twitter
    For Quick Alerts
    ALLOW NOTIFICATIONS  
    For Daily Alerts

    'James' Fact Check: 'ಜೇಮ್ಸ್' ಸಿನಿಮಾ ನೋಡಲು ಶಾಲಾ-ಕಾಲೇಜಿಗೆ ರಜೆ ಘೋಷಿಸಿದರೆ ಪ್ರಧಾನಿ ಮೋದಿ?

    |

    ಜೇಮ್ಸ್ ಸಿನಿಮಾ ರಿಲೀಸ್ ಆಗಲು ಇನ್ನು ಒಂದೇ ದಿನ ಬಾಕಿ ಇದೆ. ಜೇಮ್ಸ್ ಕ್ರೇಜ್ ಬಗ್ಗೆ ಹೇಳಲು ಪದಗಳೆ ಇಲ್ಲ. ಯಾಕಂದ್ರೆ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ದೇವರ ಉತ್ಸವ ಮಾಡುವಂತೆ ಆಚರಿಸಲು ಸಜ್ಜಾಗಿದ್ದಾರೆ.

    Recommended Video

    James Teaser Record | ತಮಿಳು, ತೆಲುಗು, ಮಲೆಯಾಳಂ, ಹಿಂದಿ ಯಲ್ಲೂ ಮಿಲಿಯನ್ ಗಟ್ಟಲೆ ವಿವ್ಸ್ ಪಡೆದ ಜೇಮ್ಸ್

    ಜೇಮ್ಸ್ ಸಿನಿಮಾ ಮೂಲಕ ದೇವರನ್ನು ಕಣ್ತುಂಬಿಕೊಳ್ಳುವ ಕಾತುರದಲ್ಲಿದ್ದಾರೆ. ಹೀಗಾಗಿ ಈಗ ಎಲ್ಲಿ ನೋಡಿದರೂ ಜೇಮ್ಸ್ ಸಿನಿಮಾದೇ ಸದ್ದು-ಸುದ್ದಿ. ಥಿಯೇಟರ್‌ಗಳಲ್ಲಿ ಈಗಾಗಲೇ ಅಪ್ಪು ಕಟೌಟ್‌ಗಳು, ದೊಡ್ಮನೆ ಕುಟುಂಬದ ಕಟೌಟ್‌ಗಳು ರಾರಾಜಿಸುತ್ತಿದೆ.

    Puneeth Rajkumar Birthday : 5 ದಿನ ಅಭಿಮಾನಿಗಳಿಂದ ಪವರ್‌ಸ್ಟಾರ್ ಹುಟ್ಟುಹಬ್ಬ ಆಚರಣೆ: ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್Puneeth Rajkumar Birthday : 5 ದಿನ ಅಭಿಮಾನಿಗಳಿಂದ ಪವರ್‌ಸ್ಟಾರ್ ಹುಟ್ಟುಹಬ್ಬ ಆಚರಣೆ: ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

    ಜೇಮ್ಸ್ ಅನ್ನು ತೆರೆಮೇಲೆ ಕಣ್ತುಂಬಿಕೊಳ್ಳಲ್ಲು ಅದೆಷ್ಟೋ ಅಭಿಮಾನಿ ಬಳಗ ನಿದ್ದೆ ಊಟ ಬಿಟ್ಟು ಕಾದುಕುಳಿತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಬ್ರೇಕಿಂಗ್ ನ್ಯೂಸ್ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ಅದುವೇ ಪ್ರಧಾನಿ ಮೋದಿಯಿಂದ ಜೇಮ್ಸ್ ಚಿತ್ರ ವೀಕ್ಷಿಸಲು ಶಾಲ ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆಯೆಂಬ ಸುದ್ದಿ.

    Puneeth Rajkumar: ಅಪ್ಪುಗಾಗಿ 'ನಗು ನಗುತಾ ನೀ', 'ಪವರಿಸಂ' ಗೀತ ನಮನ! Puneeth Rajkumar: ಅಪ್ಪುಗಾಗಿ 'ನಗು ನಗುತಾ ನೀ', 'ಪವರಿಸಂ' ಗೀತ ನಮನ!

    ಇದೊಂದು ಪೋಸ್ಟ್‌ನಲ್ಲಿ ಇರೋದಾದ್ರು ಏನು?

    ಇದೊಂದು ಪೋಸ್ಟ್‌ನಲ್ಲಿ ಇರೋದಾದ್ರು ಏನು?

    ಜೇಮ್ಸ್ ಸಿನಿಮಾ ಪುನೀತ್ ಹುಟ್ಟು ಹಬ್ಬಕ್ಕೆ(ಮಾರ್ಚ್ 17 ) ತೆರೆಕಾಣುತ್ತಿದೆ. ಜೇಮ್ಸ್ ರಿಲೀಸ್‌ಗೆ ಒಂದು ದಿನವಷ್ಟೆ ಬಾಕಿ ಇದೆ. ಅಭಿಮಾನಿಗಳು ಕೂಡ ಜೇಮ್ಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇದರ ಬೆನ್ನಲ್ಲೇ ಎಲ್ಲ ಕಡೆಗಳಲ್ಲೂ ಇದೀಗ ಒಂದು ಫೊಟೋ ಸಾಕಷ್ಟು ವೈರಲ್ ಆಗುತ್ತಿದೆ. ಗೊತ್ತಿದ್ದೊ, ಗೊತ್ತಿಲ್ಲದೆಯೊ ಜನ ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಾಟ್ಸ್ಆಪ್, ಫೇಸ್ ಬುಕ್ ಅಂತ ಹಲವು ಕಡೆ ಈ ಒಂದು ಫೋಟೊ ಇವತ್ತಿನಿಂದ ಶೇರ್ ಆಗಲು ಆರಂಭಿಸಿದೆ. ಅಷ್ಟಕ್ಕು ಆ ಫೋಟೊದಲ್ಲಿ ಏನಿದೆ? ಈ ಪೋಟೊವಿನ ಅಸಲಿಯತ್ತೇನು ಮುಂದೆ ಓದಿ.

    ಶೇರ್ ಆಗುತ್ತಿರುವ ಈ ಫೋಟೊದ ಅಸಲಿಯತ್ತೇನು?

    ಶೇರ್ ಆಗುತ್ತಿರುವ ಈ ಫೋಟೊದ ಅಸಲಿಯತ್ತೇನು?

    ಪ್ರಧಾನಿ ಮೋದಿಯವರು ಜೇಮ್ಸ್ ಸಿನಿಮಾ ವೀಕ್ಷಿಸಲು ದೇಶದಾದ್ಯಂತ ಶಾಲ-ಕಾಲೇಜು ಮಕ್ಕಳಿಗೆ ರಜೆ ಘೋಷಿಸಿದ್ದಾರಂತೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಮೋದಿಯವರು ರಜೆ ನೀಡಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಅಪ್ಪು ಫ್ಯಾನ್ಸ್ ಬೇಡಿಕೆ ಮೇರೆಗೆ ಮಾರ್ಚ್ 17 ಮತ್ತು 18 ರಂದು ರಜೆ ಘೋಷಿಸಲಾಗಿದೆ ಎಂದು ಇದರಲ್ಲಿ ನಮೋದಿಸಲಾಗಿದೆ. ಅಷ್ಟಕ್ಕು ಇದೊಂದು ಫೇಕ್ ಸುದ್ದಿಯಾಗಿದ್ದು, ಮೋದಿ ಸರ್ಕಾರದಿಂದ ಯಾವುದೇ ರಜೆ ಕೂಡ ಘೋಷಣೆ ಆಗಿಲ್ಲ. ಜನರ ದಿಕ್ಕು ತಪ್ಪಿಸಲು ಇಂತದ್ದೊಂದು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ ಅಷ್ಟೆ. ಕೆಲವೊಂದಷ್ಟು ಮಂದಿ ಇದು ನಿಜ ಸುದ್ದಿಯೆಂದು ನಂಬಿ ಮತ್ತಷ್ಟು ಶೇರ್ ಮಾಡಿಕೊಳ್ಳತ್ತಿದ್ದಾರೆ.

    ಪದೇ ಪದೇ ಇಂತ ಸುದ್ದಿಗಳು ಶೇರ್ ಆಗ್ತಿರೋದು ಹೇಗೆ?

