For Quick Alerts
  ALLOW NOTIFICATIONS  
  For Daily Alerts

  ಲೋಕಸಭೆ ಚುನಾವಣೆಯಲ್ಲಿ ನಟಿ ರಮ್ಯಾ ವೋಟ್ ಹಾಕಿದ್ದಾರಂತೆ ಹೌದಾ.?

  |
  ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಿದ್ರಂತೆ ಹೌದಾ? | FILMIBEAT KANNADA

  ಮಂಡ್ಯದ ಮಾಜಿ ಸಂಸದೆ, ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ಒಂದು ಕಾಲದ ಖ್ಯಾತ ಚಿತ್ರನಟಿ ರಮ್ಯಾ, ರಾಜ್ಯ ರಾಜಕಾರಣದಿಂದ ದೂರವಾಗಿ ತುಂಬಾ ವರ್ಷ ಆಗಿದೆ. ಕಳೆದ ಬಾರಿ ಮಂಡ್ಯ ಲೋಕಸಭೆ ಅಖಾಡದಲ್ಲಿ ಸೋತಿದ್ದ ರಮ್ಯಾ ಆ ನಂತರ ಮಂಡ್ಯ ಕಡೆ ಅಲ್ಲಾ, ಕರ್ನಾಟಕದಲ್ಲೇ ಕಾಣಿಸಿಕೊಂಡಿದ್ದು ಅಪರೂಪ.

  ಇದೆಲ್ಲ ಬಿಡಿ. ಮೊನ್ನೆಯಷ್ಟೇ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ನಟಿ ರಮ್ಯಾ ಮತದಾನ ಮಾಡಿಲ್ಲ ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಮತದಾನ ಮಾಡದೇ ದೇಶದ ಬಗ್ಗೆ ಮಾತನಾಡುವ ರಮ್ಯಾ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾಜಿ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ 'ಕೊನೆಗೂ ಮತದಾನಕ್ಕೆ ಬರದೆ ವೋಟಿಂಗ್ ಗೆ ಗೈರಾಗಿ ಹ್ಯಾಟ್ರಿಕ್ ಸಾಧಿಸಿದ ನಟಿ ರಮ್ಯ!! ಇವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪ್ರಮುಖರು!' ಎಂದು ಟೀಕಿಸಿದ್ದರು.

  ಛೆ, ಛೆ, ಈ ಬಾರಿನೂ ರಮ್ಯಾ ಮತಹಾಕಿಲ್ವಂತೆ, ಸರೀನಾ ನೀವೇ ಹೇಳಿ!?

  ಆದ್ರೀಗ, ರಮ್ಯಾ ಮತದಾನ ಮಾಡಿಲ್ಲ ಎಂಬುದು ಸುಳ್ಳು, ಅವರು ವೋಟ್ ಮಾಡಿದ್ದಾರೆ ಎಂಬ ವಿಷ್ಯ ಪ್ರಸ್ತಾಪವಾಗುತ್ತಿದೆ. ಈ ಕುರಿತು ರಮ್ಯಾ ಅವರ ಕೆಲವು ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ರಮ್ಯಾ ಮತದಾನ ಮಾಡಿದ್ರೆ, ಎಲ್ಲಿ ತಮ್ಮ ಹಕ್ಕು ಚಲಾಯಿಸಿದ್ರು? ಮುಂದೆ ಓದಿ....

  ರಮ್ಯಾ ವೋಟ್ ಮಾಡಿದ್ದಾರಂತೆ.!

  ರಮ್ಯಾ ವೋಟ್ ಮಾಡಿದ್ದಾರಂತೆ.!

  ನಟಿ ರಮ್ಯಾ ಅವರು ಮಂಡ್ಯದಲ್ಲಿ ಮತದಾನ ಹಕ್ಕು ಹೊಂದಿದ್ದಾರೆ. ಆದ್ರೆ, ಏಪ್ರಿಲ್ 18 ರಂದು ನಡೆದ ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ನಟಿ ರಮ್ಯಾ ವೋಟ್ ಮಾಡಿಲ್ಲ. ರಮ್ಯಾ ಅವರ ಈ ನಡೆಯ ಬಗ್ಗೆ ಸಾರ್ವಜನಿಕರು ಖಂಡಿಸಿದ್ದಾರೆ. ಮಾಜಿ ಸಂಸದೆಯಾಗಿದ್ದುಕೊಂಡು ವೋಟ್ ಮಾಡಲು ಬಂದಿಲ್ಲ ಎಂದು ಟೀಕಿಸಿದ್ದಾರೆ. ಆದ್ರೆ, ರಮ್ಯಾ ಅವರ ಕೆಲವು ಅಭಿಮಾನಿಗಳು ರಮ್ಯಾ ವೋಟ್ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

  ಕನ್ನಡದ ಈ ಸ್ಟಾರ್ ಕಲಾವಿದರು ವೋಟ್ ಮಾಡಿಲ್ಲ

  ಬೇರೆ ಕ್ಷೇತ್ರದಲ್ಲಿ ವೋಟ್ ಮಾಡಿರಬಹುದು ಅಲ್ವಾ?

  ಬೇರೆ ಕ್ಷೇತ್ರದಲ್ಲಿ ವೋಟ್ ಮಾಡಿರಬಹುದು ಅಲ್ವಾ?

  ಮಂಡ್ಯದಲ್ಲಿ ಮತದಾನ ಹಕ್ಕು ಹೊಂದಿದ್ದ ರಮ್ಯಾ ಅವರು ಹಲವು ವರ್ಷದಿಂದ ಮಂಡ್ಯ ಕಡೆ ಹೋಗಲೇ ಇಲ್ಲ. ಮಂಡ್ಯದಲ್ಲಿ ಮನೆ ಕೂಡ ಖಾಲಿ ಮಾಡಿದ್ದರು. ಹೀಗಾಗಿ, ರಮ್ಯಾ ಅವರು ಮಂಡ್ಯದಿಂದ ಬೇರೆ ಕ್ಷೇತ್ರಕ್ಕೆ ಮತದಾನದ ಹಕ್ಕು ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ, ಅವರು ಮಂಡ್ಯದಲ್ಲಿ ವೋಟ್ ಮಾಡಿಲ್ಲ. ಬೇರೆ ಕ್ಷೇತ್ರದಲ್ಲಿ ವೋಟ್ ಮಾಡಿರಬಹುದು ಅಲ್ವಾ? ಎಂದು ರಮ್ಯಾ ಅವರ ಅಭಿಮಾನಿ ಪ್ರಶ್ನಿಸುತ್ತಿದ್ದಾರೆ.

  ಹೀಗೂ ಆಗಿರಬಹುದು

  ಹೀಗೂ ಆಗಿರಬಹುದು

  ಸರಿ, ಈ ಅಭಿಮಾನಿ ಹೇಳುವ ಪ್ರಕಾರ ರಮ್ಯಾ ಅವರು ಬೇರೆ ಕ್ಷೇತ್ರದಲ್ಲೇ ಮತದಾನ ಮಾಡಿದ್ದರೇ, ಈ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತು. ರಮ್ಯಾ ಮತದಾನ ಮಾಡೇ ಇಲ್ಲ ಎಂದು ಇಷ್ಟು ದೊಡ್ಡ ಮಟ್ಟದಲ್ಲಿ ಟೀಕೆ, ಟಿಪ್ಪಣಿ ಬರುತ್ತಿದ್ದರೂ ಈ ಬಗ್ಗೆ ರಮ್ಯಾ ಅವರು ಯಾಕೆ ಮಾತನಾಡುತ್ತಿಲ್ಲ. ಇದು ಸಹಜವಾಗಿ ಅನುಮಾನ ಮೂಡಿಸುತ್ತದೆ. ಒಂದು ವೇಳೆ ವೋಟ್ ಮಾಡಿದ್ರೆ ಖಂಡಿತಾ ಸ್ಪಷ್ಟನೆ ನೀಡುತ್ತಿದ್ದರೂ, ಅವರು ಮತ ಹಾಕಿಲ್ಲ ಅದಕ್ಕೆ ಸುಮ್ಮನಿದ್ದಾರೆ ಎನ್ನಲಾಗುತ್ತಿದೆ.

  ರಮ್ಯಾ ಹೇಳಿದ್ರೆ ಮಾತ್ರ ನಂಬಿಕೆಗೆ ಅರ್ಹ

  ರಮ್ಯಾ ಹೇಳಿದ್ರೆ ಮಾತ್ರ ನಂಬಿಕೆಗೆ ಅರ್ಹ

  ರಮ್ಯಾ ಮತದಾನದ ಬಗ್ಗೆ ಯಾರೇ ಏನೇ ಹೇಳಿದ್ರು ಅದನ್ನ ನಂಬುವ ಸ್ಥಿತಿಯಲ್ಲಿ ಜನರಿಲ್ಲ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಖುದ್ದು ಸ್ಪಷ್ಟನೆ ನೀಡಬೇಕು. ತಾವು ವೋಟ್ ಮಾಡಿದ್ರಾ, ಮಾಡಿದ್ರು ಎಲ್ಲಿ ಮಾಡಿದ್ರಿ, ಮಂಡ್ಯದಲ್ಲಿ ವೋಟ್ ಯಾಕೆ ಮಾಡಿಲ್ಲ ಎಂಬುದರ ಬಗ್ಗೆ ಮಾಜಿ ಸಂಸದೆ ರಮ್ಯಾ ಹೇಳುವುದರಿಂದ ಮಾತ್ರ ಸತ್ಯಾಸತ್ಯತೆ ತಿಳಿಯಲಿದೆ. ಅಲ್ಲಿಯವರೆಗೂ ರಮ್ಯಾ ವೋಟ್ ಮಾಡಿಲ್ಲ ಎಂದೇ ಅಂದುಕೊಳ್ಳಬೇಕಿದೆ.

  English summary
  Some fans argue that Ramya has voted in lok sabha election 2019. but she does not clarified about this debate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X