For Quick Alerts
  ALLOW NOTIFICATIONS  
  For Daily Alerts

  ಕಥೆಯನ್ನು ಯಾರು ಕೇಳಿ ಒಪ್ಪಿಕೊಂಡ ನಂತರ ದರ್ಶನ್ ನಟಿಸಲು ಒಪ್ಪಿಕೊಳ್ತಾರೆ? ಇಂಥ ಕಥೆ ಮಾತ್ರ ಬೇಡ ಅಂತಾರೆ ದರ್ಶನ್!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ್ದಾರೆ. ಲೈಟ್ ಬಾಯ್ ಆಗಿ ಕೆಲಸ ಆರಂಭಿಸಿ ಪೋಷಕ ಪಾತ್ರಗಳಿಗಾಗಿ ಬಣ್ಣ ಹಚ್ಚಲು ಆರಂಭಿಸಿದ ನಟ ದರ್ಶನ್ ಸದ್ಯ ಬಾಕ್ಸ್ ಆಫೀಸ್ ಸುಲ್ತಾನನಾಗಿದ್ದಾರೆ ಹಾಗೂ ಚಾಲೆಂಜಿಂಗ್ ಸ್ಟಾರ್ ಆಗಿ ಕನ್ನಡ ಚಿತ್ರರಂಗದ ಅತಿಮುಖ್ಯ ನಟ ಎನಿಸಿಕೊಂಡಿದ್ದಾರೆ. ಹೀಗೆ ಕಷ್ಟದ ಹಾದಿಯಲ್ಲಿ ಬೆಳೆದು ಬಂದ ದರ್ಶನ್ ಸದ್ಯ ತನ್ನ 55ನೇ ಚಿತ್ರವಾದ ಕ್ರಾಂತಿ ಪ್ರಚಾರದಲ್ಲಿ ನಿರತರಾಗಿದ್ದಾರೆ.

  ಹೌದು, ಈ ಬಾರಿ ತಮ್ಮ ಚಿತ್ರದ ಪ್ರಚಾರಕ್ಕಾಗಿ ದರ್ಶನ್ ಸ್ವತಃ ಸಂದರ್ಶನಗಳಲ್ಲಿ ಭಾಗವಹಿಸಿದ್ದು ಸಂದರ್ಶಕರು ಕೇಳುವ ಭಿನ್ನ ವಿಭಿನ್ನ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಕ್ರಾಂತಿ ಚಿತ್ರದ ಕುರಿತಾಗಿ ಮಾತ್ರವಲ್ಲದೇ ತಮ್ಮ ಹಲವು ವೈಯಕ್ತಿಕ ವಿಚಾರ ಹಾಗೂ ತಮ್ಮ ಸಿನಿ ಜರ್ನಿಯ ಬಗ್ಗೆ ಕೂಡ ದರ್ಶನ್ ಹೇಳಿಕೊಂಡಿದ್ದಾರೆ.

  ಬಾಯ್ತಪ್ಪಿ 'ಕ್ರಾಂತಿ' ಸಿನಿಮಾ ಬಜೆಟ್ ಎಷ್ಟು ಎಂದು ಹೇಳಿಬಿಟ್ಟರು ಚಾಲೆಂಜಿಂಗ್ ಸ್ಟಾರ್ ದರ್ಶನ್! ಬಾಯ್ತಪ್ಪಿ 'ಕ್ರಾಂತಿ' ಸಿನಿಮಾ ಬಜೆಟ್ ಎಷ್ಟು ಎಂದು ಹೇಳಿಬಿಟ್ಟರು ಚಾಲೆಂಜಿಂಗ್ ಸ್ಟಾರ್ ದರ್ಶನ್!

  ಇನ್ನು ದರ್ಶನ್ ನಟಿಸುವ ಚಿತ್ರದ ಕತೆಯನ್ನು ಯಾರು ಕೇಳಿ ಕತೆ ಚೆನ್ನಾಗಿದೆ ನಟಿಸಬಹುದು ಎಂಬ ಸಲಹೆಯನ್ನು ದರ್ಶನ್ ಅವರಿಗೆ ಯಾರು ನೀಡಬಹುದು ಎಂಬ ಪ್ರಶ್ನೆ ಹಲವು ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಇತ್ತು. ಈ ಪ್ರಶ್ನೆಗೆ ಈಗ ನಟ ದರ್ಶನ್ ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

  ಕತೆಯನ್ನು ಯಾರು ಕೇಳಿ ಓಕೆ ಮಾಡ್ತಾರೆ?

