For Quick Alerts
  ALLOW NOTIFICATIONS  
  For Daily Alerts

  ಬಾಲಯ್ಯನ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡ ದುನಿಯಾ ವಿಜಯ್: ಈಗ ಹೇಗಿದ್ದಾರೆ?

  |

  'ಸಲಗ' ಸಿನಿಮಾ ಬಾಕ್ಸಾಫೀಸ್ ಹಿಟ್ ಆಗುತ್ತಿದ್ದಂತೆ ದುನಿಯಾ ವಿಜಯ್ ವೃತ್ತಿ ಬದುಕು ಯಶಸ್ಸಿನ ಹಾದಿ ಹಿಡಿದಿದೆ. ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾಗೆ ಪರಭಾಷೆಯಿಂದೆಲ್ಲಾ ಒಳ್ಳೊಳ್ಳೆ ಆಫರ್‌ಗಳು ಹುಡುಕಿಕೊಂಡು ಬಂದಿದ್ದವು.

  ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅಭಿನಯಿಸುತ್ತಿರುವ 107ನೇ ಸಿನಿಮಾದಲ್ಲಿ ದುನಿಯಾ ವಿಜಯ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದುಸ ಗೊತ್ತೇ ಇದೆ. ಈಗಾಗಲೇ ದುನಿಯಾ ವಿಜಯ್ ಸಿನಿಮಾ ತಂಡವನ್ನು ಸೇರಿಕೊಂಡಿದ್ದೂ ಕೂಡ ಗೊತ್ತೇ ಇದೆ.

  ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಅನುಭವ ಹೇಗಿತ್ತು? ಇನ್ನು ಎಷ್ಟು ದಿನ ತೆಲುಗು ಸಿನಿಮಾಗಾಗಿ ಕೆಲಸ ಮಾಡಬೇಕು? ತೆಲುಗು ಸಿನಿಮಾ ಎಫೆಕ್ಟ್ ಹೇಗಿದೆ? ಹಾಗೇ 'ಸಲಗ ಪಾರ್ಟ್ 2' ಬರುತ್ತಾ? ಇಂತಹದ್ದೇ ಒಂದು ವಿಷಯಗಳ ಬಗ್ಗೆ ದುನಿಯಾ ವಿಜಯ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  ಖಳನಾಯಕನಿಗಾಗಿ ಹೆಚ್ಚಿದ ತೂಕ

  ಖಳನಾಯಕನಿಗಾಗಿ ಹೆಚ್ಚಿದ ತೂಕ

  ದುನಿಯಾ ವಿಜಯ್ ಖಳನಾಯಕನಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಈಗಾಗಲೇ ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಿನೇನಿ ಕೂಡ ವಿಜಯ್ ಪಾತ್ರದ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ದುನಿಯಾ ವಿಜಯ್ ಮೊದಲ ತೆಲುಗು ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಖಳನಾಯಕ ಪಾತ್ರಕ್ಕಾಗಿ ವಿಜಯ್ ತೂಕ ಹೆಚ್ಚಿಸಿಕೊಂಡಿದ್ದಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

  3 ತಿಂಗಳು ಚಿತ್ರೀಕರಣ ಬಾಕಿ

  3 ತಿಂಗಳು ಚಿತ್ರೀಕರಣ ಬಾಕಿ

  "ತೆಲುಗು ಸಿನಿಮಾದಲ್ಲಿ ಖಳನಾಯಕನ ರೀತಿ ಕಾಣಬೇಕು ಎನ್ನುವ ಕಾರಣಕ್ಕೆ ಸ್ವಲ್ಪ ಸೈಜ್ ಹಾಕೊಂಡು ಬಿಟ್ಟಿದ್ದೀನಿ. ಹೆವಿ ಆಗಿಬಿಟ್ಟಿದ್ದೀನಿ. ನನಗೆ ಓಡಾಡುವುದಕ್ಕೇ ಹಿಂಸೆ ಆಗುತ್ತಿದೆ. ಅಲ್ಲಿ ಹಾಗೆ ಕಾಣಿಸಿಕೊಳ್ಳಬೇಕಾಗಿದೆ. ಆ ಸಿನಿಮಾ ಮುಗಿಸಿಕೊಂಡು ಬಂದು ತೂಕ ಕಡಿಮೆ ಮಾಡಿಕೊಂಡು ಆಮೇಲೆ 'ಭೀಮ' ಶುರು ಮಾಡಬೇಕು." ಎಂದು ದುನಿಯಾ ವಿಜಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಜಿಮ್ಮು, ಪಾರ್ಕ್ ಅಂತಿದ್ದವನು

  ಜಿಮ್ಮು, ಪಾರ್ಕ್ ಅಂತಿದ್ದವನು

  "ಬೇರೆ ಭಾಷೆಯ ಸಿನಿಮಾ ಆಗಿರುವುದರಿಂದ ಚೇಂಜ್ ಇರಬೇಕು ಅಂದಿದ್ದಾರೆ. ಮೊದಲಿಗೆ ನಾನು ಹೀಗೆ ಇದ್ದವನೇ ಅಲ್ಲ. ಜಿಮ್ಮಿಂದ ಬಂದೆ, ಯಾವುದೋ ಪಾರ್ಕ್ ಅಂತ ಓಡಾಡಿಕೊಂಡಿದ್ದೆ. ಈಗ ಆಗಲ್ಲ ಇನ್ನೊಂದು ಮೂರು-ನಾಲ್ಕು ತಿಂಗಳು ಏನೂ ಮಾಡುವುದಕ್ಕೆ ಆಗುವುದಿಲ್ಲ. ದಿನಾ ನನಗೆ, ನಾನು ಬೇಜಾರಾಗಿಬಿಟ್ಟಿದ್ದೀನಿ ಅಂತ ಬೇಜಾರು ಆಗುತ್ತೆ." ಎಂದು ತಾನು ದಪ್ಪ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

  'ಸಲಗ ಪಾರ್ಟ್ 2' ವಿಜಯ್ ಹೇಳಿದ್ದೇನು?

  'ಸಲಗ ಪಾರ್ಟ್ 2' ವಿಜಯ್ ಹೇಳಿದ್ದೇನು?

  ದುನಿಯಾ ವಿಜಯ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ 'ಸಲಗ'. ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಈ ಸಿನಿಮಾದ ಪಾರ್ಟ್ 2 ಮಾಡುವ ಆಲೋಚನೆ ಕೂಡ ಇದೆಯಂತೆ. ಆದರೆ,
  'ಸಲಗ'ದಲ್ಲಿ ತೋರಿಸಿರುವುದನ್ನು ಬಿಟ್ಟು ಬೇರೆ ಏನು ತೋರಿಸಬೇಕು? ಕಥೆಯಿಂದ ಹಿಡಿದು, ಸ್ಕ್ರೀನ್ ಪ್ಲೇವರೆಗೂ ಸಾಕಷ್ಟು ಕೆಲಸ ಮಾಡಬೇಕಿದೆ. ಡೈಲಾಗ್ ರೈಟರ್ ಮಾಸ್ತಿ ಮಂಜು ಜೊತೆ ಕೂತು ಸಾಕಷ್ಟು ಸಿದ್ಧತೆ ಮಾಡಿಕೊಂಡು 'ಸಲಗ-2'ಗೆ ಕೈ ಹಾಕಬೇಕಿದೆ ಎಂದಿದ್ದಾರೆ.

  English summary
  Duniya Vijay Clarifies About Weight Gain And Salaga Part 2, Know More.
  Saturday, July 23, 2022, 22:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X