twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ' ಚಿತ್ರಕ್ಕೆ 21 ವರ್ಷದ ಸಂಭ್ರಮ

    |

    ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ' ಸಿನಿಮಾದ ನೋಡದವರಿಲ್ಲ. ಟಿವಿಯಲ್ಲಿ ಪ್ರಸಾರವಾದರೆ ಇವತ್ತಿಗೂ ಅದೆ ಇಂಟ್ರಸ್ಟಿಂಗ್, ಕುತೂಹಲದಿಂದ, ಆಸಕ್ತಿಯಿಂದ ಸೂರ್ಯವಂಶ ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ. ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಇದು ಒಂದು.

    2000ರಲ್ಲಿ ತೆರೆಗೆ ಬಂದ 'ಸೂರ್ಯವಂಶ' ವಿಷ್ಣುವರ್ಧನ್ ಸಿನಿ ಜೀವನದಲ್ಲೆ ದೊಡ್ಡ ಯಶಸ್ಸು ಕಂಡ ಸಿನಿಮಾವಾಗಿತ್ತು. ಕೌಟುಂಬಿಕ ಮೌಲ್ಯ ಸಾರಿದ ಸೂರ್ಯವಂಶ ಪಕ್ಕಾ ಮನರಂಜನೆಯ ಸಿನಿಮಾ. ಈ ಸಿನಿಮಾ ತೆರೆಕಂಡು ಇಂದಿಗೆ 21 ವರ್ಷ ಪೂರೈಸುತ್ತಿದೆ. ಕಳೆದ 21 ವರ್ಷಗಳ ಹಿಂದೆ ಇದೆ ದಿನ ಅಂದ್ರೆ ಜೂನ್ 15ಕ್ಕೆ ಸಾಹಸಿಂಹ ಸತ್ಯಮೂರ್ತಿಯಾಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದರು. ಸತ್ಯಮೂರ್ತಿ ಮತ್ತು ಕನಕ ಎನ್ನುವ ದ್ವಿ-ಪಾತ್ರದಲ್ಲಿ ವಿಷ್ಣುವರ್ಧನ್ ಮಿಂಚಿದ್ದರು. ಮುಂದೆ ಓದಿ...

    ವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರುವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರು

    ಎಸ್.ನಾರಾಯಣ್ ನಿರ್ದೇಶನದ ಸಿನಿಮಾ

    ಎಸ್.ನಾರಾಯಣ್ ನಿರ್ದೇಶನದ ಸಿನಿಮಾ

    ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ ಇದಾಗಿತ್ತು. ರೀಮೇಕ್ ಸಿನಿಮಾ ಆದರು ಕನ್ನಡದಲ್ಲಿ ಯಶಸ್ಸು ಕಂಡಷ್ಟು ಬೇರೆ ಯಾವ ಭಾಷೆಯಲ್ಲು ಇಷ್ಟು ದೊಡ್ಡ ಮಟ್ಟಿಗೆ ಸಕ್ಸಸ್ ಕಂಡಿಲ್ಲ. ಎಸ್.ನಾರಾಯಣ್ ಮತ್ತು ವಿಷ್ಣುವರ್ಧನ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಎರಡನೆ ಸಿನಿಮಾ ಆಗಿತ್ತು. 'ಸೂರ್ಯವಂಶ' ತೆರೆಕಂಡ ವರ್ಷವೆ ಎಸ್ ನಾರಾಯಣ್ ಮತ್ತು ವಿಷ್ಣುವರ್ಧನ್ ಅವರ ಕಾಂಬಿನೇಶನ್ ನಲ್ಲಿ 'ವೀರಪ್ಪ ನಾಯ್ಕ' ಸಿನಿಮಾ ತೆರೆಕಂಡಿತ್ತು.

    ರಜನಿ ಕಾಂತ್, ಬಿಗ್ ಬಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು

    ರಜನಿ ಕಾಂತ್, ಬಿಗ್ ಬಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು

    ಸೂರ್ಯವಂಶ ಸಿನಿಮಾ ರಿಲೀಸ್ ಆದ ಸಮಯದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಬೆಂಗಳೂರಿನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ನೋಡಲು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿದ್ದಂತೆ ದೊಡ್ಡ ದೊಡ್ಡ ಕಲಾವಿದರು ಬಾಗಿಯಾಗಿದ್ದರು. ಸೂರ್ಯವಂಶ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

    ಸಾಹಸ ಸಿಂಹ ವಿಷ್ಣುವರ್ಧನ್ ಜತೆ ಹೋಲಿಸಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು?

    ಸತ್ಯಮೂರ್ತಿ ಪಾತ್ರ ನೋಡಿ ಡಾ.ರಾಜ್ ಹೇಳಿದ್ದೇನು?

    ಸತ್ಯಮೂರ್ತಿ ಪಾತ್ರ ನೋಡಿ ಡಾ.ರಾಜ್ ಹೇಳಿದ್ದೇನು?

