Don't Miss!
- News
ಭಾರತ್ ಜೋಡೋ ಯಾತ್ರೆ: ಸಂಭ್ರಮಾಚರಣೆಯ ಉತ್ಸಾಹ ಕುಗ್ಗುವ ಸಾಧ್ಯತೆ
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: ಮೆಟ್ರೋ ರೈಲಿನಲ್ಲಿ ಅಭಿಷೇಕ್ ಅಂಬರೀಶ್ ಮೊದಲ ಪ್ರಯಾಣ: ಫೋಟೊ ವೈರಲ್!
ಸೂಪರ್‌ಸ್ಟಾರ್‌ಗಳಷ್ಟೇ ಅಲ್ಲ. ಅವರ ಮಕ್ಕಳು ಕೂಡ ಸಾರ್ವಜನಿಕವಾಗಿ ಓಡಾಡುವುದಿಲ್ಲ. ಎಲ್ಲಿಗೆ ಹೋಗುವ ಹಾಗಿದ್ದರೂ ಸ್ವಂತ ವಾಹನದಲ್ಲಿಯೇ ಪ್ರಯಾಣ ಮಾಡುತ್ತಾರೆ. ಆದರೆ, ಅವರಿಗೂ ರೈಲಿನಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ.
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಇದೇ ಮೊದಲ ಬಾರಿಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಅವರ ಮುಂದಿನ ಸಿನಿಮಾದ ನಿರ್ದೇಶಕರೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಆನಂದಿಸಿದ್ದಾರೆ.
ಹಾಗಂತ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಎಂಜಾಯ್ ಮಾಡುವುದಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡಿಲ್ಲ. ಈ ಪ್ರಯಾಣದ ಹಿಂದೆ ಎರಡು ಕಾರಣವಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಮೆಟ್ರೋದಲ್ಲಿ ಯಂಗ್ ರೆಬೆಲ್ ಸ್ಟಾರ್
ರೆಬಲ್ ಸ್ಟಾರ್ ಪುತ್ರ ಅಭಿಶೇಕ್ ರೇಷ್ಮೆ ಇನ್ಸ್‌ಟಿಟ್ಯೂಟ್‌ನಿಂದ ತಮ್ಮ ಮನೆಯ ಸಮೀಪ ಸಾರಕ್ಕಿವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಇವರೊಂದಿಗೆ ನಿರ್ದೇಶಕ ಮಹೇಶ್ ಕುಮಾರ್ ಜೊತೆಯಾಗಿದ್ದರು. ಈ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಂದ್ಹಾಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ಅಭಿಷೇಕ್ ಅಂಬರೀಶ್‌ಗೆ ಖುಷಿ ಕೊಟ್ಟಿದ್ದು, ಮುಂದೆನೂ ಅವಕಾಶ ಸಿಕ್ಕಾಗಲೆಲ್ಲ ಪ್ರಯಾಣ ಮಾಡಲು ನಿರ್ಧರಿಸಿದ್ದಾರಂತೆ.

ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ಏಕೆ?
ಅಭಿಷೇಕ್ ಅಂಬರೀಶ್ ದಿಢೀರನೇ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ಏಕೆ? ಅನ್ನೋ ಪ್ರಶ್ನೆ ಮಾಡುವುದು ಸಹಜ. ಅಭಿ ಸದ್ಯಕ್ಕೆ ದುನಿಯಾ ಸೂರಿ ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಶೂಟಿಂಗ್ ಮಾಡುತ್ತಿದ್ದರು. ಶೂಟಿಂಗ್ ಸ್ವಲ್ಪ ತಡವಾಗಿತ್ತು. ಹಾಗೇ ಇಂದು (ನವೆಂಬರ್ 27) ಅದಿತಿ ಪ್ರಭುದೇವ ಆರತಕ್ಷತೆ ಸಮಾರಂಭ ಇರುವುದರಿಂದ ಜೆಪಿ ನಗರದಲ್ಲಿರುವ ಮನೆಗೆ ಹೋಗಿ ಅಲ್ಲಿಂದ ತೆರಳಬೇಕಿತ್ತು. ಈ ಕಾರಣಕ್ಕೆ ಮೆಟ್ರೋ ರೈಲಿಯಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದ್ದರು.

8 ನಿಮಿಷದಲ್ಲಿ ಸಾರಕ್ಕಿ ತಲುಪಿದ ಅಭಿಷೇಕ್
ಸುಮಾರು 20 ದಿನಗಳಿಂದ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ರೇಷ್ಮೆ ಇನ್‌ಸ್ಟಿಟ್ಯೂಟ್ ಮಾರ್ಗವಾಗಿ ಸಾರಕ್ಕಿ ಸಮೀಪದಲ್ಲಿರುವ ತಮ್ಮ ಮನೆಗೆ ಅಭಿಷೇಕ್ ಪ್ರಯಾಣ ಮಾಡಿದ್ದರು. ಟ್ರಾಫಿಕ್ ಇರುವ ಸಂದರ್ಭದಲ್ಲಿ ಅವರಿಗೆ ಮನೆ ತಲುಪಲು ಸುಮಾರು 45 ನಿಮಿಷಗಳಿಗೂ ಅಧಿಕ ಸಮಯ ಹಿಡಿಯುತ್ತಿತ್ತಂತೆ. ಆದರೆ, ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದರಿಂದ ಕೇವಲ 8 ನಿಮಿಷಗಳಲ್ಲಿಯೇ ಸಾರಕ್ಕಿ ಮೆಟ್ರೋ ಸ್ಟೇಷನ್‌ಗೆ ಬಂದಿಳಿದಿದ್ದಾರೆ. ಈ ವೇಳೆ ಅಭಿಮಾನಿಗಳು ಅಭಿಷೇಕ್ ಜೊತೆ ಕೆಲ ಕಾಲ ರೆಬೆಲ್‌ಸ್ಟಾರ್ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಅಭಿ ಬಳಿ ಮೂರು ಬಿಗ್ ಪ್ರಾಜೆಕ್ಟ್
ರೆಬೆಲ್ ಸ್ಟಾರ್ ಅಂಬರೀಶ್ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ದುನಿಯಾ ಸೂರಿ ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ 'ಪೈಲ್ವಾನ್', 'ಗಜಕೇಸರಿ' ಖ್ಯಾತಿಯ ಕೃಷ್ಣ ನಿರ್ದೇಶಿಸಿ, ನಿರ್ಮಿಸುತ್ತಿರುವ 'ಕಾಳಿ' ಸೆಟ್ಟೇರಬೇಕಿದೆ. ಮತ್ತೊಂದು ಕಡೆ 'ಮದಗಜ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಕೈಯಲ್ಲಿದೆ.