For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ 'ಭೀಮ'ದಲ್ಲಿ ರಿಯಲ್ ಸ್ಟೋರಿ

  |

  ದುನಿಯಾ ವಿಜಯ್ ನಿರ್ದೇಶಿಸಿದ್ದ 'ಸಲಗ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈ ಮೂಲಕ ತಾನೊಬ್ಬ ಉತ್ತಮ ನಿರ್ದೇಶಕ ಅನ್ನುವುದನ್ನೂ ದುನಿಯಾ ವಿಜಯ್ ಸಾಬೀತು ಮಾಡಿದ್ದರು. ಈ ಖುಷಿಯಲ್ಲೇ ಎರಡನೇ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಶಿವರಾತ್ರಿ ಹಬ್ಬಕ್ಕೆ ಚಿತ್ರದ ಟೈಟಲ್ ಭೀಮ ಅನ್ನುವುದನ್ನು ರಿವೀಲ್ ಮಾಡಲಾಗಿದೆ. 'ಸಲಗ'ದಂತಹ ಪವರ್‌ಫುಲ್ ಟೈಟಲ್ ಆಯ್ಕೆ ಮಾಡಿಕೊಂಡಿದ್ದ ಎರಡನೇ ಭಾರಿ ಕೂಡ 'ಭೀಮ' ಅನ್ನೋ ಅಷ್ಟೇ ಪವರ್‌ಫುಲ್ ಶೀರ್ಷಿಕೆ ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ಚಿತ್ರದ ಕಥೆ ಬಗ್ಗೆನೂ ಕುತೂಹಲ ದುಪ್ಪಟ್ಟಾಗಿದೆ.

  'ಭೀಮ' ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಕುತೂಹಲ ತಡೆದುಕೊಳ್ಳಲಾಗುತ್ತಿಲ್ಲ. ಹಬ್ಬಕ್ಕೆ ಕೇವಲ ಟೈಟಲ್ ರಿವೀಲ್ ಮಾಡಿದ್ದ ಚಿತ್ರತಂಡ ಸ್ಟೋರಿ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟುಕೊಟ್ಟಿದೆ. ವಿಜಯ್ ಅಭಿನಯದ 28ನೇ ಸಿನಿಮಾ. ನಿರ್ದೇಶನದ ಎರಡನೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

  'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ?'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ?

  ದುನಿಯಾ ವಿಜಯ್ 'ಭೀಮ' ಚಿತ್ರದ ಕಥೆಯೇನು?

  'ಸಲಗ' ಚಿತ್ರದ ಮೂಲಕ ಜನಮನ ಗೆದ್ದಿರುವ ದುನಿಯಾ ವಿಜಯ್. ಎರಡನೇ ಚಿತ್ರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ಸಲಗ' ಚಿತ್ರದಲ್ಲಿ ರೌಡಿಸಂ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿತ್ತು. ಇದರೊಂದಿಗೆ ಒಂದು ಸಂದೇಶವನ್ನೂ ನೀಡುವ ಪ್ರಯತ್ನ ಮಾಡಿದ್ದರು. ಈಗ ಎರಡನೇ ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. 'ಭೀಮ' ಕೂಡ ನೈಜ ಘಟನೆಯನ್ನು ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೂಲಕ ಕಥೆಯ ಬಗ್ಗೆ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದೆ.


  'ಭೀಮ' ಚಿತ್ರದ ಮೋಷನ್ ಪೋಸ್ಟರ್ ಕುತೂಹಲ ಕೆರಳಿಸುವುದಕ್ಕೆ ಹಲವು ಕಾರಣಗಳಿವೆ. 'ಭೀಮ' ದಂತಹ ಟೈಟಲ್‌ನಲ್ಲಿ ಚಿಕ್ಕದೊಂದು ಟ್ಯಾಗ್ ಲೈನ್ ಇದೆ. 'ಕೆಣಕಿದ್ರೆ ಕ್ಷೇಮ' ಅನ್ನೋ ಟ್ಯಾಗ್ ಲೈನ್ ಪವರ್‌ಫುಲ್ ಶೀರ್ಷಿಕೆಗೆ ಕಿಕ್ ಕೊಡುತ್ತಿದೆ. ಸಿನಿಮಾ ರಿಲೀಸ್ ಸ್ಟೋರಿ ಆಗಿರುವುದರಿಂದ ಕೇವಲ ಟೈಟಲ್ ಅನ್ನಷ್ಟೇ ರಿವೀಲ್ ಮಾಡಿದ್ದಾರೆ. ಇನ್ನೂ ದುನಿಯಾ ವಿಜಯ್ ಲುಕ್ ಅನ್ನು ರಿವೀಲ್ ಮಾಡಿಲ್ಲ. ಕೇವಲ ಆರ್‌ ಎಕ್ಸ್ 100 ಬೈಕ್, ಮಾಸ್ಕ್ ತೊಟ್ಟ ವಿಜಯ್ ಫೋಟೊ ಕಾಣಸಿಗುತ್ತಿದೆ.