    ಸೂರ್ಯವಂಶ ಸಿನಿಮಾದಲ್ಲಿ ಎಲ್ಲರ ಅಚ್ಚುಮೆಚ್ಚಿನ ಪಾತ್ರ ಸತ್ಯಮೂರ್ತಿ ಪಾತ್ರ. ಡಾ. ರಾಜ್ ಕುಮಾರ್ ಸಹ ಈ ಪಾತ್ರಕ್ಕೆ ಫಿದಾ ಆಗಿದ್ದರು. ಸಿನಿಮಾ ನೋಡಿ ವಿಷ್ಣುವರ್ಧನ್ ಅವರಿಗೆ ಫೋನ್ ಮಾಡಿ, ಪಾತ್ರದ ಬಗ್ಗೆ ಹಾಡಿಹೊಗಳಿದ್ದರಂತೆ. ವಿಷ್ಮುವರ್ಧನ್ ಅವಪರಿಗೆ ಮೀಸೆ ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತೆ. ಅಷ್ಟು ಸುಲಭವಾಗಿ ಎಲ್ಲರಿಗೂ ಹೊಂದಿಕೆಯಾಗಲ್ಲ ಎಂದು ಹೇಳಿದ್ರಂತೆ.

    ವಿಷ್ಣುವರ್ಧನ್ ಇಮೇಜ್ ಬದಲಾಯಿಸಿದ ಸಿನಿಮಾ

    ವಿಷ್ಣುವರ್ಧನ್ ಇಮೇಜ್ ಬದಲಾಯಿಸಿದ ಸಿನಿಮಾ

    ಡಾ.ವಿಷ್ಣುವರ್ಧನ್ ಅವರು 'ಸೂರ್ಯವಂಶ' ಚಿತ್ರದಲ್ಲಿ ಮಾಡಿದ ಪಾತ್ರವನ್ನು ಹಿಂದೆಂದೂ ಮಾಡಿರಲ್ಲಿಲ್ಲ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್ ಅವರ ಸತ್ಯಮೂರ್ತಿ ಪಾತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಗಳಿಸಿತ್ತು. ಅಲ್ಲಿಂದ ವಿಷ್ಣುವರ್ಧನ್ ಅವರ ಇಮೇಜ್ ಕೂಡ ಬದಲಾಗಿ ಹೋಯಿತು. ಹಾಡುಗಳು ಕೂಡ ಅಷ್ಟೆ ಅದ್ಭುತವಾಗಿದ್ದವು. ಸಂಗೀತ ನಿರ್ದೇಶಕ ವಿ.ಮನೋಹರ್ ಅವರಿಗೂ ಮತ್ತೊಂದು ಬ್ರೇಕ್ ತಂದುಕೊಟ್ಟ ಸಿನಿಮಾ ಆಗಿತ್ತು.

    ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?

    ಹೆಚ್.ಡಿ.ಕೆ ನಿರ್ಮಾಣದ ಮೊದಲ ಸಿನಿಮಾ

    ಹೆಚ್.ಡಿ.ಕೆ ನಿರ್ಮಾಣದ ಮೊದಲ ಸಿನಿಮಾ

    ಹೆಚ್.ಡಿ ಕುಮಾರಸ್ವಾಮಿ ನಿರ್ಮಾಣದಲ್ಲಿ ಮೂಡಿ ಬಂದ ಮೊದಲ ಸಿನಿಮಾ ಇದಾಗಿತ್ತು. ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟಿಗೆ ಯಶಸ್ಸು ಗಳಿಸಿದ್ರು. ಎಸ್ ನಾರಾಯಣ್ ಹೇಳುವ ಪ್ರಕಾರ ಅಂದು ವ್ಯಾಪಾರ ದೃಷ್ಟಿಯಿಂದ ಈ ಸಿನಿಮಾ ಮಾಡದೆ, ಉತ್ತಮ ಸಿನಿಮಾ ಮಾಡಿಕೊಡಿ ಎಂಬುವುದು ಮಾತ್ರ ಕುಮಾರಸ್ವಾಮಿ ಅವರ ಮಾತಾಗಿತ್ತಂತೆ. ಅದರಂತೆ ಸಿನಿಮಾ ದೊಡ್ಡ ಮಟ್ಟಿಗೆ ಸಕ್ಸಸ್ ಕಂಡು ಕುಮಾರಸ್ವಾಮಿ ದೊಡ್ಡ ನಿರ್ಮಾಪಕರಾಗಿ ಹೊರಹೊಮ್ಮಲು ಕಾರಣವಾದ ಸಿನಿಮಾ ಇದು.

    ಎಸ್.ನಾರಾಯಣ ಪ್ರತಿಕ್ರಿಯೆ

    ಎಸ್.ನಾರಾಯಣ ಪ್ರತಿಕ್ರಿಯೆ

    ಡಾ.ವಿಷ್ಣುವರ್ಧನ್ ಅಭಿಮಾನಿಗಳು ಸೂರ್ಯವಂಶ 21 ವರ್ಷದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ನೋಡಿದ ಅನುಭವನ್ನು ಶೇರ್ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು, ಎಸ್.ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. "ಕಲ್ಲುಗಳು ಕೋಟಿ ಕೋಟಿ ಇರುತ್ತೆ. ಆದರೆ ಮೈಲಿಗಲ್ಲು ಅಪರೂಪ. ಹಾಗೆ ಸೂರ್ಯವಂಶ ಚಿತ್ರ ಒಂದು ಅಪರೂಪದ ರತ್ನ. ಸಾಹಸಸಿಂಹ ವಿಷ್ಣುವರ್ಧನ ಅಭಿಮಾನಿಗಳು ಸತ್ಯಮೂರ್ತಿಯ ರೂಪದಲ್ಲಿ ಜೀವಂತವಾಗಿರಿಸಿದ್ದೀರಿ" ಎಂದು ಹೇಳಿದ್ದಾರೆ.

    English summary
    Dr.Vishnuvardhan starrer Suryavamsha movie completed 21 years. Suryavamsha movie set to released on June 15th 2000.
    Monday, June 15, 2020, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X