For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್‌ಗೆ 'ಕನ್ನಡ ಕಲಾತಿಲಕ' ಬಿರುದು ನೀಡಿ ಗೌರವಿಸಿದ ದುಬೈ ಕನ್ನಡಿಗರು

  |

  ಭಾರತೀಯ ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಅನಿವಾಸಿ ಕನ್ನಡಿಗರು ಸುದೀಪ್ ಅವರನ್ನು ಗೌರವಿಸಿದ್ದಾರೆ. ದುಬೈನಲ್ಲಿ ಅಭಿನಯ ಚಕ್ರವರ್ತಿಯನ್ನು ಭೇಟಿ ಮಾಡಿ ಅಭಿನಂದಿಸಿದ ಕನ್ನಡಿಗರು 'ಕನ್ನಡದ ಕಲಾತಿಲಕ' ಎಂದು ಬಿರುದು ನೀಡಿದ್ದಾರೆ.

  ಜನವರಿ 31 ರಂದು ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಸುದೀಪ್ ನಟನೆಯ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಲ್ಲದೇ, 25 ವರ್ಷದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

  'ವಿಕ್ರಾಂತ್ ರೋಣ' ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವಾಗ ಆರಂಭವಾಗುತ್ತೆ? ಇಲ್ಲಿದೆ ಮಾಹಿತಿ

  ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳು ಒಟ್ಟುಗೂಡಿ ಸುದೀಪ್ ಅವರಿಗೆ 'ಕನ್ನಡ ಕಲಾತಿಲಕ' ಎಂದು ಬಿರುದು ಘೋಷಿಸಿದ್ದಾರೆ.

  ದುಬೈನಲ್ಲಿ ಸುದೀಪ್ ಅವರಿಗೆ ಬಿರುದು ಪ್ರದಾನ ಮಾಡಿರುವುದು ಹಾಗೂ ಗೌರವಿಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಾದಿದೆ ಮತ್ತೊಂದು ಸರ್ಪ್ರೈಸ್: ಏನದು?

  ಅಭಿಮಾನಿಗಳಿಗೆ ಮತ್ತೊಂದು ಸಪ್ರೈಸ್ ಕೊಟ್ಟ ಕಿಚ್ಚ ಸುದೀಪ್ | Filmibeat Kannada

  'ವಿಕ್ರಾಂತ್ ರೋಣ' ಸಿನಿಮಾದ ಕಾರ್ಯಕ್ರಮ ಹಿನ್ನೆಲೆ ದುಬೈಗೆ ತೆರಳಿದ್ದ ಸುದೀಪ್ ಬೆಂಗಳೂರಿಗೆ ಬಂದ ತಕ್ಷಣ, ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಬಿಗ್ ಬಾಸ್ ಆರಂಭವಾಗುತ್ತೆ ಎಂದು ವಾಹಿನಿಯ ಮುಖ್ಯಸ್ಥರು ಮಾಹಿತಿ ನೀಡಿದ್ದರು. ಆದರೆ, ಸ್ಪಷ್ಟವಾದ ದಿನಾಂಕ ಘೋಷಿಸಿರಲಿಲ್ಲ.

  English summary
  Dubai Kannadigas honoured Kiccha Sudeep for completing 25 years in Indian Cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X