twitter
    For Quick Alerts
    ALLOW NOTIFICATIONS  
    For Daily Alerts

    RRR ಕಾರಣಕ್ಕೆ ಚಿತ್ರಮಂದಿರ ಸಿಗದೆ ಪರದಾಡುತ್ತಿರುವ ಕನ್ನಡ ಸಿನಿಮಾಗಳು!

    |

    ರಾಜಮೌಳಿ ನಿರ್ದೇಶನದ RRR ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು ಭಾರಿ ಜನಮನ್ನಣೆ ಗಳಿಸಿಕೊಂಡಿದೆ. ರಾಜ್ಯದಲ್ಲಿ ಹಲವು ಕಸರತ್ತುಗಳು ಬಳಿಕ ನೂರಾರು ಚಿತ್ರಮಂದಿರಗಳಲ್ಲಿ 'RRR' ಸಿನಿಮಾ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

    'RRR' ಸಿನಿಮಾದ ಬಿಡುಗಡೆಗೆ ಪುನೀತ್ ಅವರ ಕೊನೆಯ ಸಿನಿಮಾ 'ಜೇಮ್ಸ್' ಎತ್ತಂಗಡಿ ಮಾಡುವ ಪರಿಸ್ಥಿತಿ ಉದ್ಭವಿಸಿತ್ತು. ಶಿವರಾಜ್ ಕುಮಾರ್ ಅವರ ಹೋರಾಟದ ಫಲದಿಂದ 'ಜೇಮ್ಸ್' ಸಿನಿಮಾ ಉಳಿದುಕೊಂಡಿತು. ಆದರೂ 'RRR' ಸಿನಿಮಾ ಬೆಂಗಳೂರಿನ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಪ್ರದರ್ಶನ ಕಾಣುತ್ತಿದೆ.

    'RRR' ಸಿನಿಮಾ ವಿರುದ್ಧ ಕರವೇ ಪ್ರತಿಭಟನೆ: ಪೋಸ್ಟರ್‌ ಹರಿದ ಕಾರ್ಯಕರ್ತರು'RRR' ಸಿನಿಮಾ ವಿರುದ್ಧ ಕರವೇ ಪ್ರತಿಭಟನೆ: ಪೋಸ್ಟರ್‌ ಹರಿದ ಕಾರ್ಯಕರ್ತರು

    ಈಗ 'RRR' ಕಾರಣಕ್ಕೆ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದ ಪರಿಸ್ಥಿತಿ ಉದ್ಭವವಾಗಿದೆ. ಈ ಶುಕ್ರವಾರ ಕನ್ನಡದ 'ಹರೀಶ್ ವಯಸ್ಸು 36' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರಮಂದಿರಗಳ ಕೊರತೆಯಿಂದಾಗಿ ಅವರು ಸಿನಿಮಾವನ್ನು ಬಿಡುಗಡೆ ಮಾಡುತ್ತಿಲ್ಲ. ಏಪ್ರಿಲ್ 08 ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.

    Due To RRR Movie Kannada Movies Not Getting Theaters

    ಕಿದೇ ವಾರ ಬಿಡುಗಡೆ ಆಗಬೇಕಿದ್ದ 'ತ್ರಿಕೋನ' ಸಿನಿಮಾ ಸಹ ಬಿಡುಗಡೆ ಮುಂದೂಡುವ ಬಗ್ಗೆ ಯೋಜಿಸಿದೆ. ಜೊತೆಗೆ ನಟ ಸಂಚಾರಿ ವಿಜಯ್‌ರ 'ತಲೆದಂಡ' ಸಿನಿಮಾ ಏಪ್ರಿಲ್ 01ರಂದು ಬಿಡುಗಡೆಗೆ ಸಜ್ಜಾಗಿದ್ದು, ಅವರಿಗೂ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ.

    James: 'ಜೇಮ್ಸ್' ಸಿನಿಮಾ ಪರ ನಿಂತ ಶಿವಣ್ಣ: ಸಿಎಂ ಭೇಟಿJames: 'ಜೇಮ್ಸ್' ಸಿನಿಮಾ ಪರ ನಿಂತ ಶಿವಣ್ಣ: ಸಿಎಂ ಭೇಟಿ

    ರಾಜ್ಯದ ಸುಮಾರು 500 ಚಿತ್ರಮಂದಿರಗಳಲ್ಲಿ 'RRR' ಸಿನಿಮಾ ಪ್ರದರ್ಶನ ಕಾಣುತ್ತಿದೆ. 280 ಚಿತ್ರಮಂದಿರಗಳಲ್ಲಿ 'ಜೇಮ್ಸ್' ಪ್ರದರ್ಶನ ಕಾಣುತ್ತಿದೆ. 100 ಕ್ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವುದಾದರೂ ಹೇಗೆ?

    'RRR' ಸಿನಿಮಾ ಬಿಡುಗಡೆಗೆ ಮುನ್ನವೇ ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ಚರ್ಚೆ ನಡೆದಿತ್ತು. ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದ ಪುನೀತ್ ಅಭಿನಯದ 'ಜೇಮ್ಸ್' ಸಿನಿಮಾವನ್ನು ತೆಗೆದು ಆ ಚಿತ್ರಮಂದಿರಗಳಲ್ಲಿ 'RRR' ಪ್ರದರ್ಶಿಸುವ ಪ್ರಯತ್ನ ಮಾಡಲಾಗಿತ್ತು. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ ನಟ ಶಿವರಾಜ್ ಕುಮಾರ್ ಪ್ರಯತ್ನದಿಂದ 'RRR' ವಿತರಕರ ಆಸೆ ಈಡೇರಲಿಲ್ಲ. ಹಾಗಾಗಿ ಮೊದಲ ವಾರದ ಬಳಿಕ ಚಿತ್ರಮಂದಿರಗಳನ್ನು ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿ 'RRR' ಇದೆ ಎನ್ನಲಾಗುತ್ತಿದೆ.

    Recommended Video

    RRR | ಅಭಿಮಾನಿ ಕೈಯಲ್ಲಿ ಗನ್ ನೋಡಿ ಪ್ರೇಕ್ಷಕರು ಫುಲ್ ಗಾಬರಿ | Ram Charan | Jr NTR

    ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ನಟನೆಯ 'RRR' ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಕುರಿತಾದ ಕಾಲ್ಪನಿಕ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ನಟ ಅಜಯ್ ದೇವಗನ್, ಶ್ರೆಯಾ ಶಿರಿನ್, ಸಮುತಿರಕಿಣಿ, ಮಕರಂದ್ ದೇಶಪಾಂಡೆ ಇನ್ನೂ ಕೆಲವರಿದ್ದಾರೆ. ಸಿನಿಮಾವು ಬಿಡುಗಡೆ ಆದ ಮೂರೇ ದಿನಕ್ಕೆ 500 ಕೋಟಿ ಹಣ ಕಲೆಕ್ಷನ್ ಮಾಡಿದೆ.

    English summary
    Due to RRR movie some Kannada movies not getting theaters. Harish Vayassu 36 already postponed its release date, Taledanda and Thrikona movies thinking to post pone.
    Tuesday, March 29, 2022, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X