ನೇಕಾರರ ಪರವಾಗಿ ಹೊಸ ಚಾಲೆಂಜ್ ಆರಂಭಿಸಿದ ದುನಿಯಾ ವಿಜಯ್

ಕೊರೊನಾ ವೈರಸ್ ಬಂದ್ಮೇಲೆ ಎಲ್ಲ ಕ್ಷೇತ್ರದ ಜನರಿಗೂ ಕಷ್ಟ ಎದುರಾಗಿದೆ. ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯಮ ಸ್ಥಗಿತ ಆಯಿತು. ಆರ್ಥಿಕವಾಗಿ ಭಾರಿ ಹಿನ್ನಡೆ ಆಗಿದೆ. ಹೀಗೆ, ಕೊವಿಡ್ ಕಾಟಕ್ಕೆ ನಲುಗಿದವರ ಪೈಕಿ ನೇಕಾರರು ಸಮೂಹವೂ ಸಹ ಒಂದು.

ನೇಕಾರರ ತಯಾರಿಸಿರುವ ಬಟ್ಟೆಗಳನ್ನು ಖರೀದಿಸಿ, ಈ ಮೂಲಕ ನೇಕಾರರಿಗೆ ಒಳ್ಳೆಯದಾಗುತ್ತೆ, ನಮ್ಮ ನೆಲದ ಸಂಸ್ಕೃತಿಯನ್ನು ಪ್ರತಿನಿಧಿಸಿ ಎಂದು ನಟ ದುನಿಯಾ ವಿಜಯ್ ಮನವಿ ಮಾಡಿದ್ದಾರೆ.

''ನಾವು ಮಾತಾಡೋ ಭಾಷೆ ಕನ್ನಡ, ಕುಡಿಯೋ ನೀರು ಕಾವೇರಿ ನಿಂತಿರೋ ನೆಲ ಕರ್ನಾಟಕವಾಗಿರೋವಾಗ. ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಇದು ನಮ್ಮ ಜನ ನಮ್ಮ ನೆಲದಲ್ಲಿ ಬೆಳೆದ ಹತ್ತಿಯಿಂದ ಚರಕದಲ್ಲಿ ನೂಲು ತೆಗೆದು ಕೈಮಗ್ಗದಲ್ಲಿ ನೇಯ್ದ ಬಟ್ಟೆ ನಮ್ಮ ಜನರ ಬೆವರಿನ ಫಲ''.

Duniya Vijay Expressed His Support To Weavers

''ಕೊರೊನಾ ಪಿಡುಗು ಶುರುವಾದಾಗಿನಿಂದ ದೇಸಿ ಸಂಸ್ಥೆಯ ನೇಕಾರರು ತಯಾರಿಸುವ ಬಟ್ಟೆ ಸುಮಾರಿದೆ. ಹನಿಹನಿಗೂಡಿದರೆ ಹಳ್ಳ ಅನ್ನೋ ಹಾಗೆ ನೀವೆಲ್ಲರೂ ಒಂದೊಂದು ಬಟ್ಟೆ ಖರೀದಿಸಿದರೂ ನಮ್ಮ ನೇಕಾರರ ಬೆವರಿನ ದುಡಿಮೆಗೆ ಹೆಗಲಾಗಿ ನಿಂತಂತೆ''.

''ಬನ್ನಿ ಸೌತ್ ಎಂಡ್ ಸರ್ಕಲ್, ಸೀತಾಸರ್ಕಲ್, ಕೆಂಗೇರಿ ಮತ್ತು ಮಲ್ಲೇಶ್ವರಂನ 'ದೇಸಿ' ಅಂಗಡಿಗಳಲ್ಲಿ ಕೈಮಗ್ಗದ ಬಟ್ಟೆಗಳನ್ನು ಕೊಳ್ಳೋಣ. ನಮ್ಮತನವನ್ನು ಉಳಿಸಿಕೊಳ್ಳೋಣ'' ಎಂದು ದುನಿಯಾ ವಿಜಯ್ ವಿನಂತಿಸಿದ್ದಾರೆ.

Recommended Video

Chiru ಮಗುವಿಗೆ Dhruva ಖರೀದಿ ಮಾಡಿದ ಅದ್ದೂರಿ Gift ಇದು | Filmibeat Kannada

More from Filmibeat

English summary
Kannada actor Duniya Vijay Started 'my desi challange' and he expressed his support to weavers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X