For Quick Alerts
  ALLOW NOTIFICATIONS  
  For Daily Alerts

  ಕ್ರೇಜಿ ಸ್ಟಾರ್ ರವಿಚಂದ್ರನ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್

  |

  ಕನಸುಗಾರ ವಿ. ರವಿಚಂದ್ರನ್ ಹೆಸರಲ್ಲಿ ಫೇಕ್ ಟ್ವಿಟ್ಟರ್ ಖಾತೆ ಸೃಷ್ಟಿಯಾಗಿದೆ. ರವಿಚಂದ್ರನ್ ಜನ್ಮದಿನದ ಹಿಂದಿನ ರಾತ್ರಿಯಷ್ಟೇ ಈ ಖಾತೆ ಉದ್ಭವವಾಗಿದೆ. ರವಿಚಂದ್ರನ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಾಕಿದ್ದ ಪೋಸ್ಟ್ ಅನ್ನು ಕಾಪಿ ಪೇಸ್ಟ್ ಮಾಡುವ ಮೂಲಕ ಟ್ವಿಟ್ಟರ್ ಖಾತೆ ಆರಂಭವಾಗಿದೆ.

  ಎರಡು ದಿನಗಳಿಂದ ಈ ಖಾತೆ ಸಕ್ರಿಯವಾಗಿದ್ದು, ರವಿಚಂದ್ರನ್ ಅವರ ಜನ್ಮದಿನಕ್ಕೆ ಚಿತ್ರರಂಗದ ಅನೇಕರು ಶುಭಾಶಯ ಹೇಳಿದ್ದರು. ಆ ಟ್ವೀಟ್‌ಗಳನ್ನೆಲ್ಲ ಹಂಚಿಕೊಂಡು ಅವರಿಗೆ ಧನ್ಯವಾದ ಹೇಳಲಾಗಿದೆ. ಮಕ್ಕಳ ಜತೆಗಿರುವ ಫೋಟೊಗಳನ್ನು ಶೇರ್ ಮಾಡಿರುವುದರಿಂದ ಅನೇಕರು ಇರು ರವಿಚಂದ್ರನ್ ಅವರ ನಿಜವಾದ ಖಾತೆ ಎಂದೇ ನಂಬಿದ್ದಾರೆ.

  ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್

  ರೀಟ್ವೀಟ್ ಮಾಡಿರುವ ಖಾತೆ

  ರೀಟ್ವೀಟ್ ಮಾಡಿರುವ ಖಾತೆ

  ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಗಣೇಶ್, ವಿ. ಹರಿಕೃಷ್ಣ, ನಿಖಿಲ್ ಕುಮಾರ್, ಸಂತೋಷ್ ಆನಂದ್ ರಾಮ್, ಖುಷ್ಬೂ ಸೇರಿದಂತೆ ಅನೇಕರು ರವಿಚಂದ್ರನ್ ಅವರಿಗೆ ಟ್ವಿಟ್ಟರ್‌ನಲ್ಲಿ ಶುಭ ಹಾರೈಸಿದ್ದರು. ಈ ಎಲ್ಲ ಪೋಸ್ಟ್‌ಗಳನ್ನು ಶೇರ್ ಮಾಡಿಕೊಂಡು ನಕಲಿ ಖಾತೆಯಿಂದ ಧನ್ಯವಾದ ಸಲ್ಲಿಸಲಾಗಿದೆ.

  ನಕಲಿ ಖಾತೆ ಸೃಷ್ಟಿ

  ನಕಲಿ ಖಾತೆ ಸೃಷ್ಟಿ

  ವೀರಾಸ್ವಾಮಿ ರವಿಚಂದ್ರನ್ ಹೆಸರಿನಲ್ಲಿ ಈ ಫೇಕ್ ಖಾತೆ ಸೃಷ್ಟಿಯಾಗಿದೆ. ಈ ಖಾತೆಯಿಂದ ರವಿಚಂದ್ರನ್ ಮಗ ಮನೋರಂಜನ್ ಅವರನ್ನು ಮಾತ್ರ ಫಾಲೋ ಮಾಡಲಾಗುತ್ತಿದೆ. ನಕಲಿ ಖಾತೆ ಹುಟ್ಟಿಕೊಂಡ ಬಳಿಕ ಅನೇಕರು ಇದು ನಿಜವಾದ ಖಾತೆ ಎಂದು ಭಾವಿಸಿದ್ದು, ಇದಕ್ಕೆ 1,200ಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ವಿ ರವಿಚಂದ್ರನ್- VRavichandran30 ಎಂಬ ಹೆಸರಿನಲ್ಲಿ 2014ರಿಂದಲೂ ಮತ್ತೊಂದು ಖಾತೆ 2017ರವರೆಗೆ ಸಕ್ರಿಯವಾಗಿತ್ತು.

  ರವಿಚಂದ್ರನ್ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

  ರವಿಚಂದ್ರನ್ ಜತೆ ಮಾತಾಡಿದೆ

  ರವಿಚಂದ್ರನ್ ಜತೆ ಮಾತಾಡಿದೆ

  ಟ್ವಿಟ್ಟರ್‌ನಲ್ಲಿ ರವಿಚಂದ್ರನ್ ಹೆಸರಲ್ಲಿ ಸೃಷ್ಟಿಯಾಗಿರುವ ಖಾತೆ ನಕಲಿ ಎಂಬುದನ್ನು ನಿರ್ದೇಶಕ ರಘುರಾಮ್ ಖಚಿತಪಡಿಸಿದ್ದಾರೆ. 'ಎಲ್ಲ ಕ್ರೇಜಿ ಸ್ಟಾರ್‌ ಅಭಿಮಾನಿಗಳಿಗೆ ನಮಸ್ತೆ. ಬಾಸ್ ಜತೆ ಈಗಷ್ಟೇ ಮಾತನಾಡಿದೆ ಅವರಿಂದ ಮತ್ತೆ ಖಾತರಿಪಡಿಸಿಕೊಂಡಿದ್ದೇನೆ' ಎಂದು ತಿಳಿಸಿದ್ದಾರೆ.

  ಇದು ನಕಲಿ ಖಾತೆ

  ಇದು ನಕಲಿ ಖಾತೆ

  ಇದು ನಕಲಿ ಖಾತೆ. ಇದು ರವಿ ಸರ್ ಅವರ ಖಾತೆ ಎಂದು ಕಲ್ಪಿಸಿಕೊಂಡು ದಯವಿಟ್ಟು ಫಾಲೋ ಮಾಡಲು ಹೋಗಬೇಡಿ ಎಂದು ರಘುರಾಮ್ ಮನವಿ ಮಾಡಿದ್ದಾರೆ. ನಟ ಜಗ್ಗೇಶ್, ರವಿಚಂದ್ರನ್ ಅವರಿಗೆ ಶುಭ ಹಾರೈಸಿದ್ದರು. ಅದನ್ನು ರವಿಚಂದ್ರನ್ ನಕಲಿ ಖಾತೆ ಶೇರ್ ಮಾಡಿ ಧನ್ಯವಾದ ಹೇಳಿತ್ತು. ಜಗ್ಗೇಶ್ ಕೂಡ ಅದು ನಕಲಿ ಖಾತೆ ಎಂದು ತಿಳಿಯದೆ ರೀಟ್ವೀಟ್ ಮಾಡಿದ್ದರು.

  ನೀವು ಎಂದೆಂದಿಗೂ ಸ್ಫೂರ್ತಿ: ಕ್ರೇಜಿ ಸ್ಟಾರ್‌ಗೆ ಕಿಚ್ಚ ಸುದೀಪ್ ಶುಭಾಶಯ

  English summary
  A fake account in twitter has been created in the name of Veeraswamy Ravichandran day before his birthday. Director Raghuram has confirmed that it is a fake account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X