»   » ವಿನಯ್ ಬರ್ಥ್ ಡೇ ಸ್ಪೆಷಲ್, ಆರ್ ದಿ ಕಿಂಗ್ ಟ್ರೈಲರ್

ವಿನಯ್ ಬರ್ಥ್ ಡೇ ಸ್ಪೆಷಲ್, ಆರ್ ದಿ ಕಿಂಗ್ ಟ್ರೈಲರ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

3ಜಿ ಸ್ಟಾರ್ ವಿನಯ್ ರಾಜ್ ಕುಮಾರ್ ಅವರ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾ. ರಾಜ್ ಕುಟುಂಬ ಮುಳುಗಿದೆ. ಇದೇ ಶುಭ ಸಂದರ್ಭದಲ್ಲಿ ಶಿವರಾಜ್, ರಾಘವೇಂದ್ರ ಹಾಗೂ ವಿನಯ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನೇಪಾಳ ಭೂಕಂಪ ಪೀಡಿತರಿಗೆ ನೆರವಾಗಲು ಹಣ ಸಹಾಯ ಮಾಡಿದ್ದನ್ನು ಫಿಲ್ಮಿಬೀಟ್ ನಲ್ಲಿ ಓದಿರುತ್ತೀರಿ.

ವಿನಯ್ ರಾಜ್ ಕುಮಾರ್ ಅವರ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗಾಗಿ ಆರ್ ದಿ ಕಿಂಗ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಅಣ್ಣಾವ್ರ ಹುಟ್ಟುಹಬ್ಬದ ದಿನ (ಏ.24) ರಂದು ಸೆಟ್ಟೇರಿದ 'ಆರ್ ದಿ ಕಿಂಗ್' ಚಿತ್ರದ ಟೈಟಲ್ ಬಿಡುಗಡೆಯನ್ನೇ ಅದ್ದೂರಿಯಾಗಿ ಮಾಡಲಾಯಿತು. ಈಗ ವಿನಯ್ ಹುಟ್ಟುಹಬ್ಬಕ್ಕೆ ಟ್ರೈಲರ್ ನೀಡಲಾಗಿದೆ.

R The King kannada movie trailer - Vinay Rajkumar

ನಟ-ನಿರ್ದೇಶಕ ಜೋಗಿ ಪ್ರೇಮ್ ಅವರು ಶಿವಣ್ಣನ ಜೊತೆ ಜೋಗಿ, ಜೋಗಯ್ಯ, ಅಪ್ಪು ಜೊತೆ ರಾಜ್ ದಿ ಶೋಮ್ಯಾನ್ ಮಾಡಿದ ನಂತರ ವಿನಯ್ ಗಾಗಿ 'ಆರ್ ದಿ ಕಿಂಗ್' ಚಿತ್ರ ನಿರ್ದೇಶಿಸುತ್ತಿದ್ದಾರೆ. [ವಿನಯ್ ರಾಜ್ ಹೊಸ ಚಿತ್ರ 'R The King' ಶುರು]

ಚಿತ್ರದ ಟೀಸರ್ ನಲ್ಲಿ ವಿಶೇಷ ಗ್ರಾಫಿಕ್ಸ್ ಇದ್ದು, ಇದಕ್ಕಾಗಿ ಮುಂಬೈನಲ್ಲಿ ಗ್ರಾಫಿಕ್ಸ್ ವರ್ಕ್ ಮಾಡಿಸಲಾಗಿದೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಪಾರ್ವತಮ್ಮ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು "ವಜ್ರೇಶ್ವರಿ ಹಾಸ್ಪಿಟಾಲಿಟೀಸ್" ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.

R The King kannada movie trailer - Vinay Rajkumar

ತಮ್ಮ ಚೊಚ್ಚಲ 'ಸಿದ್ದಾರ್ಥ' ಚಿತ್ರದ ಮೂಲಕವೇ ಬಹಳಷ್ಟು ನಿರೀಕ್ಷೆ ಮೂಡಿಸಿ ವಿನಯ್, ಎರಡನೇ ಚಿತ್ರ R The King ಸಹ ಹೊಸ ಮೈಲಿಗಲ್ಲು ಸಾಧಿಸುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ. ಇನ್ನೇಕೆ ತಡ ಎರಡು ಕೈಯಲ್ಲಿ ಕತ್ತಿ ಹಿಡಿದ ವಿನಯ್ ನೋಡಿ ಆನಂದಿಸಿ...
English summary
Exclusive: After the massive success of his debut movie Siddhartha, Vinay Rajkumar is all set to rock in his second movie. The 'R The King' movie launched on Dr Rajkumar's 87th birthday (April 24). The trailer is out on Vinay Rajkumar's birthday today(May.7)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada