For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಪಾಲಿಗೆ ಸತ್ತ ರಮ್ಯಾ: 'ಶ್ರದ್ಧಾಂಜಲಿ' ಅರ್ಪಿಸಿದ ಜನತೆ

  |
  Ambareesh : ರಮ್ಯಾಗೆ ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ ಮಂಡ್ಯದ ಜನತೆ | Oneindia Kannada

  ವಿವಾದಗಳಿಗೂ ರಮ್ಯಾಗೂ ಒಂಥರಾ ಬಿಡಿಸಲಾರದ ನಂಟು. ಚಿತ್ರರಂಗದಲ್ಲಿ ವಿವಾದಗಳಿಂದ ಸದ್ದು ಸುದ್ದಿ ಮಾಡಿದ ರಮ್ಯಾ ಮೇಡಂ ರಾಜಕೀಯಕ್ಕೆ ಧುಮುಕಿದ ಮೇಲೂ ವಿವಾದಗಳ ಕೇಂದ್ರಬಿಂದು ಆಗಿದ್ದಾರೆ.

  ಒಮ್ಮೆ ಮಂಡ್ಯದಿಂದ ಸಂಸದೆ ಆಗಿ ಆಯ್ಕೆ ಆಗಿದ್ದ ರಮ್ಯಾ, ಇನ್ನೊಮ್ಮೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಬಳಿಕ ರಮ್ಯಾ ಮಂಡ್ಯದ ಕಡೆ ಮುಖ ಮಾಡಿದ್ದೇ ಬೆರಳೆಣಿಕೆಯಷ್ಟು ಬಾರಿ.

  ವಿಧಾನಸಭೆ ಚುನಾವಣೆ ನಡೆದಾಗಲೂ, ಮತ ಚಲಾಯಿಸಲು ರಮ್ಯಾ ಬರಲಿಲ್ಲ. ರಮ್ಯಾ ಎಲ್ಲಿದ್ದಾರೆ ಅನ್ನೋದು ಕೂಡ ಅನೇಕರಿಗೆ ಗೊತ್ತಿಲ್ಲ.

  ಈ ಎಲ್ಲದರ ನಡುವೆ ಅಂಬರೀಶ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ರಮ್ಯಾ ಹಾಜರ್ ಆಗಲಿಲ್ಲ. ಮಂಡ್ಯದ ಗಂಡಿಗೆ ಅಂತಿಮ ನಮನ ಸಲ್ಲಿಸಲು ಬಾರದ ರಮ್ಯಾ ವಿರುದ್ಧ ಜನತೆ ಆಕ್ರೋಶಗೊಂಡಿದ್ದಾರೆ. ಮಂಡ್ಯ ಮತ್ತು ಅಂಬರೀಶ್ ಬಗ್ಗೆ ಕೃತಜ್ಞತೆ ಇಲ್ಲದ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಮುಂದೆ ಓದಿರಿ...

  ಮಂಡ್ಯ ಪಾಲಿಗೆ ಸತ್ತ ರಮ್ಯಾ

  ಮಂಡ್ಯ ಪಾಲಿಗೆ ಸತ್ತ ರಮ್ಯಾ

  ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸದ ರಮ್ಯಾ, ಮಂಡ್ಯ ಪಾಲಿಗೆ ಸತ್ತು ಹೋಗಿದ್ದಾರೆ. ಹೀಗಾಗಿ, ಅವರಿಗೆ ಟ್ವಿಟ್ಟರ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.

  ಅಂಬಿ ದರ್ಶನಕ್ಕೆ ರಮ್ಯಾ ಬರ್ಲಿಲ್ಲ: ಕಾರಣ ವಿಚಿತ್ರ ಕಾಯಿಲೆ.! ಏನದು.?

  ಮತ್ತೊಮ್ಮೆ ಹುಟ್ಟಿ ಬರಬೇಡಿ

  ಮತ್ತೊಮ್ಮೆ ಹುಟ್ಟಿ ಬರಬೇಡಿ

  ಮಂಡ್ಯದಿಂದ ಸಂಸದೆ ಆಗಿ ರಮ್ಯಾ ಆಯ್ಕೆ ಆಗುವಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಾತ್ರ ಪ್ರಮುಖವಾಗಿತ್ತು. ಹೀಗಿದ್ದರೂ, ಅಂಬಿಗೆ ಅಂತಿಮ ನಮನ ಸಲ್ಲಿಸದ ರಮ್ಯಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

  ಅಂತಿಮ ದರ್ಶನದ ವೇಳೆ ಕಾಡುತ್ತಿರುವ ಸೆಲ್ಫಿ ಗೀಳು, ರಮ್ಯಾ ಮೇಡಂ ಗೈರು.!

  ಮಂಡ್ಯಗೆ ಕಾಲಿಡಬೇಡಿ

  ಮಂಡ್ಯಗೆ ಕಾಲಿಡಬೇಡಿ

  ''ಇನ್ಮೇಲೆ ಮಂಡ್ಯಗೆ ಕಾಲಿಡಬೇಡಿ. ಇಂದು ಅಂಬಿ ಅಣ್ಣನನ್ನು ಮರೆತ ನೀವು ಕರ್ನಾಟಕವನ್ನು ಮರೆತಂತೆ'' ಎಂದೆಲ್ಲಾ ಜನತೆ ರಮ್ಯಾಗೆ ಛೀಮಾರಿ ಹಾಕುತ್ತಿದ್ದಾರೆ.

  ಅಂಬಿಯನ್ನ ಮರೆತ ರಮ್ಯಾಗೆ ತಕ್ಕ ಉತ್ತರ ನೀಡಿದ ಜಗ್ಗೇಶ್!

  ವಿಚಿತ್ರ ಕಾಯಿಲೆ ಇದೆ

  ವಿಚಿತ್ರ ಕಾಯಿಲೆ ಇದೆ

  ನಟಿ ಹಾಗೂ ಮಾಜಿ ಸಂಸದೆ ರಮ್ಯಾ Osteoclastoma ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಮ್ಯಾ ಕಾಲಿನಲ್ಲಿ ಸೆಲ್ ಟ್ಯೂಮರ್ ಉಂಟಾಗಿದ್ದು, ಹತ್ತು ಲಕ್ಷ ಮಂದಿ ಪೈಕಿ ಒಬ್ಬರಿಗೆ ಕಾಣಿಸಿಕೊಳ್ಳುವ ವಿಚಿತ್ರ ರೋಗ ಲಕ್ಷಣ ಇದು. ಸದ್ಯ ಈ ಕಾಯಿಲೆಗೆ ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಓಡಾಡಲು ಸಾಧ್ಯ ಆಗುತ್ತಿಲ್ಲ. ಹೀಗಾಗಿ, ಅಂಬರೀಶ್ ಅಂತಿಮ ದರ್ಶನ ಪಡೆಯಲು ರಮ್ಯಾ ಆಗಮಿಸಲಿಲ್ಲ.

  English summary
  Fans are annoyed with Kannada Actress, Congress Politician Ramya for missing Ambarish's last rites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X