»   » ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ

ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ

By: ಜೀವನರಸಿಕ
Subscribe to Filmibeat Kannada

ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಪುನೀತ್ ಅಭಿನಯದ ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ. ಪವರ್ಸ್ಟಾರ್ಗೆ ರೆಬೆಲ್ ಸ್ಟಾರ್ ಅಂಬರೀಶ್ ತಂದೆಯಾಗಿ ನಟಿಸ್ತಿರೋ ಮೊದಲ ಚಿತ್ರ ಇದು.

ಈ ಇಬ್ಬರ ಕಾಂಬಿನೇಷನ್ನನ್ನ ತೆರೆಯ ಮೇಲೆ ನೋಡಿ ಸವಿಯೋಕೆ ಚಿತ್ರಪ್ರೇಮಿಗಳು ಕಾದಿದ್ದಾರೆ. ಆದ್ರೆ ಆದ್ರೆ ಅದು ಅಭಿಮಾನಿಗಳ ಕನಸಿಗೆ ಸಿಗುವಷ್ಟು ಹತ್ತಿರದಲ್ಲಿಲ್ಲ. ಸದ್ಯ ಚಿತ್ರದ ಬಗ್ಗೆ ಈಗ ಮತ್ತೊಂದು ಎಕ್ಸ್ ಕ್ಲೂಸಿವ್ ಸುದ್ದಿ ಹೊರಬಿದ್ದಿದೆ.

ಈ ಚಿತ್ರದಲ್ಲಿ ಅಂಬಿ ಮಾತ್ರ ನಟಿಸ್ತಿದ್ದಾರೆ ಅಂತ ಸುದ್ದಿಯಾಗಿತ್ತು. ಈಗ ಅಂಬಿ ಜೊತೆ ಸುಮಲತಾ ನಟಿಸ್ತಿರೋ ಸುದ್ದಿ ಕೂಡ ಬಂದಿದೆ. ರೆಬೆಲ್ ಸ್ಟಾರ್ ಹುಟ್ಟುಹಬ್ಬದ ದಿನ ಈ ಸುದ್ದಿ ಹೊರಬಂದಿದ್ದು ರೆಬೆಲ್ಸ್ಟಾರ್ ಕುಟುಂಬದ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರಪ್ರೇಮಿಗಳಿಗೇ ಇದು ಸಂಭ್ರಮದ ವಿಷಯ. ದೊಡ್ಮನೆ ಹುಡುಗನ ಮತ್ತಷ್ಟು ನೀವರಿಯದ ವಿಷಯಗಳನ್ನ ಸ್ಲೈಡ್ನಲ್ಲಿ ನೋಡ್ತಾ ಹೋಗಿ.. [ಅಣ್ಣಾವ್ರ ಲುಕ್ ನಲ್ಲಿ 'ದೊಡ್ಮನೆ ಹುಡುಗ']

ಅಂಬಿ ಜೊತೆ ನಟಿಸೋ ಆಸೆ

ಪವರ್ಸ್ಟಾರ್ ಪುನೀತ್ಗೆ ಅಂಬಿ ಜೊತೆ ನಟಿಸಬೇಕು ಅನ್ನೋ ಆಸೆ ಇತ್ತಂತೆ. ರಾಜಕೀಯದ ಒತ್ತಡದ ನಡುವೆ ಪುನೀತ್ ಪ್ರೀತಿಯಿಂದ ಕೇಳಿಕೊಂಡಿದ್ದಕ್ಕೆ ಆಗೋಲ್ಲ ಅನ್ನಲಾಗದೆ ನಟಿಸ್ತಿದ್ದಾರೆ ರೆಬೆಲ್ಸ್ಟಾರ್.

ದಿಗ್ಗಜ ಕಲಾವಿದರ ಚಿತ್ರ

ಇಲ್ಲಿ ರೆಬೆಲ್ಸ್ಟಾರ್ ಅಂಬಿ ಮತ್ತು ಪತ್ನಿ ಸುಮಲತಾ ಮಾತ್ರವಲ್ಲ ಸಾಹಸಸಿಂಹ ವಿಷ್ಣು ಪತ್ನಿ ಪಂಚಭಾಷಾ ನಟಿ ಭಾರತಿ ವಿಷ್ಣುವರ್ಧನ್ ಕೂಡ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಲಿದ್ದಾರೆ.

ಸುದೀರ್ಘ ಶೂಟಿಂಗ್ನ ಚಿತ್ರ

ಸ್ಯಾಂಡಲ್ವುಡ್ನ ಮಟ್ಟಿಗೆ 100 ದಿನ ಶೂಟಿಂಗ್ ಮಾಡಿದ್ರೆ ಹೆಚ್ಚು. ಆದ್ರೆ ಇದು 120ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಆಗಲಿರೋ ದುನಿಯಾ ಸೂರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ.

ರಾಧಿಕಾ ಪಂಡಿತ್ ಪುನೀತ್ಗೆ ಜೋಡಿ

ಸ್ಯಾಂಡಲ್ವುಡ್ನ ಯಶಸ್ವೀ ನಾಯಕಿ ರಾಧಿಕಾ ಪಂಡಿತ್ ಎರಡನೇ ಬಾರಿ ಪವರ್ಸ್ಟಾರ್ಗೆ ಜೋಡಿಯಾಗ್ತಿದ್ದಾರೆ. ಈ ಹಿಂದೆ ಹುಡುಗರು ಚಿತ್ರದ ಮೂಲಕ ಸೂಪರ್ ಹಿಟ್ ಆಗಿದ್ದ ಪುನೀತ್ ರಾಧಿಕಾ ಜೋಡಿ ದೊಡ್ಮನೆ ಮೂಲಕ ಮತ್ತೆ ಒಂದಾಗಿ ತೆರೆಮೇಲೆ ಕಾಣಿಸಿಕೊಳ್ತಿದೆ.

ಈ ವರ್ಷವೇ ಬಿಡುಗಡೆಗೆ ಪುನೀತ್ ಪಣ

ಈ ವರ್ಷವೇ ಚಿತ್ರವನ್ನ ತೆರೆಗೆ ತರ್ಬೇಕು ಅಂತ ಪುನೀತ್ ಪಣ ತೊಟ್ಟಿದ್ದಾರಂತೆ. ಹಾಗಾಗಿಯೇ ಚಿತ್ರೀಕರಣ ಭರದಿಂದ ಸಾಗ್ತಿದೆ. ವರ್ಷಕ್ಕೆ ಕನಿಷ್ಠ ಎರಡು ಸಿನಿಮಾವನ್ನಾದ್ರೂ ತೆರೆಗೆ ತರೋ ಯೋಜನೆ ಹಾಕಿದ್ದಾರೆ ಪವರ್ಸ್ಟಾರ್.

ಬೆಂಗಳೂರು ಮಳೆ ಮೋಡದ ಅಡಚಣೆ

ನಿರ್ದೇಶಕ ಸೂರಿಯವರ ಪ್ರಕಾರ ಶೂಟಿಂಗ್ಗೆ ಬೆಂಗಳೂರಲ್ಲಿ ಆಗಾಗ ಸುರಿಯೋ ಮಳೆ ಅಡ್ಡಿಪಡಿಸ್ತಿದೆಯಂತೆ. ಇದರ ನಡುವೆ ದಿಗ್ಗಜ ಕಲಾವಿದರ ಡೇಟ್ಸ್ಗಳನ್ನ ಹೊಂದಿಸಿ ಶೂಟ್ ಮಾಡೋದು ಚಾಲೆಂಜಿಂಗ್ ಅಂತೆ.

ಯಾವಾಗ ತೆರೆಗೆ ಬರಲಿದೆ?

ದೊಡ್ಮನೆ ಹುಡುಗ ಯಾವಾಗ ತೆರೆಗೆ ಬರುತ್ತೆ ಅನ್ನೋದು ಇನ್ನೂ ಪಕ್ಕಾ ಆಗದಿದ್ರೂ ಈ ವರ್ಷದಲ್ಲೇ ರಿಲೀಸ್ ಮಾಡೋದಂತೂ ಪಕ್ಕಾ ಅಂತಿದೆ ದುನಿಯಾ ಸೂರಿ ಅಂಡ್ ಟೀಂ..

English summary
Exclusive news : It is learnt that Sumalatha is also acting in Dodmane Huduga where Ambarish is portraying the role of Puneeth Rajkumar's father. Duniya Soori is the director. Radhika Pandit playing the lead female role. The movie will be released before the end of this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada