For Quick Alerts
  ALLOW NOTIFICATIONS  
  For Daily Alerts

  ಇಂಜಿನಿಯರ್ಸ್ ಡೇ: ಕನ್ನಡ ಇಂಡಸ್ಟ್ರಿಯಲ್ಲಿ ಯಾರೆಲ್ಲಾ ಇಂಜಿನಿಯರ್ಸ್ ಇದ್ದಾರೆ?

  |

  ಸೆಪ್ಟೆಂಬರ್ 15 ರಂದು ಇಂಜಿನಿಯರ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ದೇಶದ ಕಂಡ ಅತ್ಯುನ್ನತ ಇಂಜಿನಿಯರ್‌ಗಳನ್ನು ಜನಸಾಮಾನ್ಯರು ಸ್ಮರಿಸುತ್ತಾರೆ. ಇಂಜಿನಿಯರ್ ಕ್ಷೇತ್ರದಲ್ಲಿ ಸರ್ ಎಂವಿ ಅವರು ಸಲ್ಲಿಸಿರುವ ಅಪಾರ ಕೊಡುಗೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.

  ಇಂಜಿನಿಯರ್ ಪದವಿ ಪಡೆದಿದ್ದರು ಆ ಕೆಲಸ ಬಿಟ್ಟು ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವ ಹಲವು ಕಲಾವಿದರು ಸ್ಯಾಂಡಲ್‌ವುಡ್‌ನಲ್ಲಿದ್ದಾರೆ. ಕೆಲವರು ಇಂಜಿನಿಯರಿಂಗ್ ಓದಿ ಬಂದಿದ್ದಾರೆ. ಇನ್ನು ಕೆಲವರು ಇಂಜಿನಿಯರ್ ಕೆಲಸ ಸಹ ಮಾಡಿ ಬಣ್ಣದ ಜಗತ್ತಿಗೆ ಬಂದಿದ್ದಾರೆ. ಹಾಗಾದ್ರೆ, ಕನ್ನಡ ಇಂಡಸ್ಟ್ರಿಯಲ್ಲಿ ಯಾರೆಲ್ಲ ಇಂಜಿನಿಯರ್ ಶಿಕ್ಷಣ ಪಡೆದುಕೊಂಡಿದ್ದಾರೆ? ಮುಂದೆ ಓದಿ....

  ಸರ್ ಎಂ. ವಿಶ್ವೇಶ್ವರಯ್ಯ ಭಾರತ ರತ್ನ ಸ್ವೀಕರಿಸುತ್ತಿರುವ ಅಪರೂಪದ ವಿಡಿಯೋ

  ಕಿಚ್ಚ ಸುದೀಪ್

  ಕಿಚ್ಚ ಸುದೀಪ್

  ಕನ್ನಡ ನಟ ಕಿಚ್ಚ ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಆದರೆ, ಸುದೀಪ್ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಿನಿಮಾರಂಗ.

  ರಮೇಶ್ ಅರವಿಂದ್

  ರಮೇಶ್ ಅರವಿಂದ್

  ಕನ್ನಡದ ಹಿರಿಯ ನಟ, ನಿರ್ದೇಶಕ ಹಾಗೂ ಟಿವಿ ನಿರೂಪಕ ರಮೇಶ್ ಅರವಿಂದ ಸಹ ಇಂಜಿನಿಯರ್. ಬೆಂಗಳೂರಿನ ಯುವಿಸಿಇ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ.

  ರಕ್ಷಿತ್ ಶೆಟ್ಟಿ

  ರಕ್ಷಿತ್ ಶೆಟ್ಟಿ

  ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಸಹ ಇಂಜಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಮಂಗಳೂರಿನ ಎನ್.ಎಂ.ಎ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

  ಧನಂಜಯ್

  ಧನಂಜಯ್

  ಡಾಲಿ ಖ್ಯಾತಿಯ ನಟ ಧನಂಜಯ್ ಸಹ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಮೈಸೂರಿನ ಶ್ರೀ ಜಯಚಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಇವರು Rank ವಿದ್ಯಾರ್ಥಿ ಎನ್ನುವುದು ವಿಶೇಷ.

  ಹರ್ಷಿಕಾ ಪೂಣಚ್ಚ

  ಹರ್ಷಿಕಾ ಪೂಣಚ್ಚ

  ಕನ್ನಡದ ಯುವ ನಟಿ ಹರ್ಷಿಕಾ ಪೂಣಚ್ಚ ಬೆಂಗಳೂರಿನ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

  ಭಂಡಾರಿ ಸಹೋದರರು

  ಭಂಡಾರಿ ಸಹೋದರರು

  ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿ ಇಬ್ಬರು ಸಹ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಮೈಸೂರಿನ ವಿದ್ಯಾ ವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ವಿವಿಐಇಟಿ) ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ.

  ಕೊನೆಗೂ ಅಪ್ಪಾಜಿ ಜೊತೆ ಆಕ್ಟ್ ಮಾಡೋ ಆಸೆ ಈಡೇರಲಿಲ್ಲ | Shruthi Krishna | Filmibeat Kannada
  ಚೇತನ್ ಚಂದ್ರ

  ಚೇತನ್ ಚಂದ್ರ

  ಕನ್ನಡದ ಮತ್ತೊಬ್ಬ ನಟ ಚೇತನ್ ಚಂದ್ರ ಸಹ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಮಾಹಿತಿ ವಿಜ್ಞಾನ ವಿಭಾದಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

  English summary
  Engineers Day 2020: Kiccha Sudeep, ramesh aravind, rakshit shetty, harshika poonacha, Deepa Sannidhi and some others actors also studied engineering.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X