  ಕತೆಯನ್ನು ಯಾರು ಕೇಳಿ ಓಕೆ ಮಾಡ್ತಾರೆ?

  ಕನ್ನಡ ಪಿಚ್ಚರ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಕ್ರಾಂತಿ ಚಿತ್ರದ ಕುರಿತಾದ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ದರ್ಶನ್ ಅವರಿಗೆ ನಿಮಗೆ ನಿರ್ದೇಶಕರು ಕತೆ ಹೇಳಲು ಬಂದಾಗ ಆ ಕತೆಯನ್ನು ನಿಮ್ಮನ್ನು ಬಿಟ್ಟು ಬೇರೆ ಯಾರಾದರೂ ಕೇಳ್ತಾರಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್ ಕತೆಯನ್ನು ಕೇಳಿ ಒಪ್ಪಿಕೊಳ್ಳುವುದು ತಾನು ಮಾತ್ರ, ಬೇರೆ ಯಾರೂ ಸಹ ಇದಕ್ಕೆ ತಲೆ ಹಾಕುವುದಿಲ್ಲ, ತನಗೆ ಕತೆ ಇಷ್ಟ ಆದರೆ ಚಿತ್ರದಲ್ಲಿ ನಟಿಸುವುದಷ್ಟೇ ಎಂದು ಹೇಳಿಕೆ ನೀಡಿದರು.

  ಇಂಥ ಕತೆ ಮಾತ್ರ ಬೇಡ!

  ಇಂಥ ಕತೆ ಮಾತ್ರ ಬೇಡ!

  ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ ನಿರ್ದೇಶಕರಿಗೆ ನಮ್ಮ ಸುತ್ತ ಮುತ್ತ ನಡೆಯೋದನ್ನು ನೋಡ್ತಾ ಇರಿ, ಬೇರೆ ಎಲ್ಲಿಂದಾನೋ ಏನನ್ನೋ ತಂದು ಮಾಡ್ತೀನಿ ಅನ್ನೋದೆಲ್ಲ ಬೇಡ, ನಮ್ಮ ಸುತ್ತಮುತ್ತ ಏನು ಸಮಸ್ಯೆ ಇದೆಯೋ ಅದನ್ನು ತೋರಿಸುವಂತ ಕತೆ ತನ್ನಿ ಮಾಡೋಣ ಅಂತ ಹೇಳ್ತಾ ಇರ್ತೀನಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.

  ಹರಿಕೃಷ್ಣಗೆ ಎಂಥ ಚಿತ್ರ ಮಾಡಬೇಕೆಂಬುದು ಗೊತ್ತಿದೆ

  ಹರಿಕೃಷ್ಣಗೆ ಎಂಥ ಚಿತ್ರ ಮಾಡಬೇಕೆಂಬುದು ಗೊತ್ತಿದೆ

  ಇದೇ ಸಮಯದಲ್ಲಿ ಹರಿಕೃಷ್ಣ ಕುರಿತು ವಿಶೇಷವಾಗಿ ಮಾತನಾಡಿದ ದರ್ಶನ್ ಕೇವಲ ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಸಹ ಹರಿಕೃಷ್ಣ ಪ್ರತಿಭಾವಂತ ಅವರಿಗೆ ಎಂಥ ಚಿತ್ರ ಮಾಡಬೇಕು ಎಂಬುದು ಸ್ಪಷ್ಟವಾಗಿ ತಿಳಿದಿದೆ, ಕ್ರಾಂತಿ ಚಿತ್ರ ಸರ್ಕಾರಿ ಶಾಲೆಯ ಕುರಿತಾಗಿ ಇರಲಿದೆ ಎಂದ ಕೂಡಲೇ ಈ ಚಿತ್ರ ಮಾಡೋಣ ಎಂದು ಒಪ್ಪಿಕೊಂಡಿದ್ದೆ ಎಂದು ದರ್ಶನ್ ತಿಳಿಸಿದರು.

  English summary
  Except me No one is there to listen and agree my film stories says Darshan. Read on
  Monday, December 12, 2022, 14:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X