Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಚಿತಾ ರಾಮ್- ರಾಣ ಲವ್ ಸ್ಟೋರಿಯ ಟ್ರೇಲರ್ ಸದ್ಯಕ್ಕಿಲ್ಲ!
ಕನ್ನಡದಲ್ಲಿ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಏಕ್ ಲವ್ ಯಾ ಚಿತ್ರ ಕೂಡ ಒಂದು. ಈ ಚಿತ್ರದ ಮೂಲಕ ನಿರ್ದೇಶಕ ಪ್ರೇಮ್ ಹೊಸದೊಂದು ಲವ್ ಸ್ಟೋರಿಯನ್ನು ಹೇಳಲು ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಟೀಸರ್ ಮೂಲಕ ಚಿತ್ರದ ಬಗ್ಗೆ ಸಣ್ಣ ಸುಳಿವನ್ನು ಬಿಚ್ಚಿಡಲಾಗಿತ್ತು.
Recommended Video
ಆದರೆ ಇದೆಲ್ಲವನ್ನೂ ಮೀರಿಸುವಂತಹ ಟ್ರೇಲರನ್ನು ಚಿತ್ರ ತಂಡ ಸಿದ್ಧ ಮಾಡಿಕೊಂಡಿತ್ತು. ಈ ಚಿತ್ರದ ಟ್ರೇಲರ್ ನೋಡಲು ಸಾಕಷ್ಟು ಮಂದಿ ಕಾಯುತ್ತಿದ್ದು. ಚಿತ್ರದ ಬಗ್ಗೆ ಹುಟ್ಟಿರುವ ಕುತೂಹಲಕ್ಕೆ ಟ್ರೇಲರ್ ಉತ್ತರ ಆಗಲಿದೆ ಎನ್ನುವ ನಿರೀಕ್ಷೆ ಇತ್ತು. ಅಂತೆಯೇ ಚಿತ್ರದ ಟ್ರೇಲರ್ ರಿಲೀಸ್‌ಗೆ ಚಿತ್ರ ತಂಡ ಮುಂದಾಗಿತ್ತು. ಇದೇ ಜನವರಿ 4 ರಂದು ಏಕ್ ಲವ್ ಯಾ ಚಿತ್ರದ ಟ್ರೇಲರ್ ಅನಾವರಣ ಆಗಬೇಕಿತ್ತು.
ಆದರೆ ಚಿತ್ರದ ಟ್ರೇಲರ್ ರಿಲೀಸ್ ಪೋಸ್ಟ್ ಪೋನ್ ಮಾಡಿದೆ ಚಿತ್ರ ತಂಡ. ಈ ಬಗ್ಗೆ ನಿರ್ದೇಶಕ ಪ್ರೇಮ್ ಮತ್ತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದರ ಮೂಲಕ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ತಾಂತ್ರಿಕ ದೋಷದಿಂದ ಟ್ರೇಲರ್ ರಿಲೀಸ್ ಪೋಸ್ಟ್ ಪೋನ್!
ಏಕ್ ಲವ್ ಯಾ ಚಿತ್ರದ ಟ್ರೇಲರ್ ಇದೇ ಜನವರಿ 4ರಂದು ರಿಲೀಸ್ ಮಾಡುವುದಾಗಿ ಚಿತ್ರ ತಂಡ ಹೇಳಿಕೊಂಡಿತು. ಮೈಸೂರಿನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಟ್ರೇಲರ್ ಲಾಂಚ್ ಮಾಡುವ ಯೋಜನೆಯನ್ನು ರೂಪಿಸಿತ್ತು ಚಿತ್ರತಂಡ. ಆದರೆ ಈಗ ಅದು ಸಾಧ್ಯ ಆಗಿಲ್ಲ. ಹಾಗಾಗಿ ಪೋಸ್ಟ್ ಮೂಲಕ ಈ ವಿಚಾರವನ್ನು ಹೇಳಿಕೊಂಡು ಸಹಕರಿಸಿ ಎಂದು ಪ್ರೇಮ್ ಕೇಳಿಕೊಂಡಿದ್ದಾರೆ. "ದಿನಾಂಕ 04-01-2022 ರಂದು ಮೈಸೂರು ಡಿಆರ್ಸಿ ಮಾಲ್‌ನಲ್ಲಿ ನಡೆಯಬೇಕಿದ್ದ, ನಮ್ಮ ಏಕ್ ಲವ್ ಯಾ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ತಾಂತ್ರಿಕ ದೋಷಗಳಿಂದ ಮುಂದೂಡಲಾಗಿದೆ. ದಯವಿಟ್ಟು ನಿಮ್ಮ ಪ್ರೀತಿ, ನಿರೀಕ್ಷೆ ಹೀಗೆ ಕಾಯ್ದಿರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ". ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

'ಎಕ್ಸ್ ಕ್ಯೂಸ್ ಮಿ' ನೆನಪಿಸುವ 'ಏಕ್ ಲವ್ ಯಾ'!
ನಿರ್ದೇಶಕ ಪ್ರೇಮ್ ಲವ್ ಸ್ಟೋರಿಯನ್ನು ಎಣೆಯುವುದರಲ್ಲಿ ನಿಸ್ಸೀಮರು. ಅವರ ನಿರ್ದೇಶನದಲ್ಲಿ ಲವ್ ಸ್ಟೋರಿ ಬರ್ತಿದೆ ಅಂದರೆ ಸಾಕು, ನಿರೀಕ್ಷೆಗಳು ಮನೆ ಮಾಡಿ ಬಿಡುತ್ತವೆ. ಈಗ ಏಕ್ ಲವ್ ಯಾ ಮೂಲಕ ಮತ್ತೆ ಪ್ರೇಮ್ ಕಹಾನಿಯನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ನಿರ್ದೇಶಕ ಪ್ರೇಮ್. ಈ ಚಿತ್ರದಲ್ಲಿ ಟ್ರೈಯಾಂಗಲ್ ಲವ್ ಸ್ಟೋರಿ ಇದೆ ಎನ್ನುವುದು ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಕಂಟೆಂಟ್‌ಗಳು ಹೇಳುತ್ತಿವೆ. ಹಾಗಾಗಿ ಈ ಚಿತ್ರ ಎಕ್ಸ್ ಕ್ಯೂಸ್ ಮಿ ಚಿತ್ರವನ್ನು ನೆನಪಿಸುತ್ತದೆ. ಆದರೆ ಚಿತ್ರ ರಿಲೀಸ್ ಬಳಿಕವೇ, ಅದೆ ಭವಿಷ್ಯ ಮತ್ತು ವಿಷ್ಯ ಗೊತ್ತಾಗುವುದು.

ರಕ್ಷಿತಾ ಸಹೋದರನಿಗಾಗಿ ಏಕ್ ಲವ್ ಯಾ!
ಏಕ್ ಲವ್ ಚಿತ್ರ ನಿರ್ದೇಶಕ ಪ್ರೇಮ್ ಕುಟುಂಬಕ್ಕೆ ಹತ್ತಿರವಾದ ಚಿತ್ರ. ಕಾರಣ ಈ ಚಿತ್ರವನ್ನು ಪ್ರೇಮ್ ಪತ್ನಿ, ನಟಿ ರಕ್ಷಿತಾ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಚಿತ್ರದೊಂದಿಗೆ ಮೊದಲ ಬಾರಿಗೆ ರಕ್ಷಿತಾ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಇನ್ನು ಚಿತ್ರದ ನಾಯಕ ರಾಣಾ ರಕ್ಷಿತಾ ಅವರ ಸೋದರ. ಇದೇ ಕಾರಣಕ್ಕೆ ಈ ಚಿತ್ರ ಅವರಿಗೆ ತುಂಬಾನೆ ವಿಶೇಷ.

21ಕ್ಕೆ ಏಕ್ ಲವ್ ಯಾ ಚಿತ್ರದ ರಿಲೀಸ್!
ಇನ್ನು ಏಕ್ ಲವ್ ಯಾ ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದೆ ಜನವರಿ 21ಕ್ಕೆ ಚಿತ್ರದ ರಿಲೀಸ್ ದಿನಾಂಕ ನಿಗದಿ ಆಗಿದೆ. ಲಾಕ್‌ಡೌನ್ ಇಲ್ಲದೇ ಹೋದರೆ ಚಿತ್ರ ರಿಲೀಸ್ ಅಗುತ್ತದೆ. ಆದರೆ ಲಾಕ್‌ಡೌನ್ ಏನಾದರು ಆಗಿ ಬಿಟ್ಟರೆ ಚಿತ್ರದ ರಿಲೀಸ್ ಮುಂದೆ ಹೋಗುವುದು ಖಚಿತ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ರಿಲೀಸ್ ಮಾಡಲಿದೆ ಚಿತ್ರ ತಂಡ.