ದರ್ಶನ್ ಹುಚ್ಚು ಅಭಿಮಾನಿ | Darshan's crazy fan | Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಪೌರಾಣಿಕ ಚಿತ್ರಕ್ಕಾಗಿ ಡಿ ಬಾಸ್ ಅಭಿಮಾನಿಗಳು ಈ ಕಾದು ಕುಂತಿದ್ದಾರೆ.
ಹೀಗಿರುವಾಗ, ಅಭಿಮಾನಿಯೊಬ್ಬ ತನ್ನ ಪ್ರತಿಭೆಯನ್ನ ಬಳಸಿ ವಿಶೇಷವಾದ ಅಭಿಮಾನವನ್ನ ಮರೆದಿದ್ದಾರೆ. ಹೌದು, ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರದ ಹೆಸರನ್ನ ಡ್ರಾಯಿಂಗ್ ಮೂಲಕ ಬಿತ್ತರಿಸಿ ಅದಕ್ಕೆ ಅದ್ಭುತವಾದ ಡಿಸೈನ್ ಮಾಡಿ ದಾಸನಿಗೆ ಅರ್ಪಿಸಿದ್ದಾರೆ.
ಮಂಗಳೂರಿನ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶರತ್ ಗೌಡ ಜೆ ಎಂಬುವರು ಕೈಚಳಕದಲ್ಲಿ ಈ ಚಿತ್ರ ಚಿತ್ತಾರಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಶರತ್ ಗೌಡ ಮೂಲತಃ ಮಂಡ್ಯದವರಾಗಿದ್ದು, ಸದ್ಯ, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿರುವ ಶರತ್ ಸುಮಾರು ಒಂದು ತಿಂಗಳು ಸಮಯ ತೆಗೆದುಕೊಂಡು, ಬಿಡುವಿನ ವೇಳೆಯಲ್ಲಿ ಈ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಇದಕ್ಕಾಗಿ ಒಟ್ಟು 18 ರಿಂದ 20 ಗಂಟೆಗಳ ಸಮಯ ಕೆಲಸ ಮಾಡಿದ್ದಾರಂತೆ.
ಇನ್ನು ಈ ಚಿತ್ರವನ್ನ ಬಿಡಿಸಲು ಮನಸ್ಸು ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಶರತ್ ''ಕುರುಕ್ಷೇತ್ರ ಸಿನಿಮಾದ ಟೈಟಲ್ ಪೋಸ್ಟರ್ ನೋಡಿದಾಗ ನನಗೆ ಅದೊಂದು ರೀತಿಯಲ್ಲಿ ಸಿಂಪಲ್ ಅನಿಸಿತು. ಇಷ್ಟು ದೊಡ್ಡ ಸಿನಿಮಾ ಇದು. ಇದಕ್ಕೆ ಇಷ್ಟು ಸಿಂಪಲ್ ಆದ ಟೈಟಲ್ ಡಿಸೈನ್ ಇದೆ ಎಂಬ ಭಾವನೆ ನನ್ನನ್ನು ಈ ಚಿತ್ರ ಬಿಡಿಸಲು ಪ್ರೇರೆಪಿಸಿತು'' ಎಂದು ಹರ್ಷ ವ್ಯಕ್ತಪಡಿಸುತ್ತಾರೆ
ನಾಗಣ್ಣ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಮುನಿರತ್ನ ನಿರ್ದೇಶನ ಮಾಡಿದ್ದಾರೆ. ದುರ್ಯೂಧನ ಪಾತ್ರದಲ್ಲಿ ದರ್ಶನ್ ಮಿಂಚುತ್ತಿದ್ದರೇ, ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.
ಇನ್ನುಳಿದಂತೆ ಹರಿಕೃಷ್ಣ ಸಂಗೀತ ನೀಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚನೆ ಮಾಡಿದ್ದಾರೆ. ಸದ್ಯ, ಆಡಿಯೋ ಬಿಡುಗಡೆಗ ತಯಾರಿ ನಡೆಸಿರುವ ಚಿತ್ರತಂಡ, ಚುನಾವಣೆ ನಂತರ ತೆರೆಗೆ ಬರಲಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.