twitter
    For Quick Alerts
    ALLOW NOTIFICATIONS  
    For Daily Alerts

    Fact Check: 'ಜೇಮ್ಸ್' ಚಿತ್ರ ನೋಡಲು 2 ದಿನ ರಜೆ ಘೋಷಿಸಿದ ಕಾಲೇಜು ಆಡಳಿತ ಮಂಡಳಿ?

    |

    ಇಂದು 'ಜೇಮ್ಸ್' ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬನ್ನು ಅವರಿಲ್ಲದೇ ಆಚರಿಸುತ್ತಿರುವ ದುಃಖದ ಜೊತೆಗೆ ಅಪ್ಪು ಅವರ ನಟನೆಯ ಕೊನೆಯ ಚಿತ್ರ 'ಜೇಮ್ಸ್' ವಿಶ್ವಾದ್ಯಂತ ರಿಲೀಸ್ ಆಗಿದೆ.

    'ಜೇಮ್ಸ್' ಚಿತ್ರ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. 'ಜೇಮ್ಸ್' ಚಿತ್ರ ನೋಡಿದ ಅಭಿಮಾನಿಗಳು ಖುಷಿ ಜೊತೆಗೆ ಕಣ್ಣೀರನ್ನೂ ಸುರಿಸಿದ್ದಾರೆ. 'ಜೇಮ್ಸ್' ಸಿನಿಮಾ ಸಾಕಷ್ಟು ವಿಚಾರಗಳಿಗೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

    Puneeth Rajkumar: ಅಪ್ಪು ಇಲ್ಲ ಅನ್ನೋದು ಗೊತ್ತಿಲ್ಲದೇ ಅಪ್ಪು ಜೊತೆ ಸಿನಿಮಾ ನೋಡ್ತೀನಿ ಎಂದ ಹಿರಿಜೀವ!Puneeth Rajkumar: ಅಪ್ಪು ಇಲ್ಲ ಅನ್ನೋದು ಗೊತ್ತಿಲ್ಲದೇ ಅಪ್ಪು ಜೊತೆ ಸಿನಿಮಾ ನೋಡ್ತೀನಿ ಎಂದ ಹಿರಿಜೀವ!

    ಹೀಗಾಗಿ ಈ ಸಿನಿಮಾದ ಹೆಸರಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಇದರಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂದು ಅರಿಯದೇ ಜನ ಅದನ್ನು ನಂಬುತ್ತಿದ್ದಾರೆ. ಅದಕ್ಕೆ ಒಂದು ಬೆಸ್ಟ್ ಎಕ್ಸಾಂಪಲ್ ಈಗ ನಾವು ಹೇಳುತ್ತಿರುವ ಈ ಸುದ್ದಿ.

    ನಿಜಕ್ಕು ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿದ್ಯಾ

    ನಿಜಕ್ಕು ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿದ್ಯಾ

    'ಜೇಮ್ಸ್' ಸಿನಿಮಾ ನೋಡಲು ಮತ್ತು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಾಲೇಜು ಒಂದಕ್ಕೆ ಶಾಲಾ ಆಡಳಿತ ಮಂಡಳಿ ರಜೆ ಘೋಷಿಸಿದೆ ಅನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಟ್ವಿಟ್ಟರ್, ಫೇಸ್‌ಬುಕ್, ವಾಟ್ಸ್‌ಆಪ್‌ ಗಳಲ್ಲಿ ಜನ ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಿಜಕ್ಕು ಕಾಲೇಜು ಆಡಳಿತ ಮಂಡಳಿ ಕಾಲೇಜು ಮಕ್ಕಳಿಗೆ ರಜೆ ಘೋಷಿಸಿದ್ಯಾ ಅಂದ್ರೆ ಇಲ್ಲಾ ಎನ್ನುತ್ತಿವೆ ಮೂಲಗಳು.

    'ಪುನೀತ ಆನಂದಗೂಡು' ಅನಾವರಣ: ಮೆಚ್ಚಿನ ಅಪ್ಪುವನ್ನು ಸ್ಮರಿಸಿದ ಶಾಮನೂರು ಶಿವಶಂಕರಪ್ಪ'ಪುನೀತ ಆನಂದಗೂಡು' ಅನಾವರಣ: ಮೆಚ್ಚಿನ ಅಪ್ಪುವನ್ನು ಸ್ಮರಿಸಿದ ಶಾಮನೂರು ಶಿವಶಂಕರಪ್ಪ

    ಮಾರ್ಚ್ 17 ಮತ್ತು 18 ರಂದು ರಜೆ ನೀಡಲು ತೀರ್ಮಾನ

    ಈಗ ವೈರಲ್ ಆಗುತ್ತಿರುವ ಈ ಪೋಸ್ಟ್‌ನಲ್ಲಿ "ಕಾಲೇಜಿನ ಮೊದಲ ಮತ್ತು ಮೂರನೇ ಸೆಮಿಸ್ಟರ್ ವಿಧ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಮಾರ್ಚ್ 17 ಮತ್ತು 18 ರಂದು ರಜೆ ನೀಡಲು ತೀರ್ಮಾನಿಸಿಲಾಗಿದೆ. ಡಾ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ನಿಮಿತ್ತ ಮತ್ತು 'ಜೇಮ್ಸ್' ಸಿನಿಮಾದ ರಿಲೀಸ್ ಪ್ರಯುಕ್ತ ವಿಧ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿದೆ" ಎಂದು ಬರೆಯಲಾಗಿದೆ.

    ಪೋಸ್ಟ್ ಎಡಿಟ್ ಮಾಡಿ ಶೇರ್ ಮಾಡುತ್ತಿದ್ದಾರೆ

    ಪೋಸ್ಟ್ ಎಡಿಟ್ ಮಾಡಿ ಶೇರ್ ಮಾಡುತ್ತಿದ್ದಾರೆ

    ಅಷ್ಟಕ್ಕು ಈ ಸರ್ಕ್ಯೂಲೇಷನ್ ಅಸಲಿಯಲ್ಲ ನಕಲಿ ಎನ್ನುತ್ತಿವೆ ಮೂಲಗಳು. ಯಾರೋ ಕಿಡಿಗೇಡಿಗಳು ಇಂತಹ ಒಂದು ಪೋಸ್ಟ್ ಅನ್ನು ಎಡಿಟ್ ಮಾಡಿ ಶೇರ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದನ್ನು ಅರಿಯದ ಜನ ಡಾ|| ಅಂಬೇಡ್ಕರ್ ಇನ್ಸಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಹೆಸರಲ್ಲಿ ಕ್ರೀಯೆಟ್ ಆಗಿರುವ ಈ ಪೋಸ್ಟ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

    Puneeth Fans: ಶಿವಮೊಗ್ಗದಲ್ಲಿ ಅಪ್ಪು ಕಟೌಟ್‌ಗೆ ಸಾಷ್ಟಾಂಗ, ನೂರಾರು ಮಂದಿಯಿಂದ ರಕ್ತದಾನPuneeth Fans: ಶಿವಮೊಗ್ಗದಲ್ಲಿ ಅಪ್ಪು ಕಟೌಟ್‌ಗೆ ಸಾಷ್ಟಾಂಗ, ನೂರಾರು ಮಂದಿಯಿಂದ ರಕ್ತದಾನ

    ಈಗ ಮತ್ತೊಂದು ಲೆಟರ್ ವೈರಲ್

    ಈಗ ಮತ್ತೊಂದು ಲೆಟರ್ ವೈರಲ್

    ಇನ್ನು ಕೆಲ ದಿನಗಳ ಹಿಂದಷ್ಟೆ ಪ್ರಧಾನಿ ಮೋದಿಯವರು 'ಜೇಮ್ಸ್' ಸಿನಿಮಾ ವೀಕ್ಷಿಸಲು ದೇಶದಾದ್ಯಂತ ಶಾಲಾ-ಕಾಲೇಜು ಮಕ್ಕಳಿಗೆ ರಜೆ ಘೋಷಿಸಿದ್ದಾರಂತೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಮೋದಿಯವರು ರಜೆ ನೀಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಶೇರ್ ಮಾಡಲಾಗಿತ್ತು. ಅಪ್ಪು ಫ್ಯಾನ್ಸ್ ಬೇಡಿಕೆ ಮೇರೆಗೆ ಮಾರ್ಚ್ 17 ಮತ್ತು 18 ರಂದು ರಜೆ ಘೋಷಿಸಲಾಗಿದೆ ಎಂದು ಇದರಲ್ಲಿ ನಮೂದಿಸಲಾಗಿತ್ತು. ಜನರ ದಿಕ್ಕು ತಪ್ಪಿಸಲು ಇಂತದ್ದೊಂದು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.. ಕೆಲವೊಂದಷ್ಟು ಮಂದಿ ಇದು ನಿಜ ಸುದ್ದಿಯೆಂದು ನಂಬಿ ಮತ್ತಷ್ಟು ಶೇರ್ ಮಾಡಿಕೊಳ್ಳತ್ತಿದ್ದರು. ಇದೀಗ ಮತ್ತೆ ಅಂತದ್ದೇ ಫೇಕ್ ನ್ಯೂಸ್ ಒಂದು ಹರಿದಾಡುತ್ತಿದ್ದು, ಜನರು ಕಂನ್ಫ್ಯೂಸ್ ಆಗಿದ್ದಾರೆ.

    English summary
    College students get 2 days holiday for Puneeth Rajkumar birthday.here is fact cheak about this.
    Thursday, March 17, 2022, 20:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X