For Quick Alerts
  ALLOW NOTIFICATIONS  
  For Daily Alerts

  ನಟಿ ಸುಮಲತಾ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ

  |

  ಸ್ಟಾರ್ ಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಖಾತೆ ತೆರೆಯುವ ಕಿಡಿಗೇಡಿಗಳ ಸಂಖ್ಯೆ ಕಮ್ಮಿ ಏನಿಲ್ಲ. ಕನ್ನಡದ ತಾರೆಯರೂ ಸೇರಿದಂತೆ ಹಲವರ ಹೆಸರಿನಲ್ಲಿ ಫೇಕ್ ಅಕೌಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಬೇಕಾದಷ್ಟಿವೆ. ಅದರಲ್ಲಿ ಸುಮಲತಾ ಅಂಬರೀಶ್ ರವರದ್ದೂ ಒಂದು.

  ತಮ್ಮ ಹೆಸರಿನಲ್ಲಿ ಯಾರೋ ಫೇಕ್ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿರುವುದು ಸುಮಲತಾ ಅಂಬರೀಶ್ ಗಮನಕ್ಕೆ ಬಂದಿದೆ. ಹೀಗಾಗಿ, ಆ ನಕಲಿ ಅಕೌಂಟ್ ನ ಫಾಲೋ ಮಾಡದಂತೆ ಜನರಿಗೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ.

  ಅಂಬಿ ಇಲ್ಲದ ವಿವಾಹ ವಾರ್ಷಿಕೋತ್ಸವ : ಚೂರಾಗಿದೆ ಸುಮಲತಾ ಹೃದಯ

  ''ಈಗಷ್ಟೇ ನನಗೆ ಗೊತ್ತಾಯಿತು.. ಫೇಸ್ ಬುಕ್ ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆಯೊಂದಿದೆ. ಹೀಗಾಗಿ, ಜನರ ಗಮನಕ್ಕೆ ತರುತ್ತಿರುವೆ. ಈ ಅಕೌಂಟ್ ನಿಂದ ಬರುವ ರಿಕ್ವೆಸ್ಟ್ ಗಳನ್ನು ಸ್ವೀಕರಿಸಬೇಡಿ. ಇದು ನನ್ನ ಏಕೈಕ ಖಾತೆ'' ಎಂದು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ.

  ಅಪ್ಪಿ-ತಪ್ಪಿ ಸುಮಲತಾ ಅಂಬರೀಶ್ ರವರ ಹೆಸರಿನಲ್ಲಿ ಇರುವ ನಕಲಿ ಖಾತೆಯನ್ನು ನೀವು ಫಾಲೋ ಮಾಡುತ್ತಿದ್ದರೆ, ಈ ಕೂಡಲೆ ಅನ್ ಫಾಲೋ ಮಾಡಿ, ರಿಪೋರ್ಟ್ ಮಾಡಿ...

  English summary
  Fake Facebook account in the name of Kannada Actress Sumalatha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X