»   » ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ 'ನಾಗರಹಾವು'!

ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ 'ನಾಗರಹಾವು'!

Posted By:
Subscribe to Filmibeat Kannada

'ಸಾಹಸಸಿಂಹ' ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಅಭಿಮಾನಿಗಳ ನೆಚ್ಚಿನ 'ಹೃದಯವಂತ' ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.!

ಹಾಗಂದ ಮಾತ್ರಕ್ಕೆ ಈ ಹಿಂದೆ ವಿಷ್ಣುವರ್ಧನ್ ಅಭಿನಯಿಸಿದ ಚಿತ್ರ ರೀ ರಿಲೀಸ್ ಆಗುತ್ತಿಲ್ಲ. ಬದಲಾಗಿ ಹೊಸ ಸಿನಿಮಾದಲ್ಲಿ ನಿಮ್ಮೆಲ್ಲರ ಪ್ರೀತಿಯ 'ಯಜಮಾನ' ಮಿಂಚಲಿದ್ದಾರೆ.!

Dr.Vishnuvardhan starrer 201st Movie 'Naagarahaavu'

ನಿಮಗೆ ಅಚ್ಚರಿ ಆದ್ರೂ, ಇದೇ ಸತ್ಯ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ದೂದ್ ಪೇಡ ದಿಗಂತ್ ಅಭಿನಯದ ಕೋಡಿ ರಾಮಕೃಷ್ಣ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ 'ನಾಗರಹಾವು' ಎಂದು ಫಿಕ್ಸ್ ಆಗಿದೆ ಅಂತ ನಾವೇ ನಿಮಗೆ ಹೇಳಿದ್ವಿ. [ಸಾಹಸ ಸಿಂಹನಿಗೆ ನಮಿಸಿದ ಕನ್ನಡದ ತಾರೆಗಳು]

ಇದೀಗ ಅದೇ 'ನಾಗರಹಾವು' ಚಿತ್ರತಂಡದಿಂದ ಹೊರ ಬಿದ್ದಿರುವ ಸುದ್ದಿ ಪ್ರಕಾರ, ಡಾ.ವಿಷ್ಣುವರ್ಧನ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Dr.Vishnuvardhan starrer 201st Movie 'Naagarahaavu'

ಅದು ಹೇಗೆ ಸಾಧ್ಯ ಅಂದ್ರೆ, ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಪಾತ್ರವನ್ನು ವಿಶೇಷವಾಗಿ, ವಿಶಿಷ್ಟವಾಗಿ ಬಳಸಿಕೊಳ್ಳಲಾಗುತ್ತಿದೆ. ನವೀನ ತಂತ್ರಜ್ಞಾನದ ಮುಖಾಂತರ ಡಾ.ವಿಷ್ಣುವರ್ಧನ್ 'ನಾಗರಹಾವು' ಮೂಲಕ ಬೆಳ್ಳಿತೆರೆ ಮೇಲೆ ಬರಲಿದ್ದಾರೆ. [ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕ್ಕೆ ತೆರೆ]

ಹಾಗ್ನೋಡಿದರೆ, ದಶಕಗಳ ಹಿಂದೆ ತೆರೆಕಂಡ 'ನಾಗರಹಾವು' ಚಿತ್ರದಿಂದಲೇ ವಿಷ್ಣುವರ್ಧನ್ 'ಆಂಗ್ರಿ ಯಂಗ್ ಮ್ಯಾನ್' ಆಗಿ ಖ್ಯಾತಿಯ ಉತ್ತುಂಗಕ್ಕೆ ಏರಿದ್ದು. ಇದೀಗ 'ಸಾಹಸಸಿಂಹ' ಡಾ.ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ 6 ವರ್ಷಗಳ ನಂತರ ಮತ್ತೊಂದು 'ನಾಗರಹಾವು' ಚಿತ್ರದ ಮೂಲಕ ನಿಮ್ಮ ಮುಂದೆ ಬರ್ತಿದ್ದಾರೆ. ವಿಷ್ಣುದಾದಾ ಅಭಿಮಾನಿಗಳಿಗೆ ಇದಕ್ಕಿಂತ ಗುಡ್ ನ್ಯೂಸ್ ಬೇಕಾ.?

English summary
Kodi Ramakrishna directorial Kannada Actress Ramya and Diganth starrer movie is titled as 'Naagarahaavu'. In this movie, Late.Dr.Vishnuvardhan will also be seen in a prominent role with the help of latest graphics technology.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada