»   » ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ಖ್ಯಾತ ಸಂಸ್ಥೆ!

ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ಖ್ಯಾತ ಸಂಸ್ಥೆ!

Posted By:
Subscribe to Filmibeat Kannada

ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರವನ್ನ ನಿರ್ಮಾಣ ಹಾಗೂ ವಿತರಣ ಮಾಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕಳೆದ ವರ್ಷ ನಾಗರಹಾವು' ಚಿತ್ರದ ಮೂಲಕ ಬಾಲಿವುಡ್‍ ನ ಜನಪ್ರಿಯ ನಿರ್ಮಾಣ ಮತ್ತು ವಿತರಣೆಯ ಸಂಸ್ಥೆಯಾದ 'ಪೆನ್' ಕನ್ನಡಕ್ಕೆ ಬಂದಿತ್ತು. ಇದೀಗ ಮತ್ತೊಂದು ಖ್ಯಾತ ನಿರ್ಮಾಣ ಸಂಸ್ಥೆ ಸ್ಯಾಂಡಲ್ ವುಡ್ ಗೆ ಲಗ್ಗೆಯಿಟ್ಟಿದೆ.[ಚಿರಂಜೀವಿ ಸರ್ಜಾ - ಚೈತನ್ಯ 'ಪರಾರಿ'.! ಎಲ್ಲಿದ್ದಾರೋ? ಏನ್ಮಾಡ್ತಿದ್ದಾರೋ?]

ಹೌದು, ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಕೆ.ಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿಬರ್ತಿದ್ದು, ಈ ಚಿತ್ರವನ್ನ ಬಾಲಿವುಡ್ ನ 'ಇರೋಸ್ ಇಂಟರ್ ನ್ಯಾಷನಲ್' ಸಂಸ್ಥೆ ಮಾಡಲು ಮುಂದಾಗಿದೆ.

ಬಾಲಿವುಡ್ ಸಂಸ್ಥೆ ನಿರ್ಮಾಣ!

'ಇರೋಸ್ ಇಂಟರ್ ನ್ಯಾಷನಲ್' ಇದೇ ಮೊದಲ ಭಾರಿಗೆ ಕನ್ನಡ ಚಿತ್ರವೊಂದನ್ನ ನಿರ್ಮಾಣ ಮಾಡಲು ಮುಂದಾಗಿದ್ದು, ಕೆ.ಎಸ್ ಡ್ರೀಮ್ಸ್ ಹಾಗೂ ನಕ್ಷತ್ರ ಸಂಸ್ಥೆ ಜೊತೆ ಜಂಟಿ ನಿರ್ಮಾಣ ಮಾಡಲಿದೆ. ಈ ಮೂಲಕ 'ಮೈಸೂರು ಟಾಕೀಸ್' ಅವರ ಜೊತೆಯಲ್ಲಿ ಈ ಚಿತ್ರವನ್ನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ 'ಇರೋಸ್ ಇಂಟರ್ ನ್ಯಾಷನಲ್' ಸಜ್ಜಾಗಿದೆ.

ಸೌತ್ ಇಂಡಸ್ಟ್ರಿಯಲ್ಲಿ 'ಇರೋಸ್' !

ರಜನಿಕಾಂತ್ ಅಭಿನಯದ 'ಲಿಂಗಾ', 'ಕೊಚಾಡಿಯನ್', ಮಹೇಶ್ ಬಾಬು ಅಭಿನಯದ 'ಶ್ರೀಮಂತುಡು', ಪವನ್ ಕಲ್ಯಾಣ್ ಅಭಿನಯದ 'ಸರ್ದಾರ್ ಗಬ್ಬರ್ ಸಿಂಗ್', ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ಚಿತ್ರಗಳು ಸೇರಿದಂತೆ ದಕ್ಷಿಣದ ಹಲವು ಚಿತ್ರಗಳನ್ನ ಇರೋಸ್ ಇಂಟರ್ ನ್ಯಾಷನಲ್ ವಿತರಣೆ ಮಾಡಿದೆ.

ಸಸ್ಪೆನ್ಸ್-ಹಾರರ್ 'ಆಕೆ'!

ಅಂದ್ಹಾಗೆ, 'ಆಕೆ'....ಮಹಿಳಾ ಕೇಂದ್ರಿತ ಚಿತ್ರವಾಗಿದ್ದು, ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಕಥೆಯನ್ನೊಳಗೊಂಡಿದೆಯಂತೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿದೆ.

'ಆಕೆ'ಗೆ ಹಾಲಿವುಡ್ ತಂತ್ರಜ್ಞರು!

ಈ ಚಿತ್ರದ ವಿಶೇಷ ಅಂದ್ರೆ, ಭಾರತೀಯ ತಂತ್ರಜ್ಞರಿಗಿಂತ ಹಾಲಿವುಡ್ ತಂತ್ರಜ್ಞರು ಹೆಚ್ಚು ಕೆಲಸ ಮಾಡಿದ್ದಾರೆ. ಕಾರ್ಲ್ ಆಸ್ಟಿನ್ ಎಂಬುವವರು ಚೈತನ್ಯ ಜೊತೆಗೆ ಚಿತ್ರಕಥೆ ಬರೆದಿದ್ದಾರಂತೆ. ಪಾಲ್ ಬನ್ರ್ಸ್ ಎನ್ನುವವರು ಪ್ರೊಡಕ್ಷನ್ ಡಿಸೈನರ್ ಆಗಿದ್ದಾರಂತೆ. `ಹ್ಯಾರಿ ಪಾಟರ್' ಚಿತ್ರಕ್ಕೆ ಕ್ಯಾಮರಾಮ್ಯಾನ್ ಆಗಿದ್ದ ಇಯಾನ್ ಹೌಸ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಚಿರು ಸರ್ಜಾ-ಶರ್ಮಿಳಾ ಮಾಂಡ್ರೆ!

ಚಿತ್ರದಲ್ಲಿ ಚಿರು ಸರ್ಜಾಗೆ ಶರ್ಮಿಳಾ ಮಾಂಡ್ರೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಒಂದಿಬ್ಬರು ಇಂಗ್ಲಿಷ್ ನಟರು ಅಭಿನಯಿಸಿದ್ದು, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಸ್ನೇಹಾ ಆಚಾರ್ಯ, ಅಮನ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಮಾರ್ಚ್ ನಲ್ಲಿ ಬಿಡುಗಡೆ!

ಉಳಿದಂತೆ ಯೋಗೀಶ್ ದ್ವಾರಕೀಶ್ ಅವರು ಕಾರ್ಯಕಾರಿ ನಿರ್ಮಾಪಕಾರಗಿದ್ದು, ಗುರುಕಿರಣ್ ಅವರ ಸಂಗೀತ, ರೋಹಿತ್ ಪದಕಿ ಅವರ ಸಂಭಾಷಣೆಯಿದೆ. ಛಾಯಗ್ರಾಹಕ ಮಲ್ಹರ್ ಭಟ್ ಅವರ ಕೂಡ ಕೆಲಸ ಮಾಡಿದ್ದಾರಂತೆ. ಈಗಾಗಲೇ ಲಂಡನ್ ಮತ್ತು ಬೆಂಗಳೂರು ಸೇರಿದಂತೆ 44 ದಿನಗಳ ಚಿತ್ರೀಕರಣ ಮುಗಿದಿದೆಯಂತೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ 'ಆಕೆ' ಮಾರ್ಚ್ ತಿಂಗಳಲ್ಲಿ ಬರುವ ಸಾಧ್ಯತೆಯಿದೆ.

English summary
The makers of Chiru Sarja and Sharmila Mandre's movie Aake, have announced that Eros International will be co producing the film with KS Dreams and Nakshatra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada