For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಕೆಟ್ಟ ನಟ ಅಂದ ಮುಕುಂದ್ ರಾಜ್ ವಿವಾದದ ಕಿಡಿ

  By Rajendra
  |

  ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಬಗೆಗಿನ ಲೇಖನವೊಂದು ಈಗ ಭಾರಿ ವಿವಾದ, ಚರ್ಚೆಗೆ ಕಾರಣವಾಗಿದೆ. ಲೇಖಕ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಬದುಕು, ಬರಹ, ಆಸಕ್ತಿ, ಸಾಧನೆಗಳನ್ನು ಕುರಿತ ಚಂದ್ರಮಾನ ಪುಸ್ತಕದಲ್ಲಿನ ಲೇಖನ ಈಗ ವಿವಾದಕ್ಕೆ ಕಾರಣವಾಗಿದೆ.

  ಈ ಕೃತಿಯಲ್ಲಿ ಮುಕುಂದ್ ರಾಜ್ ಅವರು ಬರೆದಿರುವ ಲೇಖನದಲ್ಲಿ ವಿಷ್ಣುವರ್ಧನ್ ಅವರಿಗೆ ಆಕ್ಟಿಂಗ್ ಬರುತ್ತಿರಲಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣುವರ್ಧನ್ ಆಕ್ಟಿಂಗ್ ಸರಿ ಇರಲಿಲ್ಲ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಈಗ ಭಾರಿ ವಿವಾದ ತಲೆದೋರಿದೆ.

  ಮುಕುಂದ್ ಅವರು ತಮ್ಮ ಲೇಖನದಲ್ಲಿ ಮತಾಡ್ ಮಾತಾಡು ಮಲ್ಲಿಗೆ ಸಿನಿಮಾ ಕರ್ನಾಟಕದ ಜನ ಅಪ್ಪಿಕೊಂಡು ನೋಡಬೇಕಾದ ಸಿನಿಮಾ. ಅಂತಹ ಸಿನಿಮಾವನ್ನು ಜನ ನೋಡಲಿಲ್ಲ. ಅದಕ್ಕೆ ಕಾರಣ ವಿಷ್ಣುವರ್ಧನ್ರಂತಹ ಹಿರಿಯ ನಟನ ಕೆಟ್ಟ ಅಭಿನಯ. ಹೊಸ ಹುಡುಗರನ್ನು ಹಾಕಿಕೊಂಡು ಮಾಡಿದ ಅಮೆರಿಕಾ ಅಮೆರಿಕಾ ಸಿನಿಮಾ ಯಶಸ್ವಿಯಾಗುತ್ತದೆ. ಆದರೆ ಮಾತಾಡ್ ಮಾತಾಡು ಮಲ್ಲಿಗೆ ಯಶಸ್ವಿಯಾಗಲಿಲ್ಲ.

  ಮಾತಾಡ್ ಮಾತಾಡ್ ಚಿತ್ರದ ಸೋಲಿಗೆ ವಿಷ್ಣುವರ್ಧನ್ ಕಾರಣ ಎಂದು ಮುಕುಂದ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಈ ಮೂಲಕ ವಿಷ್ಣು ಅಭಿಮಾನಿಗಳನ್ನು ಕೆಣಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಕುಂದ್ ರಾಜ್ ಅವರು ನಾನು ಮಾಡಿರುವುದು ದೊಡ್ಡ ಅಪರಾಧವಲ್ಲ. ತಾವು ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.

  ಈ ಹಿಂದೊಮ್ಮೆ ಮುಕುಂದ್ ರಾಜ್ ಅವರು "ರಾಜ್ ಕುಮಾರ್ ಬಗ್ಗೆ ಬಹಳಷ್ಟು ಮಂದಿ ಮಾತನಾಡುತ್ತಾರೆ, ಆದರೆ ಅವರು 'ಸ್ವಾಮಿ ರಾಘವೇಂದ್ರ' ಹಾಗೂ 'ಅಯ್ಯಪ್ಪ' ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಮೌಢ್ಯತೆಯನ್ನು ತುಂಬಿದ್ದಾರೆ. ಒಂದು ವೇಳೆ ರಾಜ್ ಕುಮಾರ್ ಅವರು ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸದೇ ಇದ್ದಿದ್ದರೆ ಚಿತ್ರರಸಿಕರು ಕುರುಡು ನಂಬಿಕೆ ಬೆಳೆಸಿಕೊಳ್ಳುತ್ತಿರಲಿಲ್ಲ ಎಂದಿದ್ದರು. (ಏಜೆನ್ಸೀಸ್)

  English summary
  Teacher-cum-poet Mukunda Raj dishonors in his article in the book Chandrama by Nagathihalli Chandrashekhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X