For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿ ಗುಡಿ' ದುನಿಯಾ ವಿಜಿ ರಿಯಲ್ ಕಹಾನಿನಾ?

  By Suneetha
  |

  ಕನ್ನಡ ಸಿನಿಕ್ಷೇತ್ರದಲ್ಲಿ ನೈಜ ಜೀವನ ಕಥೆಯಾಧರಿತ ಸಿನಿಮಾಗಳನ್ನು ತೆರೆ ಮೇಲೆ ತರಲು ಬಹಳ ಆಸಕ್ತಿ ತೋರಿಸುವ ನಟ ಅಂದರೆ ಅದು ದುನಿಯಾ ವಿಜಿ ಅವರು. ವಿಜಿ ಅವರು 'ಆರ್ ಎಕ್ಸ್ ಸೂರಿ' ಚಿತ್ರದ ನಂತರ ಇದೀಗ ಮತ್ತೊಂದು ನೈಜ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

  ಹೌದು ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರು ಇದೀಗ ನೈಜ ಸಿನಿಮಾ ಮಾಡಲು ಸಜ್ಜಾಗಿದ್ದು, ಅದಕ್ಕೆ 'ಮಾಸ್ತಿ ಗುಡಿ' ಎಂಬ ಹೆಸರನ್ನು ಕೂಡ ನೀಡಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ಕಥೆ ಕೂಡ ದುನಿಯಾ ವಿಜಿ ಅವರೇ ಒದಗಿಸಿದ್ದಾರೆ.[ದುನಿಯಾ ವಿಜಯ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ!]

  ನಟ ಕಮ್ ನಿರ್ದೇಶಕ ನಾಗಶೇಖರ್ ಮತ್ತು ದುನಿಯಾ ವಿಜಿ ಅವರ ಜುಗಲ್ ಬಂದಿಯಲ್ಲಿ ಹೊಸ ಪ್ರಾಜೆಕ್ಟ್ ಒಂದು ಸೆಟ್ಟೇರುತ್ತಿದೆ ಎಂದು ಈ ಮೊದಲು ಎಲ್ಲಾ ಕಡೆ ಸುದ್ದಿಯಾಗಿತ್ತು.

  ಇದೀಗ ಆ ಸುದ್ದಿ ನಿಜ ಆಗಿ, ಚಿತ್ರಕ್ಕೆ 'ಮಾಸ್ತಿ ಗುಡಿ' ಎಂದು ಹೆಸರಿಟ್ಟಿದ್ದು, ಈಗಾಗಲೇ ಹೊಸ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಚಿತ್ರಕ್ಕೆ ದುನಿಯಾ ವಿಜಯ್ ಅವರು ವಿಶಿಷ್ಟವಾಗಿ ಖಾವಿ ತೊಟ್ಟು ರೆಡಿಯಾಗಿದ್ದಾರೆ. ಅಂತೂ ಗೆಳೆಯರಿಬ್ಬರು ರಿಯಲ್ ಸ್ಟೋರಿಯ ಬೆನ್ನತ್ತಿದ್ದಾರೆ ಅಂತಾಯ್ತು. ಮುಂದೆ ಓದಿ..

  ದುನಿಯಾ ವಿಜಿಯ ರಿಯಲ್ ಕಹಾನಿ?

  ದುನಿಯಾ ವಿಜಿಯ ರಿಯಲ್ ಕಹಾನಿ?

  ಅಂದಹಾಗೆ ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಮಾಡುತ್ತಿರುವ 'ಮಾಸ್ತಿ ಗುಡಿ' ನಟ ದುನಿಯಾ ವಿಜಯ್ ಅವರ ಜೀವನಾಧರಿತ ಕಥೆ ಎಂದು ಗಾಂಧಿನಗರದಲ್ಲಿ ಅಲ್ಲಲ್ಲಿ ಗುಲ್ಲೆದ್ದಿದೆ. ಅದೇ ಕಾರಣಕ್ಕಾಗಿ ಸ್ವತಃ ದುನಿಯಾ ವಿಜಿ ಅವರು ಕಥೆಯನ್ನು ತಾವೇ ಬರೆದು ಚಿತ್ರಕಥೆ ಬರೆಯೋಕೆ ನಟ ಕಮ್ ನಿರ್ದೇಶಕ ನಾಗಶೇಖರ್ ಅವರನ್ನು ಕೇಳಿದರಂತೆ.[ಕರಿ ಚಿರತೆಗೆ ಆಕ್ಷನ್-ಕಟ್ ಹೇಳ್ತಾರಂತೆ, 'ಭಜರಂಗಿ' ಹರ್ಷ.!]

  ನಾಗಶೇಖರ್ ಆಕ್ಷನ್-ಕಟ್

  ನಾಗಶೇಖರ್ ಆಕ್ಷನ್-ಕಟ್

  ಈಗ ಚಿತ್ರಕಥೆಯನ್ನು ಬರೆದಿದ್ದಕ್ಕಾಗಿ ಫುಲ್ ಖುಷ್ ಆದ ದುನಿಯಾ ವಿಜಿ ಅವರು ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಕೂಡ ನಾಗಶೇಖರ್ ಅವರಿಗೆ ಒಪ್ಪಿಸಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಶ್ರುತಿ ಹರಿಹರನ್ ಅವರು ಕಾಣಿಸಿಕೊಳ್ಳಲಿದ್ದಾರೆ.

   'ಗಂಧದ ಗುಡಿ 3'

  'ಗಂಧದ ಗುಡಿ 3'

  ಇದೀಗ 'ಮಾಸ್ತಿಗುಡಿ' ಎಂಬ ಹೆಸರಿನ ಅಡಿಯಲ್ಲಿ 'ಗಂಧದ ಗುಡಿ 3' ಎಂಬ ಅಡಿಬರಹ ಹೊತ್ತ ದುನಿಯಾ ವಿಜಿ ಅವರ ರಿಯಲ್ ಕಹಾನಿ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಕಬಿನಿ ಅಣೆಕಟ್ಟಿನ ಬಳಿ ಇರುವ 'ಮಾಸ್ತಿ ಗುಡಿ' ದೇವಸ್ಥಾನದ ಬಳಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆ ಹೆಣೆಯಲಾಗಿದೆ.

  ಮುಂದಿನ ತಿಂಗಳು ಸೆಟ್ಟೇರಲಿರುವ 'ಮಾಸ್ತಿ ಗುಡಿ'

  ಮುಂದಿನ ತಿಂಗಳು ಸೆಟ್ಟೇರಲಿರುವ 'ಮಾಸ್ತಿ ಗುಡಿ'

  ಈ ಹಿಂದೆ ದುನಿಯಾ ವಿಜಿ ಅವರು ನಟಿಸಿದ್ದ 'ಜಾಕ್ಸನ್' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕರಾದ ಅನಿಲ್ ಮತ್ತು ಸುಂದರ್ 'ಮಾಸ್ತಿಗುಡಿ'ಗೆ ಹಣ ಹಾಕಿದ್ದಾರೆ. ಕಾಮಿಡಿ ಕಿಂಗ್ ಸಾಧುಕೋಕಿಲ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸತ್ಯ ಹೆಗಡೆ ಅವರ ಕ್ಯಾಮೆರಾ ಕೈಚಳಕದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಮುಂದಿನ ತಿಂಗಳು ಸೆಟ್ಟೇರಲಿದೆ.

  'ಗಡಿಯಾರ' ಮುಂದಕ್ಕೆ

  'ಗಡಿಯಾರ' ಮುಂದಕ್ಕೆ

  ಸುಮಾರು ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವ ಬಹುಭಾಷಾ ಸಿನಿಮಾ 'ಗಡಿಯಾರ'ವನ್ನು ಮುಂದಕ್ಕೆ ಹಾಕಿರುವ ನಾಗಶೇಖರ್ ಸದ್ಯಕ್ಕೆ ದುನಿಯಾ ವಿಜಿ ಅವರ 'ಮಾಸ್ತಿ ಗುಡಿ' ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.

  'ಗಡಿಯಾರ'ಕ್ಕೆ ತಾಪ್ಸಿ ಪನ್ನು

  'ಗಡಿಯಾರ'ಕ್ಕೆ ತಾಪ್ಸಿ ಪನ್ನು

  ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಯಲ್ಲಿ ರೆಡಿಯಾಗುತ್ತಿರುವ 'ಗಡಿಯಾರ' ಸಿನಿಮಾಕ್ಕೆ ನಾಯಕಿಯಾಗಿ ದಕ್ಷಿಣ ಭಾರತದ ನಟಿ ತಾಪ್ಸಿ ಪನ್ನುವನ್ನು ನಿರ್ದೇಶಕ ನಾಗಶೇಖರ್ ಅವರು ಆಯ್ಕೆ ಮಾಡಿದ್ದು, ಈ ಮೂಲಕ ತಾಪ್ಸಿ ಅವರು ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದಾರೆ.

   ನಾಗಶೇಖರ್ ನಟನೆಯಲ್ಲಿ 'ಸಂಜು ಮತ್ತು ಗೀತಾ 2'

  ನಾಗಶೇಖರ್ ನಟನೆಯಲ್ಲಿ 'ಸಂಜು ಮತ್ತು ಗೀತಾ 2'

  ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಶೆಡ್ಯೂಲ್ ಹಾಕಿಕೊಂಡಿರುವ ನಟ ನಾಗಶೇಖರ್ ಅವರು ನಿರ್ದೇಶನ ಮಾತ್ರವಲ್ಲದೇ ನಟನೆಯಲ್ಲೂ ತೊಡಗಿದ್ದಾರೆ. ನಿರ್ದೇಶಕ ರಾಮ್ ಚಿರು ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ 'ಸಂಜು ಮತ್ತು ಗೀತಾ 2' ಸಿನಿಮಾದಲ್ಲಿ ನಟಿ ಕೃತಿ ಕರಬಂಧ ಅವರ ಜೊತೆ ನಾಗಶೇಖರ್ ನಟಿಸುತ್ತಿದ್ದಾರೆ.

  English summary
  Director Nagshekar knows the importance of time. So, when his multilingual project got pushed further to June next year, he jumped onto the director’s chair for a film with Duniya Vijay. Titled Maasti Gudi, it comes with a tagline - Gandadagudi part 3. Interestingly, the director was given a one-liner by Vijay and he was supposed to develop only the screenplay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X