Don't Miss!
- Sports
ಕ್ರಿಸ್ ಗೇಲ್ಗೆ ಭಾರತದ ಮೇಲಿರುವ ಪ್ರೀತಿಗೆ ಉದಾಹರಣೆ ಕೊಟ್ಟ ಶಮಿ
- Automobiles
ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು
- News
Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರೆ ಫಾರೆಸ್ಟ್‌ನಲ್ಲಿ 'ಸಲಗ' ವಿಜಯ್ ಜೊತೆಗೆ ಆಡಿಕುಣಿದ ಮಾವುತರು
ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮೇ 15 ರಂದು ಸಲಗ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಸಲಗ ಚಿತ್ರದ ಹಾಡುಗಳು ಹಾಗೂ ಟೀಸರ್ ಭರ್ಜರಿ ಸದ್ದು ಮಾಡಿದೆ. ದುನಿಯಾ ವಿಜಿಯ ಮೇಕಿಂಗ್ ಶೈಲಿ ಹೆಚ್ಚು ಕುತೂಹಲ ಮೂಡಿಸಿದ್ದು, ಸಲಗದ ಅಬ್ಬರ ಜೋರಾಗಿಯೇ ಇದೆ.
ದುನಿಯಾ ವಿಜಿಯ ಸಲಗ, ಶಿವಣ್ಣನ ಭಜರಂಗಿ-2 ಬಿಡುಗಡೆ ದಿನಾಂಕ ಫಿಕ್ಸ್
ಈ ನಡುವೆ ದುಬಾರೆ ಅರಣ್ಯಕ್ಕೆ ಭೇಟಿ ನೀಡಿದ್ದ ದುನಿಯಾ ವಿಜಯ್ ರಿಯಲ್ ಸಲಗಗಳ ಜೊತೆ ಸಮಯ ಕಳೆದಿದ್ದಾರೆ. ಅಲ್ಲಿನ ಮಾವುತರ ಜೊತೆ ಆಡಿಕುಣಿದಿದ್ದಾರೆ. ದುನಿಯಾ ವಿಜಯ್ ಅವರನ್ನು ನೋಡಿದ ಪ್ರವಾಸಿಗರು ಖುಷಿಯಾಗಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಅರಣ್ಯದ ಪ್ರದೇಶದ ಪೊಲೀಸ್ ಹಾಗೂ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ದುನಿಯಾ ವಿಜಯ್, ಅವರೊಟ್ಟಿಗೆ ವಾಲಿಬಾಲ್ ಆಡಿ ಎಂಜಾಯ್ ಮಾಡಿದರು.
ಒಟಿಟಿಗೆ ನೋ ಎಂದ ದುನಿಯಾ ವಿಜಿ, ಸಲಗ ರಿಲೀಸ್ ಬಗ್ಗೆ ಕೊಟ್ರು ಬ್ರೇಕಿಂಗ್
ರಿಯಲ್ ಸಲಗಗಳ ಅಡ್ಡೆಗೆ ಫ್ಯಾಮಿಲಿ ಜೊತೆಗೆ ಟ್ರಿಪ್ ಹೋಗಿದ್ದ ವಿಜಯ್ ಅವರನ್ನು, ಈ ಸಂದರ್ಭವನ್ನ ವಿಜಿ ಪುತ್ರ ಸಾಮ್ರಾಟ್ ವಿಡಿಯೋ ಶೂಟ್ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನುಳಿದಂತೆ ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ದುನಿಯಾ ವಿಜಯ್, ಧನಂಜಯ್, ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.