  ದುನಿಯಾ ವಿಜಯ್ 48ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಾಲಕೃಷ್ಣ ಸಿನಿಮಾದ ನಿರ್ದೇಶಕದುನಿಯಾ ವಿಜಯ್ 48ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಾಲಕೃಷ್ಣ ಸಿನಿಮಾದ ನಿರ್ದೇಶಕ

  ಮೇ ತಿಂಗಳಿಂದ ಚಿತ್ರೀಕರಣ ಆರಂಭ

  ವಿಜಯ್ ನಿರ್ದೇಶನದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ 'ಭೀಮ' ಚಿತ್ರೀಕರಣ ಇನ್ನೆರಡು ತಿಂಗಳಲ್ಲಿ ಆರಂಭ ಆಗಲಿದೆ. ದುನಿಯಾ ವಿಜಯ್ ತೆಲುಗು ಸಿನಿಮಾ ಮುಗಿಸಿ ಬರುತ್ತಿದ್ದಂತೆ 'ಭೀಮ' ಶೂಟಿಂಗ್ ಮೇ ತಿಂಗಳಿಂದ ಆರಂಭ ಆಗಲಿದೆ. ಶಿವರಾಜಕುಮಾರ್ ಅಭಿನಯದ 'ಭೈರಾಗಿ' ಚಿತ್ರವನ್ನು ನಿರ್ಮಿಸುತ್ತಿರುವ ಕೃಷ್ಣ ಸಾರ್ಥಕ್ ಈ ಚಿತ್ರ‌ ನಿರ್ಮಿಸುತ್ತಿದ್ದಾರೆ. 'ಸಲಗ' ಚಿತ್ರದ ವಿತರಕರಾಗಿದ್ದ ಜಗದೀಶ್ ಗೌಡ 'ಭೀಮ' ಚಿತ್ರದ ನಿರ್ಮಾಪಕರಲ್ಲಿ ಎರಡನೆಯರು.

  ಶಿವಣ್ಣನ ಸಿನಿಮಾ ರೀಮೇಕ್‌ನಲ್ಲಿ ಬಾಲಕೃಷ್ಣ, ದುನಿಯಾ ವಿಜಯ್‌ ಪಾತ್ರವೇನು?ಶಿವಣ್ಣನ ಸಿನಿಮಾ ರೀಮೇಕ್‌ನಲ್ಲಿ ಬಾಲಕೃಷ್ಣ, ದುನಿಯಾ ವಿಜಯ್‌ ಪಾತ್ರವೇನು?

  'ಟಗರು', 'ಸಲಗ'ದಂತಹ ಸಿನಿಮಾಗೆ ಭರ್ಜರಿ ಮ್ಯೂಸಿಕ್ ನೀಡಿದ್ದ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್ ಕುಮಾರ್ ಎಡಿಟರ್, ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ. ಮೊದಲ ನಿರ್ದೇಶನದ ಸಿನಿಮಾ ಗೆದ್ದಿದೆ. ಎರಡನೇ ಚಿತ್ರ ಕುತೂಹಲ ಕೆರಳಿಸಿದೆ. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದರೆ, ವಿಜಯ್ ದುನಿಯಾ ಮತ್ತೆ ಬದಲಾಗುವುದು ಗ್ಯಾರಂಟಿ.

  English summary
  Duniya Vijay Starrer and directed new movie Bheema is real based movie.
  Friday, March 4, 2022, 9:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X