»   »  ದುನಿಯಾ ವಿಜಿಗೆ 'ಅಂತಾರಾಷ್ಟ್ರೀಯ ಅಥ್ಲೆಟ್'ನಿಂದ ತರಬೇತಿ.!

ದುನಿಯಾ ವಿಜಿಗೆ 'ಅಂತಾರಾಷ್ಟ್ರೀಯ ಅಥ್ಲೆಟ್'ನಿಂದ ತರಬೇತಿ.!

Posted By:
Subscribe to Filmibeat Kannada

ಕನ್ನಡದ 'ಕರಿಚಿರತೆ' ದುನಿಯಾ ವಿಜಯ್ ಅಭಿನಯಿಸಲಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಮೇಕ್ ಓವರ್ ಮಾಡಿಕೊಳ್ಳುತ್ತಿರುವ ನಟ ವಿಜಿ, ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡ್ತಿದ್ದಾರೆ.

'ಜಾನಿ ಮೇರಾ ನಾಮ್' ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಮತ್ತೊಮ್ಮೆ ಕಲರ್ ಫುಲ್ ಸಿನಿಮಾ ಮಾಡಲು ಚಿತ್ರತಂಡ ಸಿದ್ದವಾಗಿದೆ. ವಿಶೇಷ ಅಂದ್ರೆ, ಬ್ಲ್ಯಾಕ್ ಕೋಬ್ರಾಗೆ ಅಂತಾರಾಷ್ಟ್ರೀಯ ಅಥ್ಲೆಟ್ ನಿಂದ ಟ್ರೈನಿಂಗ್ ನೀಡಲಾಗುತ್ತಿದೆ.

ಹಾಗಿದ್ರೆ, ದುನಿಯಾ ವಿಜಿ ಅವರ ತಯಾರಿ ಹೇಗಿದೆ? 'ಜಾನಿ' ಚಿತ್ರದ ಸ್ವೀಕೆಲ್ ಗಾಗಿ ವಿಜಿಗೆ ಟ್ರೈನಿಂಗ್ ನೀಡುತ್ತಿರುವ ಆ ಅಥ್ಲೆಟ್ ಯಾರು ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ....

3 ತಿಂಗಳಿಂದ ಜಿಮ್ ನಲ್ಲಿ ವಿಜಿ ವರ್ಕೌಟ್

'ಜಾನಿ ಮೇರಾ ನಾಮ್' ಚಿತ್ರದ ನಂತರ ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ 'ಜಾನಿ ಜಾನಿ ಎಸ್ ಪಪ್ಪಾ'. ಈ ಚಿತ್ರಕ್ಕಾಗಿ ವಿಜಿ ಹಾರ್ಡ್ ವರ್ಕ್ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಜಿಮ್ ನಲ್ಲಿ ದೇಹ ದಂಡಿಸುತ್ತಿದ್ದಾರೆ.

ದುನಿಯಾ ವಿಜಯ್ ಗೆ ಮೋಸ ಮಾಡ್ತಾರಂತೆ ಕನ್ನಡದ ಈ ನಟಿ

ಅಂತಾರಾಷ್ಟ್ರೀಯ ಜಿಮ್ ಟ್ರೈನರ್ ನಿಂದ ತರಬೇತಿ

'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕಾಗಿ ತಯಾರಾಗುತ್ತಿರುವ ದುನಿಯಾ ವಿಜಿಗೆ ಅಂತಾರಾಷ್ಟ್ರೀಯ ಅಥ್ಲೆಟ್ ಮಂಜು ಟ್ರೈನಿಂಗ್ ನೀಡುತ್ತಿದ್ದು, ತಮ್ಮ ಪಾತ್ರಕ್ಕಾಗಿ ಪಕ್ಕಾ ತಯಾರಾಗುತ್ತಿದ್ದಾರೆ.

ಚಿತ್ರದಿಂದ ಚಿತ್ರಕ್ಕೆ ಬದಲಾಗುವ ನಟ

ದುನಿಯಾ ವಿಜಯ್ ಅವರು ತಮ್ಮ ಪ್ರತಿಯೊಂದು ಚಿತ್ರಗಳಲ್ಲೂ ತುಂಬ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಲುಕ್, ಗೆಟಪ್ ಹಾಗೂ ಫಿಟ್ನೆಸ್ ಹೀಗೆ ಎಲ್ಲದರ ಬಗ್ಗೆಯೂ ಗಮನ ಹರಿಸುವ ನಟ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇದು.

'ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರದ ಬಗ್ಗೆ...

'ಜಾನಿ ಮೇರಾ ನಾಮ್‌' ಚಿತ್ರದ ಸೀಕ್ವೆಲ್ ಅಗಿರುವ 'ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರದಲ್ಲಿ ದುನಿಯಾ ವಿಜಿ ಜೊತೆಗೆ ರಂಗಾಯಣ ರಘು ಅಭಿನಯಿಸಲಿದ್ದು, ನಾಯಕಿ ಪಾತ್ರದಲ್ಲಿ ಶ್ರದ್ದಾ ಶ್ರೀನಾಥ್ ನಟಿಸುವುದು ಖಚಿತವಾಗಿದೆ. ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಮತ್ತು ಸತ್ಯ ಹೆಗಡೆ ಅಥವಾ ನೆಚ್ಚಿನ ಛಾಯಾಗ್ರಹಕಿ ಪ್ರೀತಾ ಛಾಯಾಗ್ರಹಣ ಇರಲಿದೆ.

ರಚಿತಾ ರಾಮ್ ಬಿಟ್ಟು ಹೋದ ಜಾಗ ತುಂಬಿದ 'ಯು-ಟರ್ನ್' ಬೆಡಗಿ ಶ್ರದ್ಧಾ

ಶೂಟಿಂಗ್ ಗೆ ರೆಡಿ

ಕಳೆದ ಮೂರು ತಿಂಗಳಿಂದ ಸಿದ್ದವಾಗುತ್ತಿರುವ ದುನಿಯಾ ವಿಜಿ ಸೋಮವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ಈ ಬಾರಿ ಯುವರಸಿಕರಿಗೆ ಪಕ್ಕಾ ಎಂಟರ್ ಟೈನ್ ಮೆಂಟ್ ನೀಡುವ ಪ್ಲಾನ್ ಮಾಡಿದೆ.

English summary
Kannada Actor Duniya Vijay Trained by international athlet Manjunath for 'johny johny yes papa' Movie. ಅಂತಾರಾಷ್ಟ್ರೀಯ ಅಥ್ಲೆಟ್ ಮಂಜುನಾಥ್ ಅವರ ಬಳಿ ದುನಿಯಾ ವಿಜಯ್ ಜಿಮ್ ಟ್ರೈನಿಂಗ್ ಪಡೆಯುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada