»   » ವರ್ಮಾರ ತೆಲುಗಿನ 'ಐಸ್ ಕ್ರೀಮ್' ಮಾಡುತ್ತಿದೆ ಕನ್ನಡದ ಕಗ್ಗೊಲೆ

ವರ್ಮಾರ ತೆಲುಗಿನ 'ಐಸ್ ಕ್ರೀಮ್' ಮಾಡುತ್ತಿದೆ ಕನ್ನಡದ ಕಗ್ಗೊಲೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬಗ್ಗೆ ಪರ-ವಿರೋಧದ ಹೋರಾಟ ನಡೆಯುತ್ತಿರುವಾಗಲೇ ಸಿನಿಮಾವೊಂದು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿ ಹಿಂದಿನ ಬಾಗಿಲಿನಿಂದ ಗಾಂಧಿನಗರಕ್ಕೆ ಬಲಗಾಲಿಟ್ಟು ಒಳಗೆ ಬಂದಿದೆ.

'ಕಿಲ್ಲಿಂಗ್ ವೀರಪ್ಪನ್'ನಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಈ ಮೂಲಕ ಇದೀಗ ಮತ್ತೆ ಸುದ್ದಿ ಮಾಡಿದ್ದಾರೆ.[ತೆಲಂಗಾಣ ಕನ್ನಡಿಗರಿಗೆ ಕನ್ನಡ-ತೆಲುಗು ನಿರ್ಮಾಪಕರಿಂದ ಭಾರಿ ಮೋಸ]

ನಿರ್ದೇಶಕ ರಾಮ್ ಗೋಪಲ್ ವರ್ಮಾ ಆಕ್ಷನ್-ಕಟ್ ಹೇಳಿದ್ದ, 2014 ರಲ್ಲಿ ತೆಲುಗಿನಲ್ಲಿ ತೆರೆ ಕಂಡ ಹಾರರ್-ಥ್ರಿಲ್ಲರ್ ಸಿನಿಮಾ 'ಐಸ್ ಕ್ರೀಮ್'. ಚಿತ್ರ ಇದೀಗ ಕನ್ನಡಕ್ಕೆ ಡಬ್ ಆಗಿ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ.

ತೆಲುಗಿನ 'ಐಸ್ ಕ್ರೀಮ್ ಭಾಗ-1' ಸಿನಿಮಾ ಕನ್ನಡಕ್ಕೆ 'ಐಸ್ ಫ್ರೂಟ್' ಎಂಬುದಾಗಿ ಡಬ್ ಆಗಿದೆ. ಇದೀಗ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿರುವುದರಿಂದ ಮತ್ತೆ ಡಬ್ಬಿಂಗ್ ಹೋರಾಟಕ್ಕೆ ಜೀವ ಬಂದಂತಾಗಿದೆ.['ಕನ್ನಡ ರಾಜ್ಯೋತ್ಸವ'ದಿಂದ 'ಡಬ್ಬಿಂಗ್' ಸಿನಿಮಾಗಳು ತೆರೆಗೆ?]

ಈ ಸಿನಿಮಾದಲ್ಲಿ ನಮ್ಮ ಭಾಷೆ ಕನ್ನಡದ ಕಗ್ಗೊಲೆ ಆಗಿದ್ದು, ಡಬ್ ಮಾಡಿರುವ ಈ ಚಿತ್ರದಲ್ಲಿ ಕನ್ನಡ ಭಾಷೆಯನ್ನು ಬಹಳ ಕೆಟ್ಟದಾಗಿ ಬಳಸಲಾಗಿದೆ ಎಂಬ ವಿಷಯ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.....

