twitter
For Quick Alerts
ALLOW NOTIFICATIONS
For Daily Alerts

ಡಬ್ಬಿಂಗ್ ನಿಂದ ಸಂಸ್ಕೃತಿಗೆ ಹಾನಿ ಎಂಬುದು ನಿಜವೇ?

By * ರವೀಂದ್ರ ಕೊಟಕಿ, ಚಿಂತಾಮಣಿ

Next »

« Previous

Dubbing threat to Culture
ನಾವು ಡಬ್ಬಿಂಗ್ ವಿಷಯದಲ್ಲಿ ಕಲಾವಿದರು-ಕಲಾರಂಗದ ಅಳಿವು-ಉಳಿವಿಗಿಂತ ಹೆಚ್ಚಾಗಿ ಇದರಿಂದ ನಮ್ಮ ಸಂಸ್ಕೃತಿಯ ಮೇಲೆ ಉಂಟಾಗುವ ದೂರಗಾಮಿ ಪರಿಣಾಮಗಳೇನು ಎಂಬುವುದರಡೆಗೆ ಚಿಂತಿಸಿದರೆ ಉತ್ತಮ. ಡಬ್ಬಿಂಗ್‌ನಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ ಎಂಬುವುದು ಕೂಡ ಸಿನಿಮಾ ಮಂದಿಯ ವಾದ.

ಈಗೀನ ಕನ್ನಡ ಸಿನಿಮಾಗಳು ಎಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಗೆ ಪೂರಕವಾಗಿದೆ? ಎಂಬುವುದು ಡಬ್ಬಿಂಗ್ ಪ್ರಿಯರ ಪ್ರಶ್ನೆ. ಎರಡರಲ್ಲಿ ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಒಂದು ಸಂಸ್ಕೃತಿ ಮತ್ತು ಅದರ ಸಾಂಸ್ಕೃತಿಕತ್ವದ ಅಳಿವು-ಉಳಿವು ಭಾಷೆಯ ಮೇಲೆ ನಿಂತಿರುತ್ತದೆ. ಒಂದು ಭಾಷೆ ಅವನಿತಿಯ ಹಾದಿ ಹಿಡಿದಂತೆ ಅದರ ಮೂಲಬೇರಾದ ಸಂಸ್ಕೃತಿ ಕೂಡ ನಾಶವಾಗುತ್ತದೆ.

ಹೀಗಾಗಿ ನಾವು ಮುಖ್ಯವಾಗಿ ಕಾಳಜಿ-ಕಳಕಳಿ ವ್ಯಕ್ತಪಡಿಸಬೇಕಿರುವುದು ನಮ್ಮ ಭಾಷೆ-ಸಂಸ್ಕೃತಿಯ ಮೇಲೆ ಇದರಿಂದ ಯಾವ ತರದ ಪ್ರಭಾವ ಬೀರುತ್ತೆ ಎಂಬುವುದರೇ ಮೇಲೆ ಹೊರತು ಕಲಾವಿದರು, ಅವರ ಅನ್ನದ ಪ್ರಶ್ನೆಯ ಮೇಲಲ್ಲ. ಸಂಸ್ಕೃತಿ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹೀಗಾಗಿ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಈ ಡಬ್ಬಿಂಗ್ ಸಿನಿಮಾ ಅಥವಾ ಧಾರಾವಾಹಿಗಳ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಿರುತ್ತದೆ.

ಪ್ರತಿಯೊಂದು ಭಾಷೆ ಸಿನಿಮಾ ಅದು ಯಾವ ತರದ ಸಿನಿಮಾವಾದರೂ (ಈಗೀನ ಲಾಂಗು ಮುಚ್ಚಿನಿಂದ ಹಿಡಿದು ಲವ್, ಸೇಟಿಮೆಂಟಿನವರಿಗೆ) ಸರಿಯೆ ಅದು ಆ ಭಾಷೆ ಮತ್ತು ಅಲ್ಲಿನ ಪರಿಸರದಿಂದ ಪ್ರಭಾವಿತವಾಗಿಯೇ ಹೊರಹೊಮ್ಮುತ್ತದೆ. ಹಳೆಯ ಸಿನಿಮಾಗಳ ಕಡೆಗೆ ನಾವು ಸ್ವಲ್ಪ ಗಮನ ಹರಿಸಿ ನೋಡಿದಾಗ ಇದು ಸುಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಉದಾಹರಣೆಗೆ: ಸ್ಕೂಲ್ ಮಾಸ್ಟರ್, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ನಾಗರಹಾವು, ಚೆಂದವಳ್ಳಿಯ ತೋಟದಂತ ಅನೇಕ ಸಿನಿಮಾಗಳು ಇಲ್ಲಿನ ಮಣ್ಣಿನಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳಿಂದ ಪ್ರಭಾವಿತವಾಗಿದ್ದ ಸಿನಿಮಾಗಳು. ಇವು ಇಲ್ಲಿಯ ಜನರ ಮಾತು, ಸಂಸ್ಕೃತಿಯನ್ನು ಬಿಂಬಿಸುವಂತೆ ರೂಪಿತ ಗೊಂಡಿದ್ದವು.

ಇದೇ ಸಿನಿಮಾಗಳನ್ನು ನೀವು ತೆಲುಗು ಅಥವಾ ತಮಿಳಿಗೆ ಡಬ್ ಮಾಡಿದ್ರೆ ಅಲ್ಲಿನ ಜನ ಹೇಗೆ ಸ್ವೀಕಾರಿಸುತ್ತಾರೆ? ನಮ್ಮ ಭಾಷೆ, ಅದರ ದೇಸಿತನ ಅವರ ಭಾಷೆ. ದೇಸಿತನದಿಂದ ವಿಭಿನ್ನವಾಗಿದೆ.

ಇವನ್ನು ಡಬ್ ಮಾಡಿದ್ರೆ ಅದು ಅಲ್ಲಿನ ದೇಸಿತನವನ್ನು ತೋರಿಸಲು ಸಾಧ್ಯವೆ? ಇಂತಹ ಅಪ್ಪಟ್ಟ ದೇಸಿ ಸಿನಿಮಾಗಳನ್ನು ರಿಮೇಕ್ ಮಾಡಿದರೂ ಅದನ್ನು ಅಲ್ಲಿಯ ಕಲಾವಿದರು, ಮತ್ತು ಅಲ್ಲಿಯ ದೇಸಿತನದಿಂದ ರೂಪಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ.

ಸ್ಕೂಲ್ ಮಾಸ್ಟರ್ ಇದೇ ಕಾರಣಕ್ಕೆ ತೆಲುಗು, ತಮಿಳು, ಹಿಂದಿಗಳಲ್ಲಿ ಕೂಡ ಅತ್ಯಂತ ಯಶಸ್ವಿ ಚಿತ್ರವಾಗಿದ್ದು. ಹಾಗಂತ ಎಲ್ಲಾ ರೀಮೇಕ್‌ಗಳಿಗೂ ಒಂದು ಭಾಷೆಯ ದೇಸಿತನ ಮತ್ತೊಂದು ಭಾಷೆಯಲ್ಲಿ ಸಿಗುತ್ತೆದೆಂದು ಹೇಳಲಾಗದು.

ಉದಾಹರಣೆಗೆ: ನಾಗರಹಾವು (ತ.ರಾ.ಸು ದೃಷ್ಟಿಯಲ್ಲಿ ಅದೊಂದು ಕೆರೆಹಾವು) ಕನ್ನಡ ಸಿನಿಮಾರಂಗ ಕಂಡ ಅದ್ಬುತವಾದ ಸಿನಿಮಾಗಳಲ್ಲಿ ಒಂದು. ನಾಗರಹಾವು ಸಿನಿಮಾದ ಹಿನ್ನೆಲೆ ದುರ್ಗದ ಕೋಟೆದೊಂದಿಗೆ ಜೋಡಿಕೊಂಡಿದೆ.

ನಾಗರಹಾವು ನೋಡುವ ಈಗೀನ ಕನ್ನಡದ ಎಳೆಯರಿಗೂ ಕೂಡ ದುರ್ಗದ ಕೋಟೆಯ ಹಿನ್ನಲೆ, ಒಬ್ವವನ ಕಥೆ ಇದೆಲ್ಲಾ ಅವರ ಮನಸಿಗೆ ತಟ್ಟುತ್ತದೆ. ಇದೇ ಸಿನಿಮಾವನ್ನು ತೆಲುಗಿಗೆ ರೀಮೇಕ್ ಮಾಡಲಾಯಿತು. 'ಕೊಡಿನಾಗು' ಎಂಬ ಹೆಸರಿನ ಈ ಸಿನಿಮಾದಲ್ಲಿ ಆ ಕಾಲದ ಸ್ಟಾರ್‌ನಟನಾಗಿದ್ದ ಶೋಭನ್‌ಬಾಬು ನಾಯಕನಾಗಿಸಿ, ತಿರುಪತಿಯ ಹತ್ತಿರದಲ್ಲಿರುವ ಚಂದ್ರಗಿರಿಬೆಟ್ಟ ಮತ್ತು ಅದರ ಹಿನ್ನೆಲೆಯನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡಿದರು. ಆದರೆ ಸಿನಿಮಾ ಫ್ಲಾಪಾಯಿತು.

ದುರ್ಗದ ಕೋಟೆ (ದುರ್ಗಾಸ್ತಮಾನ) ಕಥೆ ಸಿನಿಮಾಯಾಗುವ ಮೊದಲೇ ಜನರ ಕಣ್ಣಲ್ಲಿ ಅದೊಂದು ಹೃದಯಸ್ಪರ್ಶಿ ಕಾದಂಬರಿಯಾಗಿ ಜನರನ್ನು ಮುಟ್ಟಿತ್ತು. ಇಲ್ಲಿ ಜನರೊಂದಿಗೆ ಈ ಕಥೆಗೆ, ದುರ್ಗದ ಹಿನ್ನೆಲೆಗೆ ಒಂದು ಭಾವನಾತ್ಮಕತೆ ಇತ್ತು. ಹೀಗಾಗಿ ಜನರು ಅದನ್ನು ಸಿನಿಮಾದ ರೂಪದಲ್ಲಿಯೂ ಸ್ವೀಕರಿಸಿದರು.

ಅದೇ ತೆಲುಗಿಗೆ ಹೋದಾಗ ಸಿನಿಮಾ ಕನ್ನಡಿಗರಲ್ಲಿ ಮೂಡಿಸಿದ ಆ ಭಾವುಕತೆಯನ್ನು ಅಲ್ಲಿ ಮೂಡಿಸಿಲ್ಲ. ಒಂದು ರೀಮೇಕ್ ಸ್ಥಿತಿ ಹೀಗಿರಬೇಕಾದ್ರೆ ಒಂದು ಭಾಷೆಯ ಸಿನಿಮಾದ ಭಾಷಾಂತರ ಎಷ್ಟರ ಮಟ್ಟಿಗೆ ಇಲ್ಲಿಯ ದೇಸಿತನಕ್ಕೆ ಹತ್ತಿರವಾಗಿರುತ್ತದೆಂದು ಯೋಚಿಸಿ ನೋಡಿ ಸ್ವಾಮಿ.

ಯಾವುದೇ ಸಿನಿಮಾ ಗೆಲ್ಲಬೇಕಾದ್ರೆ ಅಲ್ಲಿಯ ದೇಸಿತನ ಇರಲ್ಲೇಬೇಕು. ದೇಸಿತನವಿರದ ಯಾವುದೇ ಸಿನಿಮಾ ಪ್ರೇಕ್ಷಕನ ಮನಗೆಲ್ಲುವುದಿಲ್ಲ. ನಮಗೆ ತೆಲುಗು-ತಮಿಳು ಸಿನಿಮಾಗಳನ್ನು ನೋಡಿದಾಗ ಸಂಭಾಷಣೆ ಸರಿಯಾಗಿ ಅರ್ಥವಾಗದೇ ಹೋದಾಗ ಛೇ ಕನ್ನಡದಲ್ಲಿ ಡಬ್ ಮಾಡಿದಿದ್ರೆ.. ಎಂಬ ಭಾವನೆ ಬರುವುದು ಸಹಜ.

ಇದೇನು ದೊಡ್ಡ ಅಪರಾಧವೇನು ಅಲ್ಲ. ಆದರೆ ಡಬ್ ಸಿನಿಮಾಗಳಿಗೆ ಯಾವುದಾದ್ರೂ ಮಾನದಂಡವಿದೆ? ಕೇವಲ ಉತ್ತಮವಾದ ಸಿನಿಮಾಗಳನ್ನು ಮಾತ್ರ (ಮತ್ತೆ ಇಲ್ಲಿ ಉತ್ತಮವಾದದ್ದು ಅಂದರೇನು? ಎಂಬ ಪ್ರಶ್ನೆ ಏಳುತ್ತದೆ) ಡಬ್ ಮಾಡಿ ಬಿಡುಗಡೆ ಮಾಡಲು ಸಾಧ್ಯವೆ? ಒಂದು ಸಿನಿಮಾ ಅಥವಾ ಧಾರಾವಾಹಿಗೆ ಡಬ್ಬಿಂಗ್ ಮಾಡಲು ಅವಕಾಶ ಕೊಟ್ಟರೆ ಉಳಿದವರಿಗೆ ಅವಕಾಶ ಕೂಡ ನ್ಯಾಯಸಮ್ಮತವಾಗಿ ನೀಡಲ್ಲೇಬೇಕಾಗುತ್ತದೆ.

ಇಲ್ಲಿ ಯಾವುದೇ ಸಿನಿಮಾ ಅಥವಾ ಧಾರಾವಾಹಿನ ಉತ್ತಮವಾದದ್ದು ಡಬ್ಬಿಂಗ್ ಮಾಡಲು ಯೋಗ್ಯವಾದದ್ದು ಎಂದು ನಿರ್ಧರಿಸಲು ಯಾವುದೇ ಮಾನದಂಡಗಳಿಲ್ಲ, ಮಾನದಂಡಗಳನ್ನು ರೂಪಿಸಿ ಕಾರ್ಯಚರಣೆಗೆ ತರಲು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವೂ ಇಲ್ಲವೆಂದ್ಮೇಲೆ ಯಾರಿಗೆ ಯಾವ ಸಿನಿಮಾ ಬೇಕೋ ಅದನ್ನು ಡಬ್ ಮಾಡಿ ಬಿಡುಗಡೆ ಮಾಡಲು ಅವಕಾಶ ಇದ್ದೇ ಇರುತ್ತದೆ.

ಅಂತಹ ಸಂದರ್ಭದಲ್ಲಿ ನಮ್ಮಲ್ಲಿ ಎಷ್ಟು ಸಿನಿಮಾಗಳು ಡಬ್ ಮಾಡಿ ಬಿಡುಗಡೆಯಾಗುತ್ತದೆಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ದೂರಗಾಮಿ ಪರಿಣಾಮ ಹೇಗಿರುತ್ತದೆಂದು ಎಂಬುವುದಕ್ಕೆ ಒಳ್ಳೆ ಉದಾಹರಣೆ ತೆಲುಗು ಉದ್ಯಮ.

Next »

« Previous

English summary
Dubbing debate: KFCC is opposing dubbing in Kannada film industry and many intellectuals joined hand to say Dubbing kills Kannada culture and movie can't match nativity and it will give wrong message to society a report by Ravindra Kotaki.
Friday, August 31, 2012, 15:48
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X