡಿದಿದ್ದಾರೆ. ಬಾಂಬೆನಲ್ಲಿ ಹಗಲು ರಾತ್ರಿ ದುಡಿದಿದ್ದಾರೆ. ಈ ಕಾರಣಕ್ಕೆ ಸಿನಿಮಾ ಗೆಲ್ತು. ವಿಷ್ಣು ಅವರನ್ನು ಈ ಕಾರಣಕ್ಕೆ ಮರೆಯಲು ಸಾಧ್ಯವಿಲ್ಲ." ಎಂದು ಖಳನಾಯಕರು ಹಾಗೂ ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಳ್ಳುತ್ತಾರೆ ಜೋ ಸೈಮನ್.

     ಸತ್ಯಂ-ಕುಣಿಗಲ್ ಜುಗಲ್‌ಬಂಧಿ

    ಸತ್ಯಂ-ಕುಣಿಗಲ್ ಜುಗಲ್‌ಬಂಧಿ

    " ಸತ್ಯಂ ಮ್ಯೂಸಿಕ್ ಇತ್ತು. ವಿಷ್ಣುವರ್ಧನ್ ಅವರು ಒಂದು ಹಾಡು ಹೇಳಿದ್ದರು. ಹೇಗಿದ್ದರೂ ನೀನೇ ಚೆನ್ನ ಅಂತಾ. ಆರ್ ಎನ್ ಜಯಗೋಪಾಲ್ ಒಂದು ಹಾಡನ್ನು ಬರೆದಿದ್ದಾರೆ. ಈ ಹಾಡು ಕಥೆಯನ್ನು ಹೇಳಿತ್ತು. ಮರೆಯದ ನೆನಪನು ಎದೆಯ ತಂದೆ ನೀನು ಎಂಬ ಹಾಡು ನಾಯಕಿಯ ನಿವೇದನೆ ಮಾಡಿಕೊಳ್ಳುವಂತಿದೆ. ಇನ್ನೊಂದು ಕಡೆ ಖಳನಾಯಕನ ಬಗ್ಗೆ ಹೇಳಿದಂತಿದೆ. ಪ್ರತಿ ಸಾಲಿನಲ್ಲೂ ಎರಡು ಅರ್ಥವಿದೆ. ಸತ್ಯಂ ಬಗ್ಗೆ ಕಂಪ್ಲೆಂಟ್ ಇದ್ದಿದ್ದು ಏನಂದರೆ, ಮೆಲೋಡಿ ಕೊಡಲ್ಲ ಫಾಸ್ಟ್ ಟ್ರ್ಯಾಕ್ ಮಾಡುತ್ತಾರೆ ಅಂತ. ಸತ್ಯಂ ಈ ಸಿನಿಮಾದಲ್ಲಿ ತುಂಬಾ ಒಳ್ಳೆ ಮೆಲೋಡಿ ಮಾಡಿದ್ದಾರೆ."

    "ಕುಣಿಗಲ್ ನಾಗಭೂಷಣ್ ಈ ಸಿನಿಮಾಗೆ ಡೈಲಾಗ್ ಬರೆದಿದ್ದರು. ಅಲ್ಲಿವರೆಗೂ ಇದ್ದ ಕಂಪ್ಲೆಂಟ್ ಏನಂದೆರೆ, ತೆಲುಗಿನಿಂದ ರಿಮೇಕ್ ಆದ ಸಿನಿಮಾಗಳಿಗೆ ಡೈಲಾಗ್ ಬರೆಯುತ್ತಾರೆ ಅಂತ. ಸ್ವತಂತ್ರವಾಗಿ ಬರೆಯುವುದಕ್ಕೆ ಅವಕಾಶವೇ ಸಿಕ್ಕಿರಲಿಲ್ಲ. ಇದು ಸ್ವತಂತ್ರ್ಯವಾಗಿ ಡೈಲಾಗ್ ಬರೆಯಬಲ್ಲೆ ಅಂತ ಪ್ರೂವ್ ಮಾಡಿದ ಸಿನಿಮಾ ಆಯ್ತು. ಮುಂದೆ ಕೂಡ ಈ ಸಿನಿಮಾದಂತೆ ಅವಕಾಶ ಸಿಕ್ಕಿದ್ದು ಕಡಿಮೆ." ಎನ್ನುತ್ತಾರೆ ಎನ್‌ ಎಸ್ ಶ್ರೀಧರ ಮೂರ್ತಿ.

     ಪೊಲೀಸರ ಬೆಂಗಾವಲಿನಲ್ಲಿ ಸಿನಿಮಾ ಪ್ರದರ್ಶನ

    ಪೊಲೀಸರ ಬೆಂಗಾವಲಿನಲ್ಲಿ ಸಿನಿಮಾ ಪ್ರದರ್ಶನ

    "ಸಾಹಸ ಸಿಂಹ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಥಿಯೇಟರ್‌ನಲ್ಲಿ ಸಿಕ್ಕಾಪಟ್ಟೆ ಗಲಾಟೆಗಳಾದವು. ಥಿಯೇಟರ್ ಮುಂದು ಪೋಲಿಸರ ರಿಸರ್ವ್ ವ್ಯಾನ್ ನಿಂತಿರುತ್ತಿತ್ತು. ಎರಡನೇ ವಾರ ರಿಸರ್ವ್ ವ್ಯಾನ್ ಇಟ್ಟುಕೊಂಡು ಸಿನಿಮಾ ರನ್ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಸಿಕ್ಕಾಪಟ್ಟೆ ಬೂಸ್ಟ್ ಆಗಿ ಹೋಯಿತು."

    "ಸಾಹಸ ಸಿಂಹ ಭಯಂಕರವಾದ ಗಲಾಟೆಗಳೆಲ್ಲಾ ನಡೆಯಿತು. ಫೈಟ್ ಮಾಸ್ಟರ್ ಅನ್ನು ಓಡಾಡಿಸಿದ್ದು, ತೊಂದರೆ ಕೊಟ್ಟಿದ್ದು, ವಿಷ್ಣುವರ್ಧನ್ ಬೆಂಗಳೂರು ಬಿಟ್ಟು ಹೋಗಿದ್ದರು. ಅಭಿಮಾನಿಗಳ ನಡುವೆ ಏನೋ ಗಲಾಟೆ ಆಯಿತು. ಅದನ್ನೆಲ್ಲಾ ಈಗ ಚರ್ಚೆ ಮಾಡುವುದು ಬೇಡ. ಈ ಘಟನೆಗಳು ನಡೆದ ಮೇಲೆ ವಿಷ್ಣು ಮತ್ತು ನಾನು ಮಾತಾಡಿಕೊಂಡು ಸಿನಿಮಾ ಮಾಡಲಿಲ್ಲ. 9 ವರ್ಷ ನಾನು ವಿಷ್ಣು ಸಿನಿಮಾನೇ ಮಾಡಲಿಲ್ಲ. ಕೊನೆಯಲ್ಲಿ ಎಸ್. ರಮೇಶ್ ಅನ್ನುವವರು ಕರೆದು ಸಿನಿಮಾ ಮಾಡಿ, ನಾನಿದ್ದೇನೆ ಎಂದು ಹೇಳಿದರು. ಆಗಲೇ ರವಿವರ್ಮಾ ಅಂತ ಸಿನಿಮಾ ಮಾಡಿದ್ವಿ. ಆ ಘಟನೆಗಳನ್ನೆಲ್ಲಾ ಮೆರೆಯುವುದಕ್ಕೆ ಸಾಧ್ಯವೇ ಇಲ್ಲ." ಎನ್ನುತ್ತಾರೆ ನಿರ್ದೇಶಕ ಜೋ ಸೈಮನ್.

    English summary
    Dr.Vishnuvardhan acted Sahasa Simha Movie Completed 40 years here is the interesting facts. This Movie gave Vishnuvardhan Angry Young man image.
    Saturday, February 12, 2022, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X