»   » ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ'

ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ನಟ ದುನಿಯಾ ವಿಜಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿರುವ 'ಮಾಸ್ತಿಗುಡಿ' ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದ್ದು, ಸಿನಿ ರಸಿಕರಲ್ಲಿ ಕುತೂಹಲ ಕೆರಳಿಸಿದೆ. ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿರುವ ಚಿತ್ರದ ವಿತರಣೆ ಹಕ್ಕು ಈಗ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.[ಜೂ. ಎನ್.ಟಿ.ಆರ್ ಎದುರು ತೊಡೆತಟ್ಟಿ ನಿಲ್ತಾರೆ ದುನಿಯಾ ವಿಜಯ್]

ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿರುವ 'ಮಾಸ್ತಿಗುಡಿ ಚಿತ್ರಕ್ಕೆ ವಿತರಕ ಜಾಕ್ ಮಂಜು ಅವರು 10.80 ಕೋಟಿ ರೂ ನೀಡಿ ಕರ್ನಾಟಕದಾದ್ಯಂತ ವಿತರಣೆ ಹಕ್ಕುಗಳನ್ನು ಖರೀದಿಸಿದ್ದಾರೆ. ಮೇಕಿಂಗ್ ನಿಂದಲೇ ಹೊಸ ಹವಾ ಸೃಷ್ಟಿಸಿದ್ದ 'ಮಾಸ್ತಿಗುಡಿ' ಚಿತ್ರದ ಬೊಕ್ಕಸಕ್ಕೆ ಈಗ ಬಿಡುಗಡೆಗೂ ಮುನ್ನವೇ 10.80 ಕೋಟಿ ರೂ ಸೇರಿದೆ.

Duniya Vijay Starrer 'Maastigudi' movie Distribustion rights saled to Jaak manju

'ಮಾಸ್ತಿಗುಡಿ' ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ನಟ ದುನಿಯಾ ವಿಜಯ್ ಗೆ ಅಮೂಲ್ಯ ಹಾಗೂ ಕ್ರಿತಿ ಖರಬಂದ ಜೋಡಿಯಾಗಿದ್ದಾರೆ. ಉಳಿದಂತೆ ಖಳನಟರಾದ ದಿ.ಅನಿಲ್ ಹಾಗೂ ದಿ.ಉದಯ್ 'ಮಾಸ್ತಿಗುಡಿ' ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಸುಹಾಸಿನಿ, ದೇವರಾಜ್, ಶೋಭರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.[ದುನಿಯಾ ವಿಜಯ್ ಕಡೆಯಿಂದ ಬಂದ ಲೇಟೆಸ್ಟ್ ಸುದ್ದಿ ಇದು..]

Duniya Vijay Starrer 'Maastigudi' movie Distribustion rights saled to Jaak manju

ದುನಿಯಾ ವಿಜಯ್ ಸ್ವತಃ ಈ ಚಿತ್ರಕ್ಕೆ ಕಥೆ ಬರೆದಿದ್ದು, ನಾಗಶೇಖರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮೇ 12 ರಂದು ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

English summary
Duniya Vijay Starrer, Nagashekar Directorial 'Maastigudi' movie Distribution rights sold to Jaak manju

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada