For Quick Alerts
  ALLOW NOTIFICATIONS  
  For Daily Alerts

  ಸಿಸಿಬಿ ಕೈ ಸೇರಿತು 'ಇಂದ್ರಜಿತ್ ಫೈಲ್': 15 ತಾರೆಯರ ವಿವರ ಹಸ್ತಾಂತರ

  |

  ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ, ಹಲವು ನಟ-ನಟಿ ಹಾಗೂ ತಂತ್ರಜ್ಞರು ನಶೆಯ ಚಟಕ್ಕೆ ಬಿದ್ದಿದ್ದಾರೆ. ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಅಗತ್ಯವಿದ್ದರೆ ಪೊಲೀಸರು ಎಲ್ಲ ವಿವರ ನೀಡಲು ನಾನು ಸಿದ್ಧ ಎಂದು ಹೇಳಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಕಚೇರಿಗೆ ಭೇಟಿ ನೀಡಿ ತಮ್ಮ ಬಳಿಯಿದ್ದ ಸಾಕ್ಷ್ಯ ಹಸ್ತಾಂತರಿಸಿದ್ದಾರೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಸಿನಿ ತಾರೆಯರು ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಇಂದ್ರಜಿತ್‌ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್ ಹಿನ್ನೆಲೆ ಇಂದು ಬೆಳಗ್ಗೆ ಸಿಸಿಬಿ ಪೊಲೀಸರನ್ನು ಭೇಟಿ ಮಾಡಿ, ಸ್ಟಾರ್ಸ್ ಹೆಸರು, ಫೋಟೋಗಳು ಹಾಗೂ ವಿಡಿಯೋಗಳನ್ನು ಹಸ್ತಾಂತರಿಸಿದ್ದಾರೆ. ಮುಂದೆ ಓದಿ...

  ಹದಿನೈದು ಜನರ ಹೆಸರು-ವಿವರ ನೀಡಿದ್ದೇನೆ

  ಹದಿನೈದು ಜನರ ಹೆಸರು-ವಿವರ ನೀಡಿದ್ದೇನೆ

  ''ಡ್ರಗ್ಸ್ ಜಾಲಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಇದ್ದ ಎಲ್ಲ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದೇನೆ. ನಾನು ನೀಡಿರುವ ಮಾಹಿತಿ ಸಿಸಿಬಿ ಅವರಿಗೆ ಸಂಪೂರ್ಣವಾಗಿ ನೆರವಾಗಲಿದೆ. ಹತ್ತರಿಂದ ಹದಿನೈದು ಜನರ ಹೆಸರು, ಅವರ ಜೊತೆ ಸಂಬಂಧ ಹೊಂದಿದ್ದವರು, ಸ್ಥಳಗಳು, ಫೋಟೋಗಳು, ವಿಡಿಯೋ ಸಹ ನೀಡಿದ್ದೇನೆ'' ಎಂದು ಸಿಸಿಬಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಮಾದಕ ವಸ್ತು ಪ್ರಕರಣ: ಪೊಲೀಸರ ಮುಂದೆ ಹಾಜರಾದ ಇಂದ್ರಜಿತ್ ಲಂಕೇಶ್

  ಓರ್ವ ನಟಿಯ ವಿಡಿಯೋ ಇದೆ

  ಓರ್ವ ನಟಿಯ ವಿಡಿಯೋ ಇದೆ

  ಓರ್ವ ನಟಿ ಪಾರ್ಟಿಯಲ್ಲಿ ನಶೆ ಏರಿಸಿಕೊಂಡು ಅಸಭ್ಯವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೆ ಎಂದು ಹೇಳಲಾಗಿತ್ತು. ಈ ವಿಡಿಯೋವನ್ನು ಸಹ ಇಂದ್ರಜಿತ್ ಲಂಕೇಶ್ ಅವರು ಸಿಸಿಬಿ ಪೊಲೀಸರಿಗೆ ನೀಡಿದ್ದಾರೆ.

  ನಿನ್ನೆ ಮೊನ್ನೆ ಬಂದವರು ರಾಯಭಾರಿಗಳಿದ್ದಂತೆ

  ನಿನ್ನೆ ಮೊನ್ನೆ ಬಂದವರು ರಾಯಭಾರಿಗಳಿದ್ದಂತೆ

  ಕನ್ನಡ ಚಿತ್ರರಂಗಕ್ಕೆ ಹಾಗೂ ಕಿರುತೆರೆಗೆ ಕಳಂಕವಾಗಿರುವ ಈ ಡ್ರಗ್ಸ್ ಜಾಲದಲ್ಲಿ ಹೊಸ ಕಲಾವಿದರು ಹೆಚ್ಚಿದ್ದಾರೆ ಹಾಗೂ ನಿನ್ನೆ ಮೊನ್ನೆ ಬಂದವರು ರಾಯಭಾರಿಗಳಿದ್ದಂತೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಪೊಲೀಸರ ಮುಂದೆ ಸಹ ಅಂತವರ ಬಗ್ಗೆ ಮಾಹಿತಿ ನೀಡಿದ್ದಾರೆ.

  ಡ್ರಗ್ಸ್ ಎಫೆಕ್ಟ್: ಮೂರು ಘಟನೆಗಳಿಗೆ ಸ್ಪಷ್ಟನೆ ಕೇಳಿದ ಇಂದ್ರಜಿತ್ ಲಂಕೇಶ್

  ಹೆಸರು ಹೇಳುವುದರಿಂದ ತನಿಖೆಗೆ ಅಡ್ಡಿಯಾಗುತ್ತೆ

  ಹೆಸರು ಹೇಳುವುದರಿಂದ ತನಿಖೆಗೆ ಅಡ್ಡಿಯಾಗುತ್ತೆ

  ಡ್ರಗ್ಸ್ ಜಾಲದಲ್ಲಿರುವ ನಟ-ನಟಿಯರ ಹೆಸರು ಬಹಿರಂಗವಾಗಿ ಹೇಳುವುದರಿಂದ ಪೊಲೀಸರ ತನಿಖೆಗೆ ಅಡ್ಡಿ ಆಗುತ್ತೆ. ಇದನ್ನು ನಾನು ಇಂಡಸ್ಟ್ರಿಯ ಒಳಿತಿಗಾಗಿ ಮತ್ತು ಮುಂದಿನ ಪೀಳಿಗೆಯ ಒಳಿತಿಗಾಗಿ ಮಾಡುತ್ತಿದ್ದೇನೆ. ಹೆಸರು ಬಹಿರಂಗಪಡಿಸಿ ವೈಯಕ್ತಿಕವಾಗಿ ಅವರಿಗೆ ನೋವು ಉಂಟು ಮಾಡುವುದು ಅಥವಾ ಇನ್ನೊಂದು ಮಾಡುವುದು ನನ್ನ ಉದ್ದೇಶವಲ್ಲ'' ಎಂದು ಇಂದ್ರಜಿತ್ ಮಾಹಿತಿ ನೀಡಿದ್ದಾರೆ.

  ಪೊಲೀಸರ ಮಾಹಿತಿ ಕಲೆ ಹಾಕಿದ್ದಾರೆ

  ಪೊಲೀಸರ ಮಾಹಿತಿ ಕಲೆ ಹಾಕಿದ್ದಾರೆ

  ''ನಾನು ನೀಡಿದ ವಿವರಕ್ಕೂ ಮೊದಲೇ ಸಿಸಿಬಿ ಪೊಲೀಸರೇ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ನನ್ನ ಸಾಕ್ಷ್ಯ ಮತ್ತು ವಿವರಗಳ ಸಹಕಾರದೊಂದಿಗೆ ಈ ಬಗ್ಗೆ ತನಿಖೆ ಮಾಡಲಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಯಶಸ್ಸು ಸಾಧಿಸುತ್ತಾರೆ ಎಂಬ ನನಗೆ ನಂಬಿಕೆ ಇದೆ' ಎಂದು ಇಂದ್ರಜಿತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

  English summary
  Drug Mafia in Sandalwood: Director Indrajit Lankesh has shares evidence and information to CCB police today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X