For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ದುನಿಯಾ ರಶ್ಮಿಯ 'ಕಾರ್ನಿ'

  By Bharath Kumar
  |

  ದುನಿಯಾ ರಶ್ಮಿ ಅಭಿನಯದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಕಾರ್ನಿ' ಟೈಟಲ್ ಹಾಗೂ ಪೋಸ್ಟರ್ ನಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಇದುವರೆಗೂ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಡದ ಚಿತ್ರತಂಡ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ.

  ಈ ಮೊದಲೇ ಹೇಳಿದಾಗ ಇದು ಸೈಕಲಾಜಿಕಲ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಸಿನಿಮಾ. ಪ್ರತಿಹಂತದಲ್ಲೂ ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಚಿತ್ರಕಥೆ ಹೊಂದಿದೆ.

  ಅಂದ್ಹಾಗೆ, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರೋದು ವಿನೋದ್ ಕುಮಾರ್. ಈ ಹಿಂದೆ 'ಲೈಫ್ ಸೂಪರ್' ಎಂಬ ಸಿನಿಮಾವನ್ನ ವಿನೋದ್ ನಿರ್ದೇಶನ ಮಾಡಿದ್ದರು. ಇದೀಗ, ಮತ್ತೊಂದು ಹೊಸ ಸಬ್ಜೆಕ್ಟ್ ನೊಂದಿಗೆ, ಹೊಸ ರೀತಿಯ ಮನರಂಜನೆ ನೀಡಲು ಬರ್ತಿದ್ದಾರೆ.

  ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಚಿತ್ರದ ಶೂಟಿಂಗ್ ಮಾಡಲಾಗಿದೆ. ಸೂರ್ಯೋದಯ ಅವರು ಛಾಯಾಗ್ರಹಣವಿದ್ದು, ಅರಿಂದಮ್ ಗೋಸ್ವಾಮಿ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಗೋವಿಂದರಾಜು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ದುನಿಯಾ ರಶ್ಮಿ, ನಿರಂತ್, ರಾಜೇಶ್ ರಾಮಕೃಷ್ಣ ಸೇರಿದಂತೆ ಹಲವು ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಆಗಸ್ಟ್ ತಿಂಗಳಲ್ಲಿ ಕಾರ್ನಿ ನೋಡುವ ಅವಕಾಶ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ.

  English summary
  Kannada actress Duniya rashmi starrer and vinodh kumar directional Kaarni movie ready to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X