For Quick Alerts
  ALLOW NOTIFICATIONS  
  For Daily Alerts

  ಸಂಜನಾ ಅರೆಸ್ಟ್: ಬೆಳಗ್ಗೆಯಿಂದ ಇಲ್ಲಿವರೆಗೂ ನಡೆದ ಬೆಳವಣಿಗೆಯ ವಿವರ

  |

  ''ಡ್ರಗ್ಸ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಇದುವರೆಗೂ ನನಗೆ ನೋಟಿಸ್ ಕೊಟ್ಟಿಲ್ಲ, ನೋಟಿಸ್ ಕೊಟ್ಟರೆ ಕಾನೂನು ಗೌರವಿಸಿ ವಿಚಾರಣೆಗೆ ಹಾಜರಾಗ್ತೀನಿ.....'' ಎಂದು ಹೇಳುತ್ತಿದ್ದ ಸಂಜನಾಗೆ ಮಂಗಳವಾರ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಶಾಕ್ ನೀಡಿದರು.

  Recommended Video

  ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Filmibeat Kannada

  ಸರ್ಚ್ ವಾರೆಂಟ್ ತಗೊಂಡು ಸಂಜನಾ ಮನೆ ಪ್ರವೇಶ ಮಾಡಿದ ಸಿಸಿಬಿ ಅಧಿಕಾರಿಗಳು, ಬೆಳಗ್ಗೆ ಸುಮಾರು 10 ಗಂಟೆಗೆ ವಶಕ್ಕೆ ಪಡೆದುಕೊಂಡು ಅರೆಸ್ಟ್ ಸಹ ಮಾಡಿದರು. ''ಡ್ರಗ್ಸ್ ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ'' ಎಂದು ಪದೇ ಪದೇ ಹೇಳುತ್ತಿದ್ದ ಸಂಜನಾ ಈಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಹಾಗಾದ್ರೆ, ಬೆಳಗ್ಗೆಯಿಂದ ಏನೆಲ್ಲಾ ಬೆಳವಣಿಗೆ ನಡೆದಿದೆ? ಮುಂದೆ ಓದಿ....

  ಸಂಜನಾ ಗಲ್ರಾನಿ ಬಂಧನ: ಸಿಸಿಬಿ ಜಂಟಿ ಆಯುಕ್ತರು ಹೇಳಿದ್ದೇನು?ಸಂಜನಾ ಗಲ್ರಾನಿ ಬಂಧನ: ಸಿಸಿಬಿ ಜಂಟಿ ಆಯುಕ್ತರು ಹೇಳಿದ್ದೇನು?

  6.30ಕ್ಕೆ ಸಂಜನಾ ಮನೆಗೆ ಸಿಸಿಬಿ ಪ್ರವೇಶ

  6.30ಕ್ಕೆ ಸಂಜನಾ ಮನೆಗೆ ಸಿಸಿಬಿ ಪ್ರವೇಶ

  ನಟಿ ಸಂಜನಾ ಅವರ ಆಪ್ತ ರಾಹುಲ್ ಬಂಧನವಾದ ದಿನದಿಂದ ಈ ಪ್ರಕರಣದಲ್ಲಿ ಸಂಜನಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಸಿಸಿಬಿ ಅಧಿಕಾರಿಗಳು ಸಂಜನಾಗೆ ಯಾವುದೇ ನೋಟಿಸ್ ನೀಡಿರಲಿಲ್ಲ. ಆದ್ರೆ, ಮಂಗಳವಾರ ಬೆಳಗ್ಗೆ ದಿಢೀರ್ ಅಂತ ಇಂದಿರಾ ನಗರದಲ್ಲಿರುವ ಸಂಜನಾಗೆ ಸಿಸಿಬಿ ಎಂಟ್ರಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ.

  ಸರ್ಚ್ ವಾರೆಂಟ್ ಇದ್ಯಾ?

  ಸರ್ಚ್ ವಾರೆಂಟ್ ಇದ್ಯಾ?

  ಬೆಳ್ಳಂಬೆಳಗ್ಗೆ ಮನೆಗೆ ಸಿಸಿಬಿ ಅಧಿಕಾರಿಗಳು ಬಂದಿರುವುದರಿಂದ ಗಾಬರಿಯಾದ ನಟಿ ಸಂಜನಾ, ಆರಂಭದಲ್ಲಿ ನೀವು ಯಾರು? ಮನೆಗೆ ಬರಬೇಡಿ, ಸರ್ಚ್ ವಾರೆಂಟ್ ಇದ್ಯಾ? ಎಂದು ಪ್ರಶ್ನಿಸಿದ್ದಾರೆ. ನಂತರ ಕೋರ್ಟ್‌ನಿಂದ ಪಡೆದುಕೊಂಡಿರುವ ವಾರೆಂಟ್ ತೋರಿಸಿದ ಬಳಿಕ ಸಂಜನಾ ಸುಮ್ಮನಾಗ್ತಾರೆ ಎಂದು ತಿಳಿದು ಬಂದಿದೆ.

  ಡ್ರಗ್ಸ್ ಪ್ರಕರಣ: ಸಿಸಿಬಿ ವಶಕ್ಕೆ ನಟಿ ಸಂಜನಾ ಗಲ್ರಾನಿಡ್ರಗ್ಸ್ ಪ್ರಕರಣ: ಸಿಸಿಬಿ ವಶಕ್ಕೆ ನಟಿ ಸಂಜನಾ ಗಲ್ರಾನಿ

  ಅಧಿಕಾರಿಗಳಿಂದ ತೀವ್ರ ಶೋಧ

  ಅಧಿಕಾರಿಗಳಿಂದ ತೀವ್ರ ಶೋಧ

  8 ಜನರ ಸಿಸಿಬಿ ತಂಡ ಸಂಜನಾಗೆ ಸಂಬಂಧಿಸಿದ ಮನೆಯಲ್ಲಿ ಸಂಪೂರ್ಣವಾಗಿ ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ವಸ್ತುಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದರು. ಸಂಜನಾ ಅವರ ಸುತ್ತಮುತ್ತ ಮನೆಯವರ ಬಳಿ ಸಹ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

  ಸಂಜನಾ ಅರೆಸ್ಟ್!

  ಸಂಜನಾ ಅರೆಸ್ಟ್!

  ಸುಮಾರು 10 ಗಂಟೆ ಅಥವಾ 10.30 ರ ಸಮಯಕ್ಕೆ ನಟಿ ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ಪಡೆದುಕೊಂಡರು. ಪೊಲೀಸರ ವಾಹನದಲ್ಲಿ ಸಿಸಿಬಿ ಕಚೇರಿಗೆ ಕರೆದುಕೊಂಡು ಸಂಜನಾ ಅವರನ್ನು ಬಂಧಿಸಲಾಯಿತು.

  ಕೋರ್ಟ್‌ ಮುಂದೆ ಹಾಜರ್

  ಕೋರ್ಟ್‌ ಮುಂದೆ ಹಾಜರ್

  ಸಂಜೆ ವೇಳೆಗೆ 8ನೇ ಎಸಿಎಂಎಂ ಕೋರ್ಟ್‌ ಮುಂದೆ ನಟಿ ಸಂಜನಾ ಅವರನ್ನು ಹಾಜರು ಪಡಿಸಲಾಯಿತು. ಈ ವೇಳೆ 8 ದಿನಗಳ ಕಾಲ ಸಿಸಿಬಿ ವಶಕ್ಕೆ ಬೇಕು ಎಂದು ನ್ಯಾಯಾಧೀಶರ ಮುಂದೆ ಪೊಲೀಸರು ಮನವಿ ಮಾಡಿದರು. ಆದರೆ, ಐದು ದಿನಗಳ ಕಾಲ ನ್ಯಾಯಾಧೀಶರು ಸಿಸಿಬಿ ವಶಕ್ಕೆ ನೀಡುವಂತೆ ಆದೇಶಿಸಿದರು.

  ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್

  ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್

  ಐದು ದಿನಗಳ ಸಂಜನಾರನ್ನು ಸಿಸಿಬಿ ವಶಕ್ಕೆ ನೀಡಿದ ಹಿನ್ನೆಲೆ ಅವರನ್ನು ಸಂಜೆ ವೇಳೆ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಈ ಮಧ್ಯೆ ವೈದ್ಯಕೀಯ ತಪಾಸಣೆ ಸಹ ಮಾಡಲಾಗಿದ್ದು, ಮುಂದಿನ ವಿಚಾರಣೆ ನಾಳೆ ಮುಂದುವರಿಯಲಿದೆ.

  English summary
  Sandalwood Drug Case: Kannada actress Sanjjana Galrani sent to five-day CCB Custody by 8th ACMM Court.
  Tuesday, September 8, 2020, 18:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X