ಇನ್ನು ಇದರ ಬಗ್ಗೆ ಪ್ರತಿಕ್ರಿಯಿಸಿರುವ ಖ್ಯಾತ ನಿರ್ದೇಶಕರು ಹಾಗೂ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಹಾಗೂ ಕೆಲವು ಸಿನಿಪಂಡಿತರು ಏನು ಹೇಳಿದ್ದಾರೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮಾರ್ಚ್ 17 ರಿಲೀಸ್

ವಾಲ್ಗೋ ಎನ್ನುವ ವಿಡಿಯೋ ಹೆಸರಿನ ಸಂಸ್ಥೆಯೊಂದು ಗುರುವಾರ ಮಾರ್ಚ್ 17 ರಂದು ತೆಲುಗಿನ 'ಐಸ್ ಕ್ರೀಮ್' ಚಿತ್ರವನ್ನು ಕನ್ನಡಕ್ಕೆ 'ಐಸ್ ಫ್ರೂಟ್' ಎಂಬುದಾಗಿ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದಾದ ಕೆಲವೇ ಘಂಟೆಗಳಲ್ಲಿ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಬಿಂಗ್ ಕುರಿತಾದ ವಿಷಯಕ್ಕೆ ಮತ್ತೆ ಜೀವ ಬಂದಂತಾಗಿದೆ.['ಡಬ್ಬಿಂಗ್' ಪ್ರತಿಭಟನೆ ಮರೆತುಬಿಟ್ರಾ ವಾಟಾಳ್ ನಾಗರಾಜ್?]

ಏನಿದು 'ಐಸ್ ಕ್ರೀಮ್'

ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿದ್ದ ಹಾರರ್-ಥ್ರಿಲ್ಲರ್ 'ಐಸ್ ಕ್ರೀಮ್' ಚಿತ್ರದಲ್ಲಿ ನಟಿ ತೇಜಸ್ವಿನಿ ಮತ್ತು ನಟ ನವದೀಪ್ ಅವರು ಮಿಂಚಿದ್ದರು. ನವದೀಪ್ ಪ್ರೇತಗಳಿರುವ ಮನೆಯಿಂದ ಹೊರಗೆ ಹೋದ ತಕ್ಷಣ ಒಂಟಿಯಾಗಿರುವ ಹುಡುಗಿಗೆ ಪದೆ ಪದೇ ಡೋರ್ ಬೆಲ್ ಆಗುವ ಸದ್ದು ಕೇಳಿಸುತ್ತದೆ. ಆದರೆ ಹೊರಗೆ ಬಂದು ನೋಡಿದರೆ ಯಾರು ಇರೋದಿಲ್ಲಾ. ಚಿತ್ರದಲ್ಲಿ ಪದೇ ಪದೇ ಇದೇ ರಿಪೀಟ್ ಆಗುತ್ತದೆ. ಆದರೆ ಈ ಸಿನಿಮಾ ಪ್ಲಾಪ್ ಆಗಿತ್ತು. ಬೆಂಗಳೂರಿನಲ್ಲಿ ನಡೆದ ನಿಜ ಘಟನೆ ಎಂದು ವರ್ಮಾ ಹೇಳಿಕೊಂಡಿದ್ದರು.

ಕೃಷ್ಣೇ ಗೌಡರು ಏನಂತಾರೆ?

'ಇದೊಂದು ಒಳ್ಳೆಯ ಬೆಳವಣಿಗೆ, ನಾನು ಕೂಡ ಈಗಾಗಲೇ 3 ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದ್ದೇನೆ. ನನ್ನ ಡಬ್ಬಿಂಗ್ ಚಿತ್ರಗಳು ಸೆನ್ಸಾರ್ ಮುಂದಿವೆ , ಸೆನ್ಸಾರ್ ಮಂಡಳಿಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಅನ್ನೋ ನಂಬಿಕೆ ನಮಗಿನ್ನೂ ಇದೆ. ಸೆನ್ಸಾರ್ ಮಾಡಲಿಲ್ಲ ಅಂದರೆ, ಬುಧವಾರ ಹೈಕೋರ್ಟ್ ಮೆಟ್ಟಿಲು ಏರುತ್ತೇನೆ ಅಂತಾರೆ ಡಬ್ಬಿಂಗ್ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೃಷ್ಣೇಗೌಡರು.

