»   » ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್

ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಡಬ್ಬಿಂಗ್' ಬೇಕೋ.? ಬೇಡ್ವೋ.? ಎಂಬ ಕುರಿತು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಡಬ್ಬಿಂಗ್ ವಿವಾದ ಸಿ.ಸಿ.ಐ ಮೆಟ್ಟಿಲು ಏರಿದ್ಮೇಲಂತೂ, 'ಡಬ್ಬಿಂಗ್' ವಿರುದ್ಧ ದನಿ ಎತ್ತಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.

ಹೀಗಿರುವಾಗಲೇ, ಇದೇ ಶುಕ್ರವಾರ (ಮಾರ್ಚ್ 3) ಕನ್ನಡಕ್ಕೆ ಡಬ್ ಆಗಿರುವ ತಮಿಳಿನ ಹಿಟ್ ಸಿನಿಮಾ 'ಸತ್ಯದೇವ್ ಐಪಿಎಸ್' ಬಿಡುಗಡೆ ಆಗಲಿದೆ. ಸ್ಯಾಂಡಲ್ ವುಡ್ ನಲ್ಲಿ ಇಂತಹ ಡಬ್ಬಿಂಗ್ ಚಟುವಟಿಕೆ ವಿರೋಧಿಸಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ....

ಡಬ್ಬಿಂಗ್ ನಮ್ಮ ಸಂಸ್ಕೃತಿ ಅಲ್ಲ.!

''ಆತ್ಮೀಯ ಕನ್ನಡಿಗರೇ.. ಕನ್ನಡಾಭಿಮಾನಿಗಳೇ,
ಚಿತ್ರ ಪ್ರೇಮಿಗಳೇ, ಡಬ್ಬಿಂಗ್ ನಮ್ಮ ಸಂಸ್ಕೃತಿಯಲ್ಲ.
ನಾವು ಅದನ್ನು ವಿರೋಧಿಸುತ್ತೇವೆ. ನಮ್ಮ ಮತ್ತು ಕನ್ನಡಾಭಿಮಾನಿಗಳಾದ ನೀವು ಸಹ ಇದನ್ನು ವಿರೋಧಿಸುವಿರಿ ಎಂದು ನಂಬಿದ್ದೇವೆ'' - ಪ್ರಜ್ವಲ್ ದೇವರಾಜ್, ನಟ ['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

ನೀವೂ ಕೈ ಜೋಡಿಸಿ

'ನಮ್ಮ ನಿರ್ಮಾಪಕರಿಗೂ, ಪ್ರದರ್ಶಕರಿಗೂ, ವಿತರಿಕರಿಗೂ ಇದನ್ನು ತಿಳಿಸುವೆವು.. ಮತ್ತು ಡಬ್ಬಿಂಗ್ ಗೆ ಅವಕಾಶ, ಪ್ರೋತ್ಸಾಹ ನೀಡುವ ಎಲ್ಲರಿಂದ ದೂರ ಉಳಿಯುವೆವು. ಇದಕ್ಕೆ ನೀವು ಸಹ ಕೈ ಜೋಡಿಸಿ'' - ಪ್ರಜ್ವಲ್ ದೇವರಾಜ್, ನಟ [ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ]

ಡಬ್ಬಿಂಗ್ ನ ಹೊರಗಿಡಿ

''ಇದೆಲ್ಲ ಸ್ವಾಭಿಮಾನಿ ಕನ್ನಡಿಗನ ಕೆಲಸವಲ್ಲ. ಡಾ.ರಾಜ್, ಡಾ.ವಿಷ್ಣು, ಡಾ.ಅಂಬರೀಶ್ ಅವರನ್ನೆಲ್ಲ ಅಣ್ಣ ಎಂದು ಹಣ, ಹೆಸರು ಸಿಕ್ಕ ಮೇಲೆ ಕನ್ನಡದ ತಲೆ ಕಾಯುವ ಬದಲು ತಲೆ ತೆಗೆಯಲು ನಿಂತ ಕೆಲ ಮೀರ್ ಸಾಧಕರದು. ಇಂತಹವರನ್ನು ಮತ್ತು ಡಬ್ಬಿಂಗ್ ಅನ್ನು ನಮ್ಮಂತೆ ನೀವೂ ಸಹ ಹೊರಗಿಡಿ'' - ಪ್ರಜ್ವಲ್ ದೇವರಾಜ್, ನಟ

ಬೆರಕೆ, ಕಲಬೆರಕೆ ಅಳಿಯಲಿ

''ಕನ್ನಡ ಕಲಾವಿದರು, ತಂತ್ರಜ್ಞರು, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಸಹಕರಿಸಿ.. ಬೆರಕೆ, ಕಲಬೆರಕೆ ಅಳಿಯಲಿ.. ಶಾಸ್ತ್ರೀಯ ಕನ್ನಡ ಉಳಿಯಲಿ.. ಜೈ ಕನ್ನಡ'' - ಎಂದು ಫೇಸ್ ಬುಕ್ ನಲ್ಲಿ ನಟ ಪ್ರಜ್ವಲ್ ದೇವರಾಜ್ ಬರೆದುಕೊಂಡಿದ್ದಾರೆ.['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

English summary
Kannada Actor Prajwal Devaraj has taken his Facebook account to express displeasure over Dubbing in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada