For Quick Alerts
  ALLOW NOTIFICATIONS  
  For Daily Alerts

  ನಟ ದುನಿಯಾ ವಿಜಯ್ ಉಚಿತ ಕಾಲ್ ಶೀಟ್

  By Rajendra
  |

  ಕನಡದ ಅತ್ಯಧಿಕ ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಅವರ ಸಂಭಾವನೆ ಕೋಟಿಗಳಲ್ಲೇ ಇದೆ. ಅವರ ಇಂದಿನ ಮಾರುಕಟ್ಟೆ ರೇಟು ಹತ್ತಿರ ಹತ್ತಿರ ಎರಡು ಕೋಟಿ ಎನ್ನುತ್ತವೆ ಮೂಲಗಳು.

  ಇಷ್ಟೆಲ್ಲಾ ಹಣ ಎಣಿಸುವ ವಿಜಿ ಕೆಲ ದಿನಗಳ ಹಿಂದೆ ಕೇವಲ ಒಂದು ರೂಪಾಯಿ ಸಂಭಾವನೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಅದು ಮಹಿಳೆಯರೇ ಸೇರಿಕೊಂಡು ನಿರ್ಮಿಸುತ್ತಿರುವ ಚಿತ್ರ 'ರಿಂಗ್ ರೋಡ್ ಶುಭಾ'.

  ಈಗವರು ತಮ್ಮ ಗೆಳೆಯರಿಗಾಗಿ ಉಚಿತವಾಗಿ ಕಾಲ್ ಶೀಟ್ ಕೊಟ್ಟಿದ್ದಾರೆ. ವಿಜಿ ಗೆಳೆಯರಾದ ಅನಿಲ್ ಹಾಗೂ ಸುಂದರ್ ನಿರ್ಮಿಸುತ್ತಿರುವ ಚಿತ್ರಕ್ಕೆ ಉಚಿತ ಕಾಲ್ ಶೀಟ್ ಕೊಟ್ಟು ಮತ್ತೊಮ್ಮೆ ಅಚ್ಚರಿಗೆ ಕಾರಣವಾಗಿದ್ದಾರೆ.

  ತಮಿಳಿನ 'ಇಧರ್ ಕುಂಥನೆ ಆಸೈಪಟ್ಟಿ ಬಲಕುಮಾರ' (ಬಲಕುಮಾರನನ್ನು ನೀನು ಆಸೆಪಟ್ಟಿರಲಿಲ್ಲವೇ?) ಎಂಬ ಚಿತ್ರದ ರೀಮೇಕ್ ಇದು. ಕನ್ನಡದಲ್ಲಿ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಅಭಿನಯಿಸಿದ್ದಾರೆ. ವಿಜಿ ಗೆಳೆಯರು ದುನಿಯಾ ಟಾಕೀಸ್ ಬ್ಯಾನರ್ ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  ಸದ್ಯಕ್ಕೆ ದುನಿಯಾ ವಿಜಯ್ ಅವರು 'ಶಿವಾಜಿನಗರ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದಾದ ಬಳಿಕ ಶಿವಮಣಿ ನಿರ್ದೇಶನದ 'ಸಿಂಹಾದ್ರಿ' ಚಿತ್ರ ಸೆಟ್ಟೇರಲಿದೆ. ಆ ಬಳಿಕವಷ್ಟೇ 'ಬಲಕುಮಾರ'ನಿಗೆ ಬಲ ಬರಲಿದೆ.

  ಇನ್ನು ರಿಂಗ್ ರೋಡ್ ಶುಭಾ ವಿಚಾರಕ್ಕೆ ಬರುವುದಾದರೆ, ಈ ಚಿತ್ರ ಆರಂಭದಿಂದಲೂ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ಕೋಟಿಗಟ್ಟಲೆ ಹಣ ಸುರಿದು ನಿರ್ಮಿಸುವಷ್ಟು ಶಕ್ತಿ ನಮಗಿಲ್ಲ. ಇದು ದೊಡ್ಡ ಬಜೆಟ್ ಸಿನಿಮಾ ಅಲ್ಲದಿದ್ದರೂ ದೊಡ್ಡ ಐಡಿಯಾಗಳನ್ನು ಇಟ್ಟುಕೊಂಡು ಮಾಡುತ್ತಿರುವ ಚಿತ್ರ ಎನ್ನುತ್ತಾರೆ ಚಿತ್ರದ ನಿರ್ಮಾಪಕಿ ಪ್ರಿಯಾ ಬೆಳ್ಳಿಯಪ್ಪ.

  ದುನಿಯಾ ವಿಜಯ್ ಅವರಿಗೆ ನಮ್ಮ ಚಿತ್ರದ ಕಾನ್ಸೆಪ್ಟ್ ಹೇಳಿದೆವು. ಅವರಿಗೆ ಇಷ್ಟವಾಯಿತು. ಕೇವಲ ಒಂದು ರುಪಾಯಿ ಸಂಭಾವನೆ ಪಡೆಯುವ ಮೂಲಕ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ಕಳ್ಳರ ಸಂತೆ ಚಿತ್ರಕ್ಕೆ ಒಂದು ರುಪಾಯಿ ಸಂಭಾವನೆ ಪಡೆದಿದ್ದರು. (ಏಜೆನ್ಸೀಸ್)

  English summary
  Kannada actor Duniya Vijay is all set to act free in a new film which is a remake of Tamil hit 'Idharkuthane Aasaipattai Balakumara'. The film is being produced by Vijay's friends Anil and Sundar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X