»   » 'ರಾಜಕುಮಾರ' ಚಿತ್ರ ನೋಡಿ 'ಪುನೀತ'ರಾದ ಮಾಜಿ ಪ್ರಧಾನಿ ದೇವೇಗೌಡ್ರು

'ರಾಜಕುಮಾರ' ಚಿತ್ರ ನೋಡಿ 'ಪುನೀತ'ರಾದ ಮಾಜಿ ಪ್ರಧಾನಿ ದೇವೇಗೌಡ್ರು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣ್ತುಂಬಿಕೊಂಡು 'ಪುನೀತ'ರಾದರು.

ಹೌದು, ಮೊನ್ನೆಯಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರವನ್ನ ವೀಕ್ಷಿಸಿ, ಚಿತ್ರತಂಡದ ಬೆನ್ನುತಟ್ಟಿದ್ದ ಎಚ್.ಡಿ.ದೇವೇಗೌಡರು ಇಂದು 'ರಾಜಕುಮಾರ' ಚಿತ್ರವನ್ನ ನೋಡುವ ಮನಸ್ಸು ಮಾಡಿದ್ದರು.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ಭಾವುಕರಾದ ಮಾಜಿ ಪ್ರಧಾನಿ]


ಎಲ್ಲಿ ವೀಕ್ಷಿಸಿದರು.?

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇರುವ ರೇಣುಕಾಂಬ ಚಿತ್ರಮಂದಿರದಲ್ಲಿ ಪತ್ನಿ ಚೆನ್ನಮ್ಮ ಹಾಗೂ ಆಪ್ತೇಷ್ಟರ ಜೊತೆ ಕೂತು ಎಚ್.ಡಿ.ದೇವೇಗೌಡರು 'ರಾಜಕುಮಾರ' ಚಿತ್ರವನ್ನ ವೀಕ್ಷಿಸಿದರು.


ಇಂಟರ್ವಲ್ ನಲ್ಲಿ ಭಾವುಕರಾದ ಎಚ್.ಡಿ.ದೇವೇಗೌಡರು

ಮಧ್ಯಂತರದ ವೇಳೆ... ಅಂದ್ರೆ, ಪುನೀತ್ ರಾಜ್ ಕುಮಾರ್ 'ಕಸ್ತೂರಿ ನಿವಾಸ'ಕ್ಕೆ ಕಾಲಿಡುವ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡರು ಕೊಂಚ ಭಾವುಕರಾದರು.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]


ಮಲ್ಯ ಜೋಕ್ ಕೇಳಿ ನಸುನಕ್ಕ ಎಚ್.ಡಿ.ಡಿ

'ರಾಜಕುಮಾರ' ಚಿತ್ರದಲ್ಲಿ ಗೋವಾ ಟ್ರಿಪ್ ವೇಳೆ ಮಲ್ಯ ಕುರಿತು ಇರುವ ಜೋಕ್ ನೋಡಿ ಎಚ್.ಡಿ.ದೇವೇಗೌಡ ನಸುನಕ್ಕರು.


ಸಿನಿಮಾ ನೋಡಿದ್ಮೇಲೆ ಏನಂದರು.?

''ಸಮಾಜಕ್ಕೆ ನೀತಿ ಪಾಠ ಭೋದನೆ ಮಾಡಿದ ಹಾಗಿದೆ. ಪುನೀತ್ ರಾಜ್ ಕುಮಾರ್ ಚೆನ್ನಾಗಿ ಅಭಿನಯಿಸಿದ್ದಾರೆ. ಈಗಿನ ಕಾಲದಲ್ಲಿ ವಿದ್ಯಾವಂತ ಮಕ್ಕಳು ತಂದೆ-ತಾಯಂದಿರನ್ನ ನೋಡಿಕೊಳ್ಳದೇ ಇರುವುದನ್ನು ಕಂಡಾಗ ಬೇಸರ ಆಗುತ್ತದೆ. ಈ ಚಿತ್ರತಂಡದ ಪ್ರಯತ್ನ ಶ್ಲಾಘನೀಯ'' ಎಂದು ಎಚ್.ಡಿ.ದೇವೇಗೌಡ ಹೇಳಿದರು.


ಇಬ್ಬರಿಗೂ ಒಳ್ಳೆಯದ್ದಾಗಲಿ...

''ಮೊನ್ನೆ, 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರ ನೋಡಿದೆ. ಅಣ್ಣತಮ್ಮಂದಿರಿಬ್ಬರೂ ಉತ್ತಮ ನಟರು. ಫೈಟ್ ಗಳು ಕೂಡ ಚೆನ್ನಾಗಿವೆ. ಇಬ್ಬರಿಗೂ ಒಳ್ಳೆಯದ್ದಾಗಲಿ'' ಎಂದು ಎಚ್.ಡಿ.ದೇವೇಗೌಡ ಹರಸಿದರು.


English summary
EX Prime Minister HD Devegowda lauds Puneeth Rajkumar starrer Kannada Movie 'Raajakumara'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada