»   » ದ್ವಾರಕೀಶ್ ಮುಂದಿನ ಚಿತ್ರ 'ಬನ್ ಬಟರ್ ಜಾಮ್'

ದ್ವಾರಕೀಶ್ ಮುಂದಿನ ಚಿತ್ರ 'ಬನ್ ಬಟರ್ ಜಾಮ್'

Posted By:
Subscribe to Filmibeat Kannada
Actor Dwarakish
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ ಒನ್ಇಂಡಿಯಾ ಕನ್ನಡದ ಶುಭಾಶಯಗಳು. ಕಾರಣ ಅವರು ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜೀವಮಾನದ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಏಪ್ರಿಲ್ 30ರಂದು ಮುಂಬೈನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ಹಿಂದೆ ಇದೇ ಪ್ರಶಸ್ತಿಗೆ ಪಾರ್ವತಮ್ಮ ರಾಜ್ ಕುಮಾರ್, ಆರ್.ಲಕ್ಷ್ಮಣ್, ಕೆಸಿಎನ್ ಗೌಡ, ಸಿವಿಎಲ್ ಶಾಸ್ತ್ರಿ ಅವರು ಭಾಜನರಾಗಿದ್ದಾರೆ.

ಪ್ರತಿವರ್ಷ ಆಯಾ ಭಾಷೆಯ ಚಲನಚಿತ್ರ ವಾಣಿಜ್ಯ ಮಂಡಳಿ ಅರ್ಹರನ್ನು ಈ ಪ್ರಶಸ್ತಿಗಾಗಿ ಶಿಫಾರಸು ಮಾಡುತ್ತದೆ. ಭಾರತೀಯ ಚಿತ್ರರಂಗಕ್ಕಾಗಿ ಸಲ್ಲಿಸಿದ ಸೇವೆಗಾಗಿ ದ್ವಾರಕೀಶ್ ಅವರು ಈ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದೇ ಸಂತಸದಲ್ಲಿರುವ ದ್ವಾರಕೀಶ್ ಅವರು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಅವರ ನಿರ್ಮಾಣದ 'ಚಾರುಲತಾ' ಚಿತ್ರ ನಿರೀಕ್ಷೆಗಳೆಲ್ಲವನ್ನೂ ತಲೆಕೆಳಗೆ ಮಾಡಿತು. ಥಾಯ್ ಭಾಷೆಯ 'ಅಲೋನ್' ಚಿತ್ರವನ್ನು ಅವರು 'ಚಾರುಲತಾ' ಮಾಡಿದ್ದರು.

ಈ ಬಾರಿ ಅವರು ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಬ್ರೆಡ್ ಬಟರ್ ಜಾಮ್' ಎಂದು ಹೆಸರಿಟ್ಟಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದ್ದು ಮೇ ಅಥವಾ ಜೂನ್ ತಿಂಗಳಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

ಚಿತ್ರಕಥೆ ಎಲ್ಲವೂ ಸಿದ್ಧವಾದ ಬಳಿಕ ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ದ್ವಾರಕೀಶ್ ಅವರ ಪುತ್ರ ಯೋಗೇಶ್. ಈ ಬಾರಿ ಅವರು ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟುಕೊಂಡೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. (ಏಜೆನ್ಸೀಸ್)

English summary
Kannada films veteran producer, actor and director Dwarakish selected for Dada Saheb Phalke academy award for lifetime achivement this year. Meanwhile he started script work for his forthcoming film 'Bun Butter Jam'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada