For Quick Alerts
  ALLOW NOTIFICATIONS  
  For Daily Alerts

  ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

  By Pavithra
  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇದೇ ತಿಂಗಳ ಅಂದರೆ ಜೂನ್ 26 ರಂದು ನಡೆಯುತ್ತಿದೆ. 721 ನಿರ್ಮಾಪಕರು 378 ವಿತರಕರು ಹಾಗೂ 136 ಪ್ರದರ್ಶಕರು ಗಳು ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಚುನಾವಣೆಯಲ್ಲಿ ಭಾಗಿಯಾಗಲಿದ್ದರೆ. ಈ ಬಾರಿ ವಿತಕರ ವಲಯದಿಂದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಅವಕಾಶ.

  ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಮೂರು ಜನ ಪ್ರಮುಖರ ಹೆಸರು ಕೇಳಿ ಬಂದಿದ್ದು ಮೊದಲನೆಯದ್ದಾಗಿ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ, ವಿತರಕರಾಗಿ ಗುರುತಿಸಿಕೊಂಡಿರುವ ಎನ್ ಎಂ ಸುರೇಶ್. ಇವರ ಜೊತೆಯಲ್ಲಿ ನಿರ್ಮಾಪಕ, ವಿತರಕ ಚಿನ್ನೇಗೌಡ ಅವರ ಹೆಸರು ಕೂಡ ಕೇಳಿ ಬರುತ್ತಿದ್ದು ಮಾರ್ಸ್ ಸುರೇಶ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿದ್ದಾರೆ.

  ಈ ಮೂರು ವಿತರಕರ ಜೊತೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ಮತ್ತು ಪ್ರದರ್ಶಕರಾದ ಎನ್ ಕುಮಾರ್ ಕೂಡ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಕೂಡ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಆದರೆ ಯಾವ ಹೆಸರುಗಳು ಮಾತ್ರ ಇನ್ನೂ ಪಕ್ಕಾ ಆಗಿಲ್ಲ.

  ಸದ್ಯ ಸಾರಾ ಗೋವಿಂದು ಕಳೆದ ಎರಡು ವರ್ಷಗಳಿಂದ ವರ್ಷಗಳಿಂದ ಅಧ್ಯಕ್ಷರಾಗಿದ್ದುಕೊಂಡು ಸರ್ಕಾರದಿಂದ ಚಲನಚಿತ್ರರಂಗ ಹಾಗೂ ವಾಣಿಜ್ಯ ಮಂಡಳಿಗೆ ಸಾಕಷ್ಟು ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ನಾಲ್ಕು ನಾಲ್ವರಲ್ಲಿ ಯಾರೂ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಎನ್ನುವುದನ್ನು ಜೂನ್ 26 ರಂದು ತಿಳಿಯಲಿದೆ.

  English summary
  Election to the Karnataka Film Chamber of Commercewill be held on June 26 and 721 producers, 378 distributors, and 136 Exhibitors are eligible to cast their votes. This time President will be from the distributor's wing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X