ಜಿ.ಆನಂದ್ ಬನವಾಸಿ ಬಳಗ (ಡಬ್ಬಿಂಗ್ ಪರ ಹೋರಾಟಗಾರ)

ಬನವಾಸಿ ಬಳಗದ ಜಿ.ಆನಂದ್ ಅವರು ಈ ಬೆಳವಣಿಗೆಯನ್ನು ಸ್ವಾಗತಿಸುತ್ತಾರೆ. 'ಇದು ಅಯ್ಕೆ ಸ್ವಾತಂತ್ರ್ಯಕ್ಕೆ ದಕ್ಕಿದ ಸಣ್ಣ ಜಯ. ಯೂಟ್ಯೂಬ್ ನಲ್ಲಿ ಮಾತ್ರವಲ್ಲ ಥಿಯೇಟರ್ ನಲ್ಲೂ ಡಬ್ಬಿಂಗ್ ಚಿತ್ರಗಳು ರಿಲೀಸ್ ಆಗಬೇಕು. ನೋಡುಗನಿಗೆ ತಾನು ಬಯಸಿದ ಸಿನಿಮಾ ಸಿಗುವಂತಾಗಬೇಕು. ಮುಂದೆ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮ್ಮದು ಅಂತಾರೆ ಡಬ್ಬಿಂಗ್ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಾ ಬಂದಿರುವ ಬನವಾಸಿ ಬಳಗದ ಆನಂದ್ ಜಿ ಅವರು.

ಸಾ.ರಾ ಗೋವಿಂದು

'ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿರುವ ವಿಷಯ ನಮಗೇನೂ ಗೊತ್ತಿಲ್ಲ. ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ. ಅಲ್ಲದೇ ಡಬ್ಬಿಂಗ್ ವಿಚಾರದ ಬಗ್ಗೆ ಚರ್ಚೆ ಆಗಬೇಕಿದೆ' ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಅವರು.

ನಿರ್ದೇಶಕ ಬಿ.ಸುರೇಶ್

'ನಾನು ಕೂಡ ಆ ಸಿನಿಮಾ ನೋಡಿದೆ. ಡಬ್ಬಿಂಗ್ ಸಿನಿಮಾ ಬಂದರೆ, ಕನ್ನಡ ಭಾಷೆಯನ್ನು ಹೇಗೆಲ್ಲಾ ಕೊಲೆ ಮಾಡುತ್ತಾರೆ ಅನ್ನೋದಕ್ಕೆ ಇದು ಉತ್ತಮ ನಿದರ್ಶನ. ಡಬ್ಬಿಂಗ್ ಎನ್ನುವುದು ಕಲಾಕೃತಿಯನ್ನು ವಿಕೃತಿ ಮಾಡುವ ಕೆಲಸ. ಹಿಂಬಾಗಿಲಿನಿಂದ ಇಂತಹ ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಭಾಷೆಯನ್ನು ಹಾಳುಗೆಡವುತ್ತಿದೆ. ಡಬ್ಬಿಂಗ್ ಅನ್ನುವುದು ಕನ್ನಡದ ಮೇಲೆ ಆಗುತ್ತಿರುವ ಅತ್ಯಾಚಾರ' ಎನ್ನುತ್ತಾರೆ ಡಬ್ಬಿಂಗ್ ವಿರೋಧಿ ಹೋರಾಟಗಾರ ನಿರ್ದೇಶಕ ಬಿ.ಸುರೇಶ್ ಅವರು.

English summary
A dubbed version of Ram Gopal Varma's 'Ice Cream' surfaced on YouTube. On Thursday, (March 17th) Ram Gopal Varma's Telugu film 'Ice Cream' appeared in its Kannada dubbed avatar 'Ice Fruit' on the video sharing site.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada