For Quick Alerts
  ALLOW NOTIFICATIONS  
  For Daily Alerts

  'ನಮ್ಮ ತಂದೆಗೆ ಅನ್ಯಾಯವಾಗ್ತಿದೆ': ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ

  |
  ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ..! | FILMIBEAT KANNADA

  'ತಂದೆ ಇದ್ದಾಗ ಅವರಿಗೆ ಅನ್ಯಾಯ ಮಾಡಿದ್ರು, ಅವರು ಇಲ್ಲಿದಿದ್ದಾಗ ನಮಗೆ ಅನ್ಯಾಯ ಮಾಡ್ತಿದ್ದಾರೆ. ನಮ್ಮನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ. ನಮ್ಮ ತಂದೆಗೆ ಸಿಗಬೇಕಾದ ಗೌರವ ಸಿಗ್ತಿಲ್ಲ ಯಾಕೆ' ಎಂದು ವಿಷ್ಣು ಪುತ್ರಿ ಕೀರ್ತಿ ಪ್ರಶ್ನಿಸಿದ್ದಾರೆ.

  ಡಾ ವಿಷ್ಣುವರ್ಧನ್ ಸ್ಮಾರಕ ವಿವಾದಕ್ಕೆ ಸಂಬಂಧಪಟ್ಟಂತೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಮಗಳು ಕೀರ್ತಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರ ಹಾಗೂ ಕೆಲವು ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

  ವಿಷ್ಣುವರ್ಧನ್ ಅವರಿಗೆ ಸ್ಮಾರಕವೇ ಬೇಕಾಗಿಲ್ಲ. ಇಷ್ಟೊಂದು ವಿವಾದ ಮಾಡಿ ಸ್ಮಾರಕ ನಿರ್ಮಾಣ ಮಾಡುವುದಾರೇ ಅದು ನಮಗೆ ಬೇಡ ಎಂದು ತಮ್ಮ ಬೇಸರವನ್ನ ಹೊರಹಾಕಿದ್ದಾರೆ. ಸುದ್ದಿಗೋಷ್ಠಿಯ ಪೂರ್ತಿ ವಿವರ ಮುಂದೆ ಓದಿ.....

  ಮೈಸೂರು ಅಥವಾ ಅಭಿಮಾನ್ ಸ್ಟುಡಿಯೋದಲ್ಲೇ ಮಾಡಲಿ

  ಮೈಸೂರು ಅಥವಾ ಅಭಿಮಾನ್ ಸ್ಟುಡಿಯೋದಲ್ಲೇ ಮಾಡಲಿ

  ''ವಿಷ್ಣು ಸ್ಮಾರಕ ಅಲ್ಲೇಲ್ಲೋ ಮಾಡುವುದು ಸರಿಯಿಲ್ಲ. ನಮಗೆ ಮೈಸೂರಿನಲ್ಲಿ ಕೆಲಸ ಆರಂಭವಾಗಿದೆ. ಅಲ್ಲೆ ಮಾಡಿಕೊಡಲಿ ಅಥವಾ ಅಭಿಮಾನ್ ಸ್ಟುಡಿಯೋದಲ್ಲಿ ಮಾಡೋಕೆ ಆಗುತ್ತಾ ಮಾಡಿ, ನಮ್ಮ ವಿರೋಧವಿಲ್ಲ. ಆದ್ರೆ, ಅಲ್ಲಿ ಆಗಲ್ಲ. ಯಾಕಂದ್ರೆ, ಅಲ್ಲಿ ಗೀತಾಬಾಲಿ ಕುಟುಂಬದ ವಿವಾದ ಮುಗಿಯಲ್ಲ'' ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

  ವಿಷ್ಣು ಸ್ಮಾರಕ ನಿರ್ಮಾಣಕ್ಕೆ 'ಕಂಠೀರವ' ನಾಲ್ಕನೇ ಜಾಗ, ಎಲ್ಲ ಕಡೆಯೂ ವಿವಾದ.!

  ಅಮ್ಮನ ಬಳಿ ಮಾತನಾಡಲ್ಲ ಯಾಕೆ

  ಅಮ್ಮನ ಬಳಿ ಮಾತನಾಡಲ್ಲ ಯಾಕೆ

  ''ಯಾರೇ ಆಗಲಿ ಮೊದಲ ಅಮ್ಮನ ಬಳಿ ಬಂದು ಮಾತನಾಡುವುದಿಲ್ಲ. ಮಾಧ್ಯಮದಲ್ಲಿ ಬಂದು ಮಾತಾಡ್ತಾರೆ ಯಾಕೆ. ಕುಟುಂಬದ ಬಗ್ಗೆ ಇಷ್ಟು ಕೆಟ್ಟದಾಗಿ ಮಾತಾಡ್ತಾರೆ. ಅಂತಹ ತಪ್ಪು ನಾವೇನು ಮಾಡಿದ್ದೀವಿ. ನಮ್ಮ ತಂದೆ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ತಂದೆ ಬಗ್ಗೆ ಗೊತ್ತಿದ್ದವರು ನಮ್ಮ ಕುಟುಂಬವನ್ನ ಹೇಗೆ ಗೌರವದಿಂದ ಮಾತಾಡ್ತಾರೆ ಎಂದು ನನಗೆ ಗೊತ್ತಿದೆ''

  ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ

  9 ವರ್ಷದಿಂದ ಹೋರಾಟ

  9 ವರ್ಷದಿಂದ ಹೋರಾಟ

  ''9 ವರ್ಷದಿಂದ ನಾವು ಮಾಡಿರುವ ಹೋರಾಟ ನಮಗೆ ಮಾತ್ರ ಗೊತ್ತಿದೆ. 5 ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಎಷ್ಟು ಪತ್ರಗಳನ್ನ ನಾವು ಬರೆದಿದ್ದೇವೆ. ಡಿಸಿಗಳು ಬದಲಾಗ್ತಾರೆ. ಆದ್ರೆ, ನಮ್ಮ ಹೋರಾಟ ಮಾತ್ರ ಎಲ್ಲೂ ನಿಂತಿಲ್ಲ. ನಾನು ಚಿಕ್ಕ ವಯಸ್ಸಿನಲ್ಲಿದಾಗನಿಂದಲೂ ನಿಜವಾದ ಅಭಿಮಾನಿಗಳನ್ನ ನೋಡಿದ್ದೇವೆ''

  'ವಿಷ್ಣು ಸ್ಮಾರಕದ ಬಗ್ಗೆ ತಪ್ಪು ಸಂದೇಶ ರವಾನೆ ಆಗುತ್ತೆ' ಎಂದ ಜಗ್ಗೇಶ್

  ನಮ್ಮ ತಂದೆ ಇದ್ದಿದ್ರೆ ಮಾತಾಡ್ತಿದ್ರಾ.?

  ನಮ್ಮ ತಂದೆ ಇದ್ದಿದ್ರೆ ಮಾತಾಡ್ತಿದ್ರಾ.?

  ''ನಮ್ಮ ತಂದೆ ಇದ್ದಿದ್ರೆ ಯಾರಾದ್ರೂ ನಮ್ಮ ಬಗ್ಗೆ ಮಾತಾಡ್ತಿದ್ರಾ. ದಕ್ಷಿಣ ಚಿತ್ರರಂಗದಲ್ಲಿ ನಮ್ಮ ತಂದೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಿಳೆಯರಿಗೆ ಎಷ್ಟು ಗೌರವ ಕೊಡ್ತಿದ್ರು ಅಂತ ಜಗತ್ತಿಗೆ ಗೊತ್ತಿದೆ. ಎಲ್ಲರಿಗೂ ಹೆಸರು ಬೇಕು ಇಲ್ಲಿ. ಹಳೆ ಅಭಿಮಾನಿಗಳು ನಮ್ಮ ಜೊತೆಯಲ್ಲಿದ್ದಾರೆ. ಈಗ ಬಂದವರು ಏನೇನೋ ಮಾತಾಡ್ತಾರೆ. ಈಗ ಹೇಳುತ್ತಿರುವ ಮುಖ್ಯಮಂತ್ರಿ ಅಷ್ಟು ವರ್ಷದಿಂದ ಏನು ಮಾಡುತ್ತಿದ್ದರು.?'' ಎಂದು ಪ್ರಶ್ನಿಸಿದ್ದಾರೆ.

  ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ

  ನಮ್ಮ ಕುಟುಂಬ ಟಾರ್ಗೆಟ್ ಯಾಕೆ.?

  ನಮ್ಮ ಕುಟುಂಬ ಟಾರ್ಗೆಟ್ ಯಾಕೆ.?

  ''ಮೊದಲಿನಿಂದಲೂ ನಮ್ಮ ಕುಟುಂಬ ಟಾರ್ಗೆಟ್ ಯಾಕೆ. ಮೊದಲ ಅವರನ್ನ ಟಾರ್ಗೆಟ್ ಮಾಡ್ತಿದ್ರು, ಈಗ ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ. ಇನ್ನು ಗೀತಾಬಾಲಿ ನಮ್ಮ ತಂದೆಗೆ ಸಿಕ್ಕಾಪಟ್ಟೆ ಬೈಯ್ದಿದ್ದಾರೆ. ಅಂತವರ ಬಳಿ ನಾವೇಕೇ ಹೋಗ್ಬೇಕು'' ಎಂದು ಕೀರ್ತಿ ವಿಷ್ಣುವರ್ಧನ್ ಅವರು ಆಕ್ರೋಶ ಹೊರಹಾಕಿದ್ದಾರೆ.

  ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ

  English summary
  Dr Bharathi vishnuvardhan, son in law anirudh and daughter keerthi vishnuvardhan have expressed displeasure over the government.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X