    ಪದೇ ಪದೇ ಇಂತ ಸುದ್ದಿಗಳು ಶೇರ್ ಆಗ್ತಿರೋದು ಹೇಗೆ?

    ಕೆಲ ದಿನಗಳ ಹಿಂದೆ ಕೆಜಿಎಫ್ 2 ಸಿನಿಮಾ ರಿಲೀಸ್ ಗಾಗಿ ಪ್ರಧಾನಿ ಮೋದಿಯೇ ಉತ್ಸುಕರಾಗಿರುವಂತೆ ನಕಲಿ ಪತ್ರವನ್ನು ಕೆಜಿಎಫ್ ಅಭಿಮಾನಿಯೊಬ್ಬ ಬರೆದಿದ್ದ. ಮೋದಿ ಹೆಸರಲ್ಲಿ ನಕಲಿ ಪತ್ರ ಟ್ವೀಟ್ ಮಾಡಿ ಕೆಜಿಎಫ್ ನಿರ್ಮಾಣ ಸಂಸ್ಥೆಗೆ ತಲೆನೋವು ತಂದಿದ್ದ. ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಏನೇನು ಮಾಡಲು ಸಾಧ್ಯ ಎನ್ನುವಂತೆ ಇಲ್ಲ. ಪ್ರಧಾನಿ ಮೋದಿ ಹೆಸರಿನಲ್ಲಿ ನಕಲಿ ಪತ್ರ ಕ್ರಿಯೇಟ್ ಮಾಡಿದ್ದಷ್ಟೆ ಅಲ್ಲದೇ ಕೆಜಿಎಫ್ ರಿಲೀಸ್ ಗಾಗಿ ಪ್ರಧಾನಿ ಉತ್ಸುಕರಾಗಿದ್ದಾರೆ ಎಂಬ ಬಗ್ಗೆ ಈ ಪತ್ರದಲ್ಲಿ ಬರೆಯಲಾಗಿತ್ತು. ಆದರೆ ಇದೊಂದು ಸುಳ್ಳು ಸುದ್ದಿಯಾಗಿತ್ತು.

    ಥಿಯೇಟರ್‌ನಲ್ಲಿ ನಡೆಯಲಿದೆ ಜೇಮ್ಸ್ ಜಾತ್ರೆ

    ಥಿಯೇಟರ್‌ನಲ್ಲಿ ನಡೆಯಲಿದೆ ಜೇಮ್ಸ್ ಜಾತ್ರೆ

    ಮಾರ್ಚ್ 17 ಜೇಮ್ಸ್ ಸಿನಿಮಾ ತೆರೆಗೆ ಬರುತ್ತಿದೆ. ಫ್ಯಾನ್ಸ್ ಇಷ್ಟು ದಿನ ಕಾತುರರಾಗಿ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಇನ್ನು ಇವತ್ತಿನಿಂದಲೇ(ಮಾರ್ಚ್ 16)ಅಪ್ಪು ಬರ್ತ್‌ಡೇ ಸಿದ್ಧತೆಗಳು ನಡೆಯುತ್ತಿದ್ದು, ಪ್ರತೀ ವರ್ಷದಂತೆ ಮಧ್ಯರಾತ್ರಿ 12ಗಂಟೆಗೆ ಅಪ್ಪು ಫ್ಯಾನ್ಸ್ ಸೆಲೆಬ್ರೇಷನ್ ಮಾಡಲು ಮುಂದಾಗಿದ್ದಾರೆ. ಅಪ್ಪು ಸಮಾಧಿ ಬಳಿ ಅಭಿಮಾನಿಗಳು ಸೇರಲಿದ್ದು, ರಾಘವೇಂದ್ರ ರಾಜ್‌ಕುಮಾರ್, ಯುವರಾಜ್‌ಕುಮಾರ್ ಸೇರಿದಂತೆ ರಾಜ್ ಕುಟುಂಬದ ಹಲವರು ಫ್ಯಾನ್ಸ್‌ ಸೆಲೆಬ್ರೇಷನ್‌ನಲ್ಲಿ ಭಾಗಿ ಆಗಲಿದ್ದಾರೆ.

    English summary
    News spreading on social media that PM Modi diclared holiday for schools to watch James movie. Here is the fact about news.
    Wednesday, March 16, 2022, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X