For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ಭಾವುಕರಾದ ಮಾಜಿ ಪ್ರಧಾನಿ

  By Bharath Kumar
  |

  ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಇಂಟರ್ ವಲ್ ದೃಶ್ಯವನ್ನ ನೋಡಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಭಾವುಕರಾಗಿದ್ದಾರೆ. ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರ ಮಂದಿರದಲ್ಲಿ ಪತ್ನಿ ಜೊತೆಯಲ್ಲಿ ದೇವೇಗೌಡ ಅವರು 'ರಾಜಕುಮಾರ' ಚಿತ್ರವನ್ನ ನೋಡಿದ್ದಾರೆ..['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

  ಮೊನ್ನೆ ತಾನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರವನ್ನ ದೇವೇಗೌಡ ಅವರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನ ವೀಕ್ಷಿಸಿದ್ದಾರೆ.

  ಅಂದ್ಹಾಗೆ, ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ತಮಿಳು ನಟ ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ರಂಗಾಯಣ ರಘು, ಚಿಕ್ಕಣ್ಣ, ದತ್ತಣ್ಣ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು.['ರಾಜಕುಮಾರ'ನನ್ನ ನೋಡಿ ರಿಲೀಫ್ ಆದ ಕೆ.ಎಸ್ ಈಶ್ವರಪ್ಪ]

  ಮಾರ್ಚ್ 24 ರಂದು ಬಿಡುಗಡೆಯಾಗಿದ್ದ 'ರಾಜಕುಮಾರ' 50 ದಿನಗಳನ್ನ ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಅವರು ಕೂಡ 'ರಾಜಕುಮಾರ' ಚಿತ್ರವನ್ನ ನೋಡಿದ್ದರು.

  English summary
  Ex Prime Minister HD Devegowda Become Emotional while Watching Puneeth Rajakumar Starerr Raajakumara Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X