For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣುವರ್ಧನ್ 'ರಾಷ್ಟ್ರೀಯ ಉತ್ಸವ'ಕ್ಕೆ ಆಸ್ಟ್ರೇಲಿಯಾದಿಂದ ಅಭಿಮಾನಿಗಳ ಆಗಮನ

  By ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ
  |

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಮೇಲಿನ ಅಭಿಮಾನವೇ ಅಂತಹುದ್ದು. ಅವರು ಕಾಲವಾಗಿ ಎಂಟು ವರ್ಷಗಳಾಗುತ್ತಿದ್ದರೂ, ಇನ್ನೂ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಮ್ಮಿಯಾಗಿಲ್ಲ. ಬದಲಾಗಿ ದಿನೇ ದಿನೇ ಹೆಚ್ಚಾಗುತ್ತಿದೆ.

  ಇದಕ್ಕೆ ಸಾಕ್ಷಿ... ಈಗಲೂ ಡಾ.ವಿಷ್ಣುವರ್ಧನ್ ರವರ ಹೆಸರಿನಲ್ಲಿ ತೆರೆಗೆ ಬರುತ್ತಿರುವ ಚಿತ್ರಗಳು ಹಾಗೂ ಅವರ ನೆನಪಿನಲ್ಲಿ ಡಾ.ವಿಷ್ಣು ಸೇನಾ ಸಮಿತಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಸುತ್ತಿರುವ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ.

  ವಿಷ್ಣು ಸೇನಾ ಸಮಿತಿಯಿಂದ ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'

  ಈ ರಾಷ್ಟ್ರೀಯ ಉತ್ಸವ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನವನ್ನು ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಯಾವ ಮಟ್ಟದ ಸಂಚಲನ ಅಂದರೆ ಆಸ್ಟ್ರೇಲಿಯಾದಲ್ಲಿರುವ ಅಭಿಮಾನಿಗಳು ಈ ರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬರುವಷ್ಟು.!

  ಹೌದು.. ನೀವು ಓದಿದ್ದು ನಿಜ. ಆಸ್ಟ್ರೇಲಿಯಾದಲ್ಲಿರುವ ಉದ್ಯೋಗಿ ಬಲರಾಮ್ ಮತ್ತವರ ಗೆಳೆಯರು ಡಾ.ವಿಷ್ಣು ಅವರ ಮೇಲಿನ ಅಭಿಮಾನಕ್ಕಾಗಿ ರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾದಿಂದ ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

  ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವಕ್ಕೆ ಇದೊಂದು ಹೆಮ್ಮೆಯ ವಿಚಾರ ಎಂಬುದನ್ನು ವಿ.ಎಸ್.ಎಸ್ ನ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

  English summary
  'Dr Vishnuvardhan Raashtriya Utsava' to be held on August 27th in Delhi, organised by Veerakaputra Srinivas, State President, Vishnu Sena Samithi. Vishnu Fans from Australia are attending